(www.vknews. in) ; ಯೋಜಿತ ಟೀಂ ವರ್ಕ್, ಪರಿಣಾಮದ ಬಗ್ಗೆ ಯಾವುದೇ ಭಯ ಇಲ್ಲದ ಕಾರ್ಯತಂತ್ರ. ಮುಸ್ಲಿಮ್ ಹೆಸರಿನ ವ್ಯಕ್ತಿಯ ಅಪರಾಧವನ್ನು, ಮುಸ್ಲಿಮರ ಭಾಗದ ಸಣ್ಣ ತಪ್ಪುಗಳನ್ನು ಗುರುತಿಸುವ ಅದನ್ನು ಸಮಾಜದ ದೊಡ್ಡ ಅಪಾಯವೆಂದು ಬಿಂಬಿಸುವ ಟೀಂ ವರ್ಕ್. ಮೊದಲಿಗೆ ನಮಾಝ್ ನ ವಿಡಿಯೋ ಬಂತು, ಅದನ್ನು ಟೀವಿ ಮಾದ್ಯಮಗಳು ರಾಜ್ಯಕ್ಕೆ ಎರಗಿದ ಮಹಾ ಅಪಾಯದಂತೆ ಬಿಂಭಿಸಿ ವರದಿ ಮಾಡುತ್ತದೆ. ಅದಕ್ಕೆ ಹಿಂದು ಸಂಘಟನೆಗಳು ಪ್ರತಿಭಟನೆ ಮಾಡುತ್ತದೆ.
ಅನಂತರ ಪೊಲೀಸರು ನಮಾಝ್ ಮಾಡುವ ಯುವಕರನ್ನು ಕ್ರಿಮಿನಲ್ ಕೂಟವೆಂದು, ಕೋಮುಗಲಭೆ ಪ್ರಚೋದಿಸಲು ಯತ್ನವೆಂದು ಎಫ್.ಐ.ಆರ್ ದಾಖಲು ಮಾಡುತ್ತದೆ. ಮುಸ್ಲಿಮರು ಕಾಂಗ್ರೆಸ್ಸ್ ಸರಕಾರದ ವಿರುದ್ದ ತಿರುಗುತ್ತಾರೆ. ಮುಸ್ಲಿಮರಿಗೆ ಸಹಕರಿಸಿದರೆ ಮಾದ್ಯಮಗಳು, ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ಎಲ್ಲರೂ ಟೀಂ ವರ್ಕ್ ಮಾಡಿ ಕಾಂಗ್ರೆಸ್ ಮೇಲೆ ಮುಗಿಬೀಳುತ್ತದೆ. ಕಾಂಗ್ರೆಸ್ಸ್ ಮುಸ್ಲಿಮರ ತಪ್ಪುಗಳಿಗೂ ಸಹಕರಿಸುತ್ತಿದೆ ಎಂದು ಬೊಬ್ಬೆ ಹೊಡೆದು ಮತ್ತೆ ಅದೇ ಟೀಂ ವರ್ಕ್ ನಲ್ಲಿ ಕೆಲಸ ಮಾಡುತ್ತದೆ.
ಮುಸ್ಲಿಮರು ಇಲ್ಲಿ ದಾಳ ಮಾತ್ರ. ಅವರ ಉದ್ದೇಶ ಕಾಂಗ್ರೆಸ್ಸ್ ಪಕ್ಷವನ್ನು ಹಿಂದು ವಿರೋಧಿ ಮಾಡುವುದು. ಅದಕ್ಕಾಗಿ ಮುಸ್ಲಿಮರನ್ನು ಅವರು ಗುರಾಣಿ ಮಾಡುತ್ತಾರೆ. ಈಗ ಕಾಂಗ್ರೆಸ್ಸ್ ಸರಕಾರವೇ ಕೇಸು ವಾಪಾಸು ಪಡೆಯಲು ಒತ್ತಡ ಹಾಕಿದೆ, ಪೊಲೀಸರಿಗೆ ಈ ಸರಕಾರದ ಕೆಳಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಬಿಜೆಪಿ ನಾಳೆಯಿಂದ ಬೊಬ್ಬೆ ಹೊಡೆಯುತ್ತದೆ. ಮಾದ್ಯಮಗಳು ಇದನ್ನು ಹೌದಲ್ಲವೇ ಎಂಬುವಂತೆ ಜನರನ್ನು ನಂಭಿಸುತ್ತದೆ…
ಪೊಲೀಸರು ನ್ಯಾಯ ಪಾಲಿಸಿದ್ದು, ಅಧಿಕಾರ ಪ್ರಯೋಗಿಸಿದ್ದು ಹೇಗೆ ಎನ್ನುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ, ಪ್ರಥಮ ಬಾರಿಗೆ ಟೀಂ ವರ್ಕ್ ವಿಫಲವಾಗಿದೆ. ಅದಕ್ಕೆ ಕಾರಣ ಪೊಲೀಸರು ಎಫ್.ಐ.ಆರ್ ನಲ್ಲಿ ಮಾಡಿದ ತಪ್ಪುಗಳು. ಸಾಮಾನ್ಯ ಹಿಂದುವಿಗೂ ಗೊತ್ತಿದೆ, ಶುಕ್ರವಾರ ಮುಸ್ಲಿಮರಿಗೆ ನಮಾಝ್ ಖಡ್ಡಾಯ ಎಂದು. ಹಿಂದುಗಳೂ ಶುಕ್ರವಾರ ನಮಾಝ್ ನ್ನು ಬಹಳ ಗೌರವಿಸುತ್ತಾರೆ.
