ದೋಹಾ (www.vknews.in) |ಕತಾರ್ ನಲ್ಲಿ ಕೇರಳದ ತ್ರಿಶೂರ್ ಮೂಲದ ಇಬ್ಬರು ಯುವಕರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಮುಹಮ್ಮದ್ ಹಬೀಲ್ (21) ಮತ್ತು ಮಚಿಂಗಲ್ ಮುಹಮ್ಮದ್ ತಯ್ಯೀಬ್ (21) ಎಂದು ಗುರುತಿಸಲಾಗಿದೆ.
ಅವರು ಪ್ರಯಾಣಿಸುತ್ತಿದ್ದ ವಾಹನವು ಮಾಲ್ ಆಫ್ ಕತಾರ್ ಬಳಿ ಪಲ್ಟಿಯಾದಾಗ ಈ ಅಪಘಾತ ಸಂಭವಿಸಿದೆ. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೊಹಮ್ಮದ್ ತಯ್ಯೀಬ್ ಕತಾರ್ ಮಿಲಿಟರಿ ಉದ್ಯೋಗಿಯಾಗಿದ್ದು, ಮೊಹಮ್ಮದ್ ಹಬೀಲ್ ದೋಹಾ ವಿಶ್ವವಿದ್ಯಾಲಯದ ವಿದ್ಯಾರ್ಥಿ.
ವಾಹನದಲ್ಲಿದ್ದ ಇತರ ಮೂವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಗಾಯಗಳು ಗಂಭೀರವಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮೊಹಮ್ಮದ್ ತಯ್ಯೀಬ್ ಐಡಿಯಲ್ ಇಂಡಿಯನ್ ಸ್ಕೂಲ್ ಉದ್ಯೋಗಿಗಳಾದ ಹಮ್ಜಾ ಮತ್ತು ರಮ್ಲತ್ ಅವರ ಪುತ್ರ ಮತ್ತು ಮೊಹಮ್ಮದ್ ಹಬೀಲ್ ತ್ರಿಶೂರ್ನ ವಡಕ್ಕಂಚೇರಿಯ ವ್ಯಾಪಾರಿ ಹಮ್ಜಾ ಮತ್ತು ಹಸೀನಾ ಅವರ ಏಕೈಕ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.