(www.vknews. in); ಅವರು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್,ಇದರ ಮಹಾಸಭೆಯ ಅದ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ, ಹಿಂದಿನ ಕೊರತೆಗಳನ್ನು ಮುಂದಿನ ಪೀಳಿಗೆಗೆ ನಮಗರಿಯದೆ ಹಸ್ತಾಂತರವಾಗುವುದನ್ನು ಮನಗಂಡು ಯುವಕರು ಕ್ರಿಯಾಶೀಲರಾಗಬೇಕು, ಮುಂದಿನ ಪೀಳಿಗೆಗೆ ಅತ್ಯುತ್ತಮ ಶಿಕ್ಷಣ ನೀಡುವುದರ ಮೂಲಕ ಸಮಾಜವನ್ನೂ ಸಮುದಾಯವನ್ನೂ ಮೇಲೆತ್ತಿ ನಿಲ್ಲಿಸಲು ಇಂದಿನ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದರು.
ಡಿ.ಕೆ.ಎಸ್.ಸಿ ಇದರ ಮಹಾಸಭೆಯು ಇತ್ತೀಚೆಗೆ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ನಡೆಯಿತು,ಮೂಳೂರಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ಒಮಾನ್ ರಾಷ್ಟ್ರೀಯ ಸಮಿತಿಯ ಈ ಮಹಾಸಭೆಯಲ್ಲಿ ಸಂಸ್ಥೆಯ ಹಿರಿಯರೂ ಗೌರವಾನ್ವಿತರೂ ಆದ ಹಾಜಿ ಹಮೀದ್ ಪಡೀಲ್ ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಸಂಸ್ಥೆಯ ಸಂಚಾಲಕರಾದ ಉಮರ್ ಫಾರೂಕ್ ಸಖಾಫಿಯವರು ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಶಿಹಾಬುದ್ದೀನ್ ಕಿರಾಅತ್ ಪಠಿಸಿದರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಿದಿನ್ ಪಡುಬಿದ್ರಿ ಲೆಕ್ಕಪತ್ರ ಮಂಡಿಸಿದರು,
ಚುಣಾವಣಾಧಿಕಾರಿಯಾಗಿ ಮುಹ್ಯಿದ್ದೀನ್ ಸುನ್ನತ್ ಕೆರೆ ಮತ್ತು ಅಲ್ತಾಫ್ ಬೋಳಾರ್ ಮುಂದಿನ 2024/25 ರ ಸಾಲಿನ ನೂತನ ಸಾರಥಿಗಳ ಆಯ್ಕೆಯನ್ನು ನಡೆಸಿಕೊಟ್ಟರು, ಮತ್ತೊಮ್ಮೆ ಅವಿರೋಧವಾಗಿ ಮೋನಬ್ಬ ಅಬ್ದುಲ್ ರಹಿಮಾನ್ ಅದ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಮೊಹಿದಿನ್ ಪಡುಬಿದ್ರಿ ಮುಂದುವರಿದರು, ಉಪಾದ್ಯಕ್ಷರಾಗಿ ಅಬ್ದುಲ್ ಲತೀಫ್ ಮಂಜೇಶ್ವರ ಮತ್ತು ಅಲ್ತಾಫ್ ಬೋಳಾರ್, ಜೊತೆ ಕಾರ್ಯಗದರ್ಶಿಗಳಾಗಿ ಮುಹ್ಯುದ್ದೀನ್ ಸುನ್ನತೆ ಕೆರೆ ಮತ್ತು ನಿಯಾಝ್ ಪಡೀಲ್ ಹಾಗೂ ಇನ್ನಿತರ ಪದಾಧಿಕಾರಿಗಳ ಆಯ್ಕೆ ನಡೆಯಿತು,
ಅಯ್ಯೂಬ್ ಕೋಡಿ, ಇಬ್ರಾಹಿಂ ಆತ್ರಾಡಿ, ಆರೀಫ್ ಕೋಡಿ ಮುಂದಿನ ದಿನಗಳ ಚಟುವಟಿಕೆಗಳಿಗಾಗಿ ಸಲಹೆಗಳನ್ನು ನೀಡಿದರು, ಯೂತ್ ವಿಂಗ್ ಅದ್ಯಕ್ಷ ನೂರ್ ಪಡುಬಿದ್ರಿ ಸ್ವಾಗತಿಸಿದರೆ, ಆಸೀಫ್ ಧನ್ಯವಾದಗೈದರು, ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು,
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, -ಒಮಾನ್-
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.