(www.vknews.in) ; ಚಿಕನ್ ರೇಟ್ ದುಬಾರಿ ಇದ್ದಾಗ ಇಲ್ಲದ ತಲೆ ಬಿಸಿ ಸ್ವಲ್ಪ ಕಡಿಮೆ ಆದಾಗ ವಸ್ವಾಸ್ ಶುರುವಾಗುತ್ತದೆ,ಯಾರ್ ಯಾರದೋ ನಂಬರ್ ಹಾಕಿ ನಮ್ಮಲ್ಲಿ ಚಿಕನ್ ರೇಟ್ 50 ರೂಪಾಯಿ 60 ರೂಪಾಯಿ ಎಂದು ಬರೆದು ಅಥವಾ ಪೋಸ್ಟರ್ ತಯಾರಿಸಿ ಅದನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗುತ್ತದೆ,ಅದರಲ್ಲಿರುವ ನಂಬರ್ ಯಾವುದೋ ಕೆಲಸ ಮಾಡುವ ಬಡಪಾಯಿಯದ್ದಾಗಿರುತ್ತದೆ, ಕೆಲವು ದಿನಗಳ ಹಿಂದೆ ವಿಟ್ಲದ ಪ್ರಖ್ಯಾತ ಲೇಖಕರೊಬ್ಬರ ನಂಬರ್ ಹಾಕಿ ಕಡಿಮೆ ಬೆಲೆಗೆ ಕೋಳಿ ಇದೆ ಸಂಪರ್ಕಿಸಿ ಎಂದು ಜಾಲತಾಣದಲ್ಲಿ ಹರಡಲಾಗಿತ್ತು, ಇದು ಕಳೆದ ನಾಲ್ಕೈದು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ವಾಡಿಕೆ, ವಾಸ್ತವದಲ್ಲಿ ಕೆಜಿಯಲ್ಲಿ ಇಪ್ಪತ್ತು ರೂಪಾಯಿ ಮಾರ್ಜಿನ್ ಇಡುವ ಕೋಳಿ ಅಂಗಡಿಯವರಿಗೆ ನಿಜವಾಗಿ ಸಿಗುವುದು ಹತ್ತು ರೂಪಾಯಿ ಮಾತ್ರ ಇನ್ನುಳಿದ ಹತ್ತು ರೂಪಾಯಿ ವೈಟ್ಲಾಸ್ಗೆ ಮತ್ತು ಮೈಂಟೇನ್ಗೆ ಹೋಗುತ್ತದೆ, ಅಂದರೆ ಸಣ್ಣ ಅಂಗಡಿಯವರಿಗೆ ದಿನದಲ್ಲಿ 70 ಕೆಜಿ ಚಿಕನ್ ವ್ಯಾಪಾರ ಆದರೂ ಸಿಗುವುದು ಇಡೀ ದಿನ ಕೆಲಸ ಮಾಡಿದ್ದಕ್ಕೆ 700 ರೂಪಾಯಿ ಸಣ್ಣ ಅಂಗಡಿಯವರು ಕೆಲಸಕ್ಕೆ ಜನ ಇಡುವಂತೆ ಇಲ್ಲ, ಸಿಕ್ಕಿದ ಏಳುನೂರು ರೂಪಾಯಿಯಲ್ಲಿ ಕೆಲಸದವನಿಗೆ ಸಂಬಳ ಕೊಡುವುದೋ ಬಾಡಿಗೆ ಅದೂ ಇದೂ ಅಂತ ಇರುವ ಖರ್ಚು ನಿಭಾಯಿಸುವುದಾ..?
ಇಲ್ಲಿ 70 ಕೆಜಿ ಉದಾಹರಣೆಗೆ ನೀಡಿದ್ದೇನೆ ಅಷ್ಟೇ, ಹೆಚ್ಚಿನ ಸಣ್ಣ ಅಂಗಡಿಗಳಲ್ಲಿ ಆದಿತ್ಯವಾರ ಹೊರತುಪಡಿಸಿ ಇತರ ದಿನಗಳಲ್ಲಿ ಇಪ್ಪತ್ತು ಮೂವತ್ತು, ಕೆಜಿ ಹೋಗುವುದೇ ಕಷ್ಟ, ಇಂತಹ ಪರಿಸ್ಥಿತಿ ಇರುವಾಗ ಅದು ಹೇಗೆ ಕಡಿಮೆ ಬೆಲೆಗೆ ಚಿಕನ್ ಮಾರಲು ಸಾಧ್ಯ? ಇನ್ನು ದೊಡ್ಡ ಅಂಗಡಿಗಳಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತದೆ ನಾಲ್ಕೈದು ಜನರು ಕೆಲಸಕ್ಕೆ ಇದ್ದರೆ ದಿನಕ್ಕೆ ಕಡಿಮೆ ಅಂದರೂ 600 ರೂಪಾಯಿ ಒಬ್ಬರಿಗೆ ಕೊಡಲೇಬೇಕು ದಿನವೊಂದಕ್ಕೆ ಮೂರು ಸಾವಿರ ರೂಪಾಯಿ ಸಂಬಳ ಕೊಡಬೇಕೆಂದರೆ ಹತ್ತು ರೂಪಾಯಿ ಲಾಭ ಅಂತ ಸಿಗುವ ಅಂಗಡಿಯಲ್ಲಿ ಎಷ್ಟು ಕೆಜಿ ಚಿಕನ್ ಮಾರಾಟ ಮಾಡಬೇಕು ? ಇತರ ದಿನಗಳಲ್ಲಿ ಅಷ್ಟು ಮಾರಾಟವಾಗುತ್ತದಾ?
