ಜೆದ್ದಾ(www.vknews.in): ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಇಂದು ದುಲ್ ಹಿಜ್ದಾ ಮಾಸದ ಚಂದ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಯಾರಾದರೂ ಚಂದ್ರದರ್ಶನವನ್ನು ವೀಕ್ಷಿಸಿದಲ್ಲಿ ಎರಡು ಸಾಕ್ಷಿ ಸಮೇತ ಸಮೀಪದ ಕೋರ್ಟಿನಲ್ಲಿ ದೃಢಪಡಿಸಬೇಕೆಂದು ಕೋರಲಾಗಿದೆ. ಒಂದು ವೇಳೆ ಇಂದು ಚಂದ್ರದರ್ಶವಾದಲ್ಲಿ ಗಲ್ಫ್ ರಾಷ್ಟ್ರದಾದ್ಯಂತ ಜೂನ್ 15 ರಂದು ಅರಫಾ ದಿನವಾಗಲಿದ್ದು, ಜೂನ್ 16ಕ್ಕೆ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ. ಇಂದು ಚಂದ್ರದರ್ಶನವಾಗದಿದ್ದಲ್ಲಿ ಜೂನ್ 16ಕ್ಕೆ ಅರಫಾ ದಿನವಾಗಲಿದ್ದು, ಜೂನ್ 17ರಂದು ಬಕ್ರೀದ್ ಆಚರಿಸಲಾಗುವುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.