(www.vknews. in) ; ಕಾಂಗ್ರೆಸ್ ಪಕ್ಷದಿಂದ ನಿಗಮ ಮತ್ತು ಸರಕಾರಿ ಸ್ಥಾನಮಾನ ನೀಡುವಿಕೆಯಲ್ಲಿ, ಮುಸಲ್ಮಾನರ ಕಡೆಗಣನೆಯಿಂದ ಬೇಸತ್ತ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಪೋಟ.ಇದು ಕಾಂಗ್ರೆಸ್ ಪಕ್ಷಕ್ಕೆ ಒಂದು ಎಚ್ಚರಿಕೆ ಸಂದೇಶವಾಗಲಿ.
ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸಲ್ಮಾನರು ಸರಕಾರದಿಂದ ನೇಮಿಸಲ್ಪಡುವ,ನಿಗಮ ಮತ್ತು ಇತರ ಸರಕಾರಿ ಪ್ರಾತಿನಿಧ್ಯದ ನೇಮಕಾತಿಯಲ್ಲಿ ಅವಕಾಶ ವಂಚಿತರಾಗಿದ್ದು, ಇದನ್ನು ಸರಿಪಡಿಸಬೇಕಾದ ಪಕ್ಷದ ನಾಯಕರು ಅಸಡ್ಡೆ ವಹಿಸಿದ ಪರಿಣಾಮ, ಕಡಬದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಅಸಮಾಧಾನ ತೋಟಗೊಂಡಿದೆ. ನೈಜವಾಗಿ ಇದು ಸಕಾಲಿಕವಾಗಿದೆ. ಯಾಕೆಂದರೆ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ಪಡೆಯಬೇಕಾದಂತಹ ಹಲವಾರು ಕಾಂಗ್ರೆಸ್ಸಿನ ಮುಸಲ್ಮಾನ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸಲ್ಮಾನರಿಗೆ ಪಕ್ಷವು ಅಲ್ಪಸಂಖ್ಯಾತ ಘಟಕಕ್ಕೆ ಮಾತ್ರ ಪದಾಧಿಕಾರಿಗಳಿಗೆ ನೇಮಕ ಮಾಡುವುದು ಹೊರತು ಕಾಂಗ್ರೆಸ್ ಉನ್ನತ ಸಮಿತಿಯಲ್ಲಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವ ಪಕ್ಷಕ್ಕೆ ಬೇಕಾಗಿ ಅಹೋರಾತ್ರಿ ದುಡಿಯುತ್ತಿರುವ ಎಂಎಸ್ ಮೊಹಮ್ಮದ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ,ಜನತಾ ಮುಸ್ತಫಾ ಸುಳ್ಯ, ಎಚ್ ಮೊಹಮ್ಮದ್ ಅಲಿ ಪುತ್ತೂರು,ಮೊದಲಾದ ನಾಯಕರುಗಳಿಗೆ ಈ ಬಾರಿ ಉನ್ನತ ಸ್ಥಾನಮಾನದ ನೀಡುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹಾಗೆಯೇ ಉಳಿಯಿತು. ಕಡಬ ತಾಲೂಕು ಮಟ್ಟದ ಸಮಿತಿಗಳಲ್ಲಿ, ಅದರಲ್ಲೂ ಕಾಂಗ್ರೆಸ್ ಸರಕಾರದ ಬಹು ನಿರೀಕ್ಷಿತ ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರದ ಅಶ್ರಫ್ ಶೇಡಿಗುಂಡಿ, ಹನೀಫ್ ಕಡಬ,ಫಜಲ್ ಕೋಡಿಂಬಾಳ, ಶರೀಫ್ ಕಡಬ ಮೊದಲಾದ ನಾಯಕರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಇದು ಸಹಜವಾಗಿ ಕಡಬದಲ್ಲಿ ಆಕ್ರೋಶಕ್ಕೆ ಕಾರಣವಾದ ಸಂಗತಿಗಳು.
ದ.ಕ ಜಿಲ್ಲೆಯಲ್ಲಿ ಪ್ರತಿ ಬಾರಿ ಜಾತಿ ರಾಜಕೀಯದ ಲೆಕ್ಕಾಚಾರಗಳು ನಡೆಯುತ್ತಿದೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿ ಬಾರಿಯೂ ತಪ್ಪದೇ ಮತ ನೀಡುತ್ತಿರುವ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಇನ್ನೂ ಕೂಡ ನಡೆಯುತ್ತಿಲ್ಲ. ಪಕ್ಷದಿಂದ ಸ್ಥಾನಮಾನ ನೀಡುವಾಗ ಜಾತಿವಾರು ಪ್ರಾತಿನಿಧ್ಯದ ಮಾನದಂಡವನ್ನು ಮಾಡುತ್ತಿದ್ದಾರೆ ವಿನಹ ಆ ಮಾನದಂಡದಿಂದ ಪ್ರಮುಖ ಸ್ಥಾನಮಾನ ಪಡೆದವರಿಂದ ಪಕ್ಷಕ್ಕೆ ಎಲ್ಲಷ್ಟು ಲಾಭವಾಗಿಲ್ಲ ಹೀಗಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಸದಾ ಋಣಿಯಾಗಿರುವ ಅಲ್ಪಸಂಖ್ಯಾತರ ಕಡೆಗಣನೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಿ ದ್ವನಿಸಿದರೆ ಯಾವುದೇ ಆಶ್ಚರ್ಯವಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.