ಜೆಡ್ಡಾ(www.vknews.in): : ಸೌದಿಯಲ್ಲಿ ಇಕಾಮಾ, ಕಾರ್ಮಿಕ ಮತ್ತು ಗಡಿ ಕಾನೂನುಗಳನ್ನು ಉಲ್ಲಂಘಿಸುವವರನ್ನು ಹಿಡಿಯಲು ಸೌದಿ ಆಂತರಿಕ ಸಚಿವಾಲಯವು ತಪಾಸಣೆಯನ್ನು ಮುಂದುವರೆಸಿದೆ. ಇತ್ತೀಚಿನ ವರದಿಯ ಪ್ರಕಾರ, ಕಳೆದ ಒಂದು ವಾರದಲ್ಲಿ 17,896 ಕಾನೂನು ಉಲ್ಲಂಘಿಸಿದವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ 10,874 ಮಂದಿ ಇಕಾಮಾ ಕಾನೂನು ಉಲ್ಲಂಘಿಸಿದರೆ, 2899 ಕಾರ್ಮಿಕ ಕಾನೂನು ಉಲ್ಲಂಘಿಸಿದವರು ಮತ್ತು 4123 ಗಡಿ ಕಾನೂನನ್ನು ಉಲ್ಲಂಘಿಸಿದ್ದಾರೆ.
ಸೌದಿ ಅರೇಬಿಯಾಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 937 ಮಂದಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ 29% ಯೆಮೆನಿಗಳು, 69% ಇಥಿಯೋಪಿಯನ್ ಮತ್ತು 2% ಇತರ ದೇಶಗಳಿಂದ ಬಂದವರು.
ಅಕ್ರಮವಾಗಿ ಸೌದಿ ಅರೇಬಿಯಾ ತೊರೆಯಲು ಯತ್ನಿಸಿದ 48 ಮಂದಿ ಹಾಗೂ ಕಾನೂನು ಉಲ್ಲಂಘಿಸುವವರಿಗೆ ಆಶ್ರಯ ನೀಡಿದ 7 ಮಂದಿ ಬಂಧಿತರಲ್ಲಿ ಸೇರಿದ್ದಾರೆ.
ಕಳೆದ ಒಂದು ವಾರದಲ್ಲಿ 10,096 ಜನರನ್ನು ಅಕ್ರಮವಾಗಿ ದೇಶದಿಂದ ಹೊರಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.