ಉಪ್ಪಿನಂಗಡಿ (www.vknews.in) ; ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಎಸ್ಡಿಎಂಸಿ ಯು ಸೆಪ್ಟೆಂಬರ್ 01 ರಂದು ಶಾಲೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಇರುವ ಮರದ ಗೆಲ್ಲುಗಳನ್ನು ತೆರವುಗೊಳಿಸಲು ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡವನ್ನು ಕಳುಹಿಸಿ ಕೊಡುವಂತೆ ಉಪ್ಪಿನಂಗಡಿ ಉಪ ತಹಸೀಲ್ದಾರ್ ರವರಿಗೆಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ರವರು ಸೂಚನೆಯಂತೆ ಇಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ 08 ಗೃಹರಕ್ಷಕರು ಉಪ್ಪಿನಂಗಡಿ ಮಾದರಿ ಶಾಲೆಯ ಬಿಸಿಯೂಟದ ಮೇಲ್ಚಾವಣಿ ಮೇಲಿರುವ ನೀರಿನ ಟ್ಯಾಂಕ್ ಬಳಿ ಇದ್ದ ಅಪಾಯಕಾರಿ ಮರದ ಗೆಲ್ಲುಗಳನ್ನು ಹಾಗೂ ಉಪ್ಪಿನಂಗಡಿ ಮಾದರಿ ಶಾಲೆಯ LKG-UKG ಶಾಲೆಯ ಅಂಚಿಗೆ ಅಪಾಮಕಾರಿ ಬಾಗಿಕೊಂಡಿದ್ದ ಮರದ ಗೆಲ್ಲುಗಳನ್ನು ಗೃಹರಕ್ಷಕ ಪ್ರವಾಹ ರಕ್ಷಣಾ ಸಿಬ್ಬಂದಿ ವಸಂತರವರು ಮರಕ್ಕೆ ಹತ್ತಿ ಹಗ್ಗದ ಸಹಾಯದಿಂದ ಗೆಲ್ಲುಗಳನ್ನು ಇಳಿಸಿ ಶಾಲೆಗೆ ಯಾವುದೇ ಹಾನಿಯಾಗದಂತೆ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಲೈನ್ ಮೇನ್ ಹನುಮಂತು, ಉಪ್ಪಿನಂಗಡಿ ಗೃಹರಕ್ಷಕ ಪ್ರವಾಹ ರಕ್ಷಣಾ ತಂಡದ ಮುಖ್ಯಸ್ಥ ದಿನೇಶ್.ಬಿ,ASLಜನಾರ್ದನ ಆಚಾರ್ಯ,ವಸಂತ.ಕೆ,ಡೀಕಯ್ಯ.ಎ, ಸಮದ್, ಶಿವಪ್ರಸಾದ್,ಸ್ಥಳದಲ್ಲಿದ್ದು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.