ಖಂಡಿತಾ ಇಲ್ಲ,ಇಂತಹ ಪರಿಸ್ಥಿತಿಯಲ್ಲಿ ಅಂಗಡಿ ನಡೆಸುತ್ತಿರುವವರನ್ನು ಇಕ್ಕಟ್ಟಿಗೆ ಸಿಲುಕಿಸಲು ಅಲ್ಲಿ 60 ರೂಪಾಯಿ ಇಲ್ಲಿ 70 ರೂಪಾಯಿ ಎಂದು ಫೇಕ್ ಮೆಸೇಜ್ ಹಾಕಿ ಗ್ರಾಹಕರನ್ನು ಮತ್ತು ಅಂಗಡಿಯವರನ್ನು ನಟಂತಿರುಗಿಸಲು ಕಾಮನ್ಸೆನ್ಸ್ ಇಲ್ಲದ ವಿಕೃತ ಮನಸ್ಸಿನವರು ಮಾಡುವ ಕೃತ್ಯಗಳಿಂದಾಗಿ ಸಮಸ್ಯೆ ಎದುರಿಸುವವರು ನೆಮ್ಮದಿ ಕಳೆದುಕೊಳ್ಳುವವರು ಸಣ್ಣ ಮತ್ತು ಮಧ್ಯಮ ಅಂಗಡಿಯವರು, ಕೋಳಿ ಅಂಗಡಿ ಇಟ್ಟಿರುವ ಶೆರೀಫಾಕ ಹೇಳುತ್ತಾರೆ ಈ ಮದುವೆ ಪಾರ್ಟಿಗಳದ್ದು ದೊಡ್ಡ ತಲೆಕುತ್ತು ಮಾರಾಯಾ ಅವರು ಅದಕ್ಕೂ ಇದಕ್ಕೂ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ದುಂದು ವೆಚ್ಚ ಮಾಡುತ್ತಾರೆ ಚಂದ ಇರುವ ಮದುಮಗಳನ್ನು ಚಂದ ಇಲ್ಲದಂತೆ ಮಾಡಲು ಮೇಕಪ್ ನವರಿಗೆ ಹತ್ತು ಹದಿನೈದು ಸಾವಿರ ಕೊಡುತ್ತಾರೆ ನಾವು ರಾತ್ರಿ ವೇಳೆ ನಿದ್ದೆ ಇಲ್ಲದೆ ಹತ್ತು ರೂಪಾಯಿ ಮಾರ್ಜಿನ್ ಇಟ್ಟು ಮೂರು ಕ್ವಿಂಟಾಲ್ ಚಿಕನ್ ಕಷ್ಟಪಟ್ಟು ಅದರ ಕೆಲಸ ಮಾಡಿ ಕೊಟ್ಟರೆ ಅಲ್ಲಿ ಬಿಲ್ ಮೂವತ್ತು ನಲ್ವತ್ತು ಸಾವಿರ ಆಗ್ತದೆ ಅದರಲ್ಲಿ ನಮ್ಮ ಕೆಲಸದ ಚಾರ್ಜ್ ಮತ್ತು ಲಾಭ ಒಟ್ಟು ಸಿಗುವುದು ಮೂರು ಸಾವಿರ ಮಾತ್ರ ಕೆಲಸದವರ ಸಂಬಳ ಮತ್ತು ಅದರಲ್ಲೂ ವೈಟ್ಲಾಸ್ ಬಂದರೆ ಅದೂ ಸಿಗುವುದಿಲ್ಲ,
ಇವರು ಚೌಕಾಶಿ ಮಾಡಲು ಬಂದು ಕುಳಿತುಕೊಳ್ಳುವುದು ಚಿಕನ್ ಅಂಗಡಿಯಲ್ಲಿ ಮಾತ್ರ ಅಂತ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ,ಏನೇ ಆಗಲಿ ಫೇಕ್ ಮೆಸೇಜ್ ತಯಾರಿಸುವ ವಿಕೃತ ಮನಸ್ಸಿನವರು ಮತ್ತು ಅಲ್ಲಿ ಐದು ರೂಪಾಯಿ ಕಡಿಮೆಗೆ ಸಿಗುತ್ತದೆ ಎಂದ ಮಾತ್ರಕ್ಕೆ ತಮಗೆ ಮನೆ ಬಾಗಿಲಿಗೆ ತಂದುಕೊಡುವ ಅಂಗಡಿಯನ್ನು ಬಿಟ್ಡು ಐವತ್ತು ರೂಪಾಯಿ ಖರ್ಚು ಮಾಡಿ ಹೋಗಿ ಎರಡು ಕೆಜಿ ಚಿಕನ್ ತರುವವರು ಇನ್ನಾದರೂ ಕೂಲಂಕುಷವಾಗಿ ಯೋಚಿಸಿ ಬದಲಾಗಿರಿ.
✍ ಸಲೀಂ ಮಾಣಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.