(www.vknews. in) ; ಕಾರ್ಯಕ್ರಮವನ್ನು 10.06.2024ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿ ಸರ್ಫಾಝ್ ಜೆ ಹಾಸಿ೦ ಮನಶಾಸ್ತ್ರಜ್ಞ ಹಾಗು ಪ್ರಾಂಶುಪಾಲರು ಪಿಎ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಇವರು ಶಿಕ್ಷಣದ ಮಹತ್ವದ ಬಗ್ಗೆ ಹೇಳುತ್ತಾ, “ಯಾವುದೇ ಸಾಧನೆಗೆ ನಿರ್ಧಿಷ್ಟ ಗುರಿ ಮುಖ್ಯ ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಗುರಿಯೊಂದಿಗೆ ಯಶಸ್ಸನ್ನು ಗಳಿಸಬೇಕು ” ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಸಂಚಾಲಕರು,ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇವರು ಮಾತನಾಡುತ್ತಾ “ಪ್ರತಿಯೊಬ್ಬ ವಿದ್ಯಾರ್ಥಿಯು ಏನಾದರೂ ಒಂದು ಸಾಧನೆ ಮಾಡಿ ಸಮಾಜದಲ್ಲಿ ತನ್ನನು ಗುರುತಿಸಿಕೊಂಡು ನಿಷ್ಠಾವಂತ ಪ್ರಜೆಯಾಗಬೇಕು” ಎಂದರು.
ಪ್ರಾಂಶುಪಾಲೆ ಶಾಹಿದಾ ರವರು ಕಾಲೇಜಿನ ಶಿಸ್ತು ಹಾಗೂ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಣಚೂರು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಇಕ್ಬಾಲ್ ಅಹಮದ್ ಯು ಟಿ, ಕಣಚೂರು ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಕ್ಯಾರನ್ ಡಿಸೋಜ, ಮತ್ತು ಪ್ರೈಮರಿ ಸ್ಕೂಲಿನ ಪ್ರಾಂಶುಪಾಲರಾದ ಲಿನೆಟ್ ಡಿಸೋಜಾ ಹಾಗೂ ಕಣಚೂರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಕಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕಿಯಾದ ರಶ್ಮಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶ್ರೀಮತಿ ಪ್ರಮಿತಾ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ಜಯಶ್ರೀ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.