ಮಂಗಳೂರು (www.vknews.in) ; ಮಸೀದಿಗಳನ್ನು ಪರಿಶೀಲಿಸಿದರೆ ಶಸ್ತ್ರಾಸ್ತ್ರಗಳು ಸಿಗಲಿವೆ ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಅವಿವೇಕತನ ಮತ್ತು ಹತಾಶೆಯ ಪರಮಾವಧಿ ಎಂದು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದ್ದಾರೆ.
ಪದೇ ಪದೇ ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡುವ ಬೆಳ್ತಂಗಡಿ ಶಾಸಕರಿಗೆ ಕಾನೂನಿನ ಕುರಿತು ಸಾಮಾನ್ಯ ಅರಿವು ಕೂಡ ಇಲ್ಲ. ಗೊಂದಲದ ಹೇಳಿಕೆಗಳನ್ನು ನೀಡಿ ಸಮಾಜವನ್ನು ಹಿಂದೂ ಮುಸ್ಲಿಂ ಎಂದು ಒಡೆಯುವುದು ಜನಪ್ರತಿನಿಧಿಗಳೆನಿಸಿಕೊಂಡವರಿಗೆ ಭೂಷಣವಲ್ಲ. ಇಷ್ಟೆಲ್ಲಾ ಘಟನೆಗಳು ನಡೆದರೂ ಕೂಡ ಹಿಂದೆ ಒಂದು ಪಕ್ಷಕ್ಕೆ ಮತ ನೀಡಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದವರು ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.
ಸಮುದಾಯಕ್ಕೆ ಅನ್ಯಾಯವಾದಾಗ ಮೌನ ವಹಿಸುವವರಿಂದ ಸಮುದಾಯಕ್ಕಾಗಲೀ ಸಮಾಜಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ. ನಾಡಿನ ಸ್ವಾಸ್ಥ್ಯ ಕೆಡಿಸುವ ದುಷ್ಟ ಶಕ್ತಿಗಳು ಯಾರೇ ಆದರೂ ಅವರನ್ನು ಕಾನೂನಿನ ಮುಂದೆ ತಂದು ಜನರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವ ಬರುವಂತೆ ಮಾಡಬೇಕಾದದ್ದು ಜನಪ್ರಿತಿನಿಧಿಗಳು ಮತ್ತು ಸರಕಾರದ ಕರ್ತವ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.