(www.vknews.in) : ತನ್ನ ತಂದೆಯೊಂದಿಗೆ ಸೂಪರ್ ಮಾರ್ಕೆಟ್ಗೆ ಬಂದಿದ್ದ ನಾಲ್ಕು ವರ್ಷದ ಪುಟ್ಟ ಮಗು ಚಾಕೊಲೇಟ್ ತೆಗೆಯಲು ಫ್ರಿಡ್ಜ್ ತೆರೆಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ನಿಜಾಮಾಬಾದ್ ನ ನಂದಿ ಪೇಟೆಯ ಎನ್ ಸೂಪರ್ ಮಾರ್ಕೆಟ್ ನಲ್ಲಿ ಈ ದಾರುಣ ಘಟನೆ ನಡೆದಿದೆ. ನಂದಿಪೇಟೆ ಮೂಲದ ರಾಜಶೇಖರ್ ಅವರ ಪುತ್ರಿ ರುಷಿತಾ (4) ಮೃತಪಟ್ಟ ಮಗು.
ಮಗು ತನ್ನ ತಂದೆಯೊಂದಿಗೆ ದಿನಸಿ ಖರೀದಿಸಲು ಬಂದಿದ್ದು, ಚಾಕಲೇಟ್ ನೋಡಿ ಅದನ್ನು ತೆಗೆಯಲು ಫ್ರಿಡ್ಜ್ ತೆರೆಯಲು ಯತ್ನಿಸಿದ್ದಾರೆ. ಅವರ ಜೀವ ಉಳಿಸಲು ಪ್ರಯತ್ನಗಳು ನಡೆದರೂ ಪ್ರಯೋಜನವಾಗಲಿಲ್ಲ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರಸಾರವಾಗುತ್ತಿದೆ.
https://twitter.com/TeluguScribe/status/1708799694162530644
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.