(www.vknews.in) ; ಶೈಖುನಾ ತಾಜುಲ್ ಉಲಮಾರ ಪ್ರೀಯ ಪುತ್ರ ನಮ್ಮನ್ನೆಲ್ಲಾ ಅನಾಥವಾಗಿಸಿ ಅಲ್ಲಾಹನೆಡೆಗೆ ಯಾತ್ರೆ ಗೈದ ಒಬ್ಬ ಮಹಾನ್ ಶೈಖುನಾ ಫಝಲ್ ಕೋಯಮ್ಮ ತಂಙಳವರ ಬಗ್ಗೆ ಬರೆಯದೇ ವಿಧಿಯಿಲ್ಲ ಅದೆಷ್ಟೋ ಮೊಹಲ್ಲಾಗಳ ಖಾಝಿ ಆಗಿದ್ದ ತಂಙಳ್ ಮುಸ್ಲಿಂ ಉಮ್ಮತ್ತಿಗಳ ಸರಮಾಳೆ ಪ್ರಶ್ನೆಗಳ ಪಾಲಿಗೆ ಉತ್ತರವಾಗಿದ್ದವರು. ಸೈಯ್ಯದ್ ಕೂರತ್ ತಂಙಳ್ ಸಮಯದ ಅಭಾವವಿದ್ದರೂ ಹಲವು ಸಮಯಗಳನ್ನು ತನ್ನನ್ನು ನಂಬಿ ಬರುವಂತಹ ಅನುಯಾಯಿಗಳಿಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದರು.
ಯಾರಲ್ಲೂ ಕಿಂಚಿತ್ತೂ ಭೇದ ಭಾವವಿಲ್ಲದ ಸೌಮ್ಯ ಸ್ವಭಾವದ ವ್ಯಕ್ತಿತ್ವ ತಮ್ಮ ಮಾತಿನ ಮೂಲಕ ಇಮಾನ್ ಇಸ್ಲಾಂ ಏನೆಂಬುವುದನ್ನು ಜನರೆಡೆಯಲ್ಲಿ ನಿರ್ಭಿತಿಯಿಂದ ಹೇಳುತ್ತಿದ್ದರು ಎಂಥಹ ಸಮಸ್ಯೆಗಳಿಗೂ ಅವರ ಒಂದು ನಗು ಪ್ರತ್ಯುತ್ತರವಾಗಿತ್ತು ದೀನಿ ವಿಷಯಗಳಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಅವರ ಜೀವನ ಶೈಲಿಯು ನಮಗೆಲ್ಲರಿಗೂ ಮಾರ್ಗದರ್ಶನವಾಗಬೇಕಿದೆ. ಅವರು ಇಲ್ಲ ಎನ್ನುವ ಕೊರಗು ನಮ್ಮ ಮನಸ್ಸಿನ ಅಂತರಾಳಗಲ್ಲಿ. ಕೊರಗುತ್ತಿದೆ ಕೊನೆಯದಾಗಿ ಅವರ ಬಗ್ಗೆ ಬರೆಯಲು ಪದಗಳೇ ಸಿಗುತ್ತಿಲ್ಲ ಅಲ್ಲಾಹನು ನಾಳೆ ಪಾರತ್ರೀಕ ಲೋಕದಲ್ಲಿ ಹಬೀಬ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಇವಸ್ವಲ್ಲಮರೊಂದಿಗೆ ಅವರ ಪಾರಂಪರ್ಯದಿಂದ ಬಂದ ನಮ್ಮೆಲ್ಲರ ಪ್ರಿಯ ಶೈಖುನಾ ಕೂರತ್ ತಂಙಳ್ ರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಸೇರಿಸಿ ಇಲಾಹನಾದ ಅಲ್ಲಾಹನು ಅನುಗ್ರಹಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.