ಹೀಗಿರುವಾಗ ಎಫ್.ಐ.ಆರ್ ನಲ್ಲಿ ಕ್ರಿಮಿನಲ್ ಸಂಚಿನ ಕೂಟ, ಕೋಮು ಗಲಭೆ ಪ್ರಚೋದಿಸಲು ತಂಡ ಕಟ್ಟಿದ್ದು ಎನ್ನುವ ಸೆಕ್ಷನ್ ಪೊಲೀಸರು ಹಾಕಿದ್ದು ಹಿಂದೂಗಳಲ್ಲೂ ಪೊಲೀಸರ ಮೇಲೆ ಜಿಗುಪ್ಸೆ ಮೂಡಿಸಿದೆ. ಈ ರೀತಿಯಲ್ಲಿ ಅನ್ಯಾಯ ಮಾಡುವುದು ಸರಿಯಲ್ಲಾ ಎಂದು ಹಿಂದುಗಳೂ ಹೇಳುತ್ತಿರುವುದು ಕೇಳಿಸುತ್ತಿದೆ. ನಮಾಝ್ ಮನ್ಪುನ ಕ್ರಿಮಿನಲ್ ಕೂಟ ಎಂಚ ಆಪುನು ಎಂದು ಕೇಳುತ್ತಿದ್ದಾರೆ. ಒಂದು ಸಮುದಾಯದ ಐಡೆಂಟಿಟಿಯು ಇನ್ನೊಂದು ಸಮುದಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ. ಅನ್ಯೂನ್ಯತೆ ಹೇಗೆ ಸೃಷ್ಠಿಸುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಅದಕ್ಕಾಗಿಯೇ ನಾವು ಉಲೆಮಾಗಳು ನೆಲದಸಂಸ್ಕೃತಿಗೆ ಗೌರವ ಕೊಡಿ ಎನ್ನುವುದು. ಈಗ ನಾವು ಚೌತಿಯ ಗಣೇಶ, ಜಾತ್ರೆ, ಉತ್ಸವ, ಉರೂಸ್ ಎಲ್ಲವನ್ನೂ ಪರಸ್ಪರ ಗೌರವಿಸಿ ಆ ಸಂಭ್ರಮವನ್ನು ನಾಡಿನ ಸಂಭ್ರಮವಾಗಿ ಕಾಣಬೇಕು.
