ಕೋಲಾರ (ವಿಶ್ವಕನ್ನಡಿಗ ನ್ಯೂಸ್ ): ಜುಲೈ 1ರ ಪತ್ರಿಕಾ ದಿನಾಚರಣೆ ಅಂಗವಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಒಂದು ದಿನದ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ. ಪುರುಷ ಪತ್ರಕರ್ತರಿಗೆ ಕ್ರಿಕೆಟ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ ಹಾಗೂ ಪತ್ರಕರ್ತರ ಕುಟುಂಬದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆ, ಮಡಕೆಯಲ್ಲಿ ಚೆಂಡು ಹಾಕುವ ಸ್ಪರ್ಧೆ ಮತ್ತು ಬಾಯಿಯಲ್ಲಿ ಚಮಚ ಇಟ್ಟುಕೊಂಡು ಅದರಲ್ಲಿ ನಿಂಬೆಹಣ್ಣು ಇಟ್ಟು ನಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತರು ಪಟ್ಟಿಯನ್ನು ಜಿಲ್ಲೆಯ ಆಯಾ ತಾಲೂಕು ಸಂಘಗಳು ಸಿದ್ಧಪಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಜೂನ್ 10ರ ಬುಧವಾರದ ಒಳಗಾಗಿ ರವಾನಿಸಬೇಕು.
ಸ್ಪರ್ಧೆಗಳನ್ನು ಇದೇ 2024ರ ಜೂನ್ 16 ಇಲ್ಲವೆ 23 ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಜಿಲ್ಲಾ ಸಂಘಕ್ಕೆ ಸಲ್ಲಿಸಲು ಪಟ್ಟಿಯನ್ನು ಕ್ರೀಡಾ ಸಮಿತಿಯ ಸಮನ್ವಯ ಸಂಪರ್ಕ ಸದಸ್ಯ ಬಿ.ಎಸ್.ಗಂಗಾಧರ್ ವ್ಯಾಟ್ಸಾಫ್ ಸಂಖ್ಯೆ 9110830279 ನೇರವಾಗಿದಾಖಲೆಗಳನ್ನು ರವಾನಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.