ಕರಾವಳಿಯ ಹಿಂದುಗಳು ಶುಕ್ರವಾರದ ನಮಾಝ್ ನ ಬಗ್ಗೆ ಅತ್ಯಂತ ಹೆಚ್ಚು ಗೌರವವುಳ್ಳವರು. ಅವರಿಗೆ ಈ ಬಾರಿ ಮಾದ್ಯಮದ ಸುಳ್ಳುಗಳು ಅರ್ಥವಾಗಿದೆ. ಸಂಘಪರಿವಾರದ ಉದ್ದೇಶಗಳು ಅರಿವಾಗಿದೆ. ಪೊಲೀಸರ ಅನೀತಿಗೆ ಸಾಕ್ಷಿ ಸಿಕ್ಕಿದೆ. ಕಾಂಗ್ರೆಸ್ಸ್ ನ ಸಂದಿಗ್ದ ಪರಿಸ್ಥಿತಿಯು ಅನುಭವಕ್ಕೆ ಬಂದಿದೆ. ಹೀಗಿದ್ದೂ ಅವರು ಮೌನವಾಗಿ ವೀಕ್ಷಕರಾಗಿದ್ದಾರೆ. ಪೊಲೀಸರು ಸುಮೊಟೊ ಕೇಸು ಇಂದು ಹಾಕಿದರೆ ನಾಳೆ ಹಿಂದುಗಳ ಮೆರವಣಿಗೆ, ಮೇಳಗಳು, ಉತ್ಸವಗಳಿಗೂ ಹೀಗೆ ಕೇಸು ಹಾಕಲು ಏಕೆ ಸಾಧ್ಯವಿಲ್ಲಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಅದರೆ, ಅಂತಹ ಸ್ಥಿತಿಯು ಕರಾವಳಿ ಮುಸ್ಲಿಮರು ಬದುಕಿರುವವರೆಗೂ ಬರದು. ಹಿಂದುಗಳ ಉತ್ಸವಗಳು, ಆಚರಣೆಗಳು ಬಹಳ ವಿಜ್ರಂಭಣೆಯಿಂದ ನಡೆಯಬೇಕು. ಅದು ಈ ನಾಡಿನ ಸೊಬಗು, ಸಂಸ್ಕೃತಿ ಎಂದು ಹೇಳುವ ಮುಸ್ಲಿಮರನ್ನು ನೋಡಿದೆವು.
ಈಗ ಸಂಘ ಪರಿವಾರ ಏಕಾಂಗಿಯಾಗಿದೆ. ಇದನ್ನು ದೊಡ್ಡ ಸಂಗತಿ ಮಾಡಿ ಹೀರೋ ಆಗಲು ಹೋದ ಬಜರಂಗಿ ನಾಯಕ ಪಂಪ್ವೆಲ್ ಗೂ ಹಿಂದೂ ನಾಯಕರು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಈ ಎಚ್ಚರಿಕೆ ಕೊಟ್ಟದ್ದು ತಿಳಿಯುತ್ತಿದ್ದಂತೆ ಪೊಲೀಸರು ಪಂಪ್ವೆಲ್ ಮೇಲೂ, ರಿಯಾಝ್ ಎಂಬವರ ಮೇಲೂ ಕೇಸು ದಾಖಲಿಸಿದೆ.
ಶರಣ್ ಪಂಪ್ವೆಲ್ ಮೇಲೆ ಮಾತ್ರವೇ ಕೇಸು ದಾಖಲಿಸಿದರೆ ಸಮಸ್ಯೆ ಎಂದರಿತು. ಎಸ್ಡಿಪಿಐನ ರಿಯಾಝ್ ರ ಮೇಲು ಕೇಸು ಹಾಕಿ ಬ್ಯಾಲನ್ಸ್ ಮಾಡಲಾಯಿತು. ರಿಯಾಝ್ ಕಡಂಬು ಇಲ್ಲಿ ಬಲಿಪಶು. ಇಂದು ಪ್ರತಿಭಟನೆ ನಡೆಯಲಿದೆ. ಇದಕ್ಕೆ ಒಂದು ಕಲ್ಲು ಹೊಡೆದು, ಸಂಘರ್ಷ ಮಾಡಿ, ಪೊಲೀಸ್ ಲಾಠಿ ಚಾರ್ಜ್ ಮಾಡುವ ಅವಕಾಶದ ತಂತ್ರವೂ ನಡೆಯಬಹುದು. ಕಾಂಗ್ರೆಸ್ಸ್ ಸರಕಾರ ಇರುವಾಗ ಇಂತಹ ದುಸ್ಸಾಹಸಕ್ಕೆ ಕೈ ಹಾಕಲು ಇವರಿಗೆ ಧೈರ್ಯ ಸಾಲದು. ಏನೇ ಆಗಲಿ ಕರಾವಳಿ ಹಿಂದುಗಳ ಮುಂದೆ ಎಲ್ಲರೂ ಬೆತ್ತಳಾದರು. ಹಿಂದುಗಳಿಗೆ ದನ್ಯವಾದಗಳು ಅರ್ಪಿಸಬೇಕು.
ಎಸ್ ಬಿ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.