(www.vknews. in) ಈ ಬಾರಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆಗೆ ಸಿಗಲಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸ್ವತಃ ಸ್ಪೀಕರ್ ಯು.ಟಿ. ಖಾದರ್ ಅವರ ಕ್ಷೇತ್ರದಲ್ಲಿ, ಸರ್ವ ಧರ್ಮದ ಜನರಿಗೂ ಅದರಲ್ಲಿ ಬಡವರ ಏಳಿಗೆಗಾಗಿ ಸದಾ ದುಡಿಯುವ, ಅಪ್ರತಿಮ ಸಮಾಜ ಸೇವಕ, ಹುಟ್ಟು ಹೋರಾಟಗಾರ, ಛಲವಾದಿ, ಸದಾ ಚಟುವಟಿಕೆಯಲ್ಲಿರುವ ಚಲನಶೀಲ ಶಕ್ತಿ, ಬಡವರ ಬಂಧು, ಸಜ್ಜನಿಕೆಯ ಸಾಕಾರ ಮೂರ್ತಿ, ದೀನ ದಲಿತರಿಗೆ ಆಸರೆ, ನಲ್ನುಡಿಯ ಸುಧಾರಕ ನಾವು ಕೊಟ್ಟು ಅದರಿಂದ ಬಡವರು ಪಡುವ ಸಂತೋಷದಲ್ಲಿ ನಾವು ಸುಖ ಪಡಬೇಕು ಎಂದು ಜೀವಿಸಿ ತೋರಿಸಿ ಕೊಟ್ಟ ವ್ಯಕ್ತಿ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ. ನಿಜದಲ್ಲಿ ಅವರನ್ನು ಈ ಬಾರಿ ಸನ್ಮಾನ್ಯ ಸ್ಪೀಕರ್ ಖಾದರ್ ಅವರೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕಿತ್ತು. ಆದರೆ ದುರಷ್ಟಾವತ್ ಖಾದರ್ ಅವರನ್ನು ಮೀರಿ ಜನಪ್ರತಿನಿಧಿಗಳು ಅನ್ಯಾಯವೆಸಗುತ್ತಿದ್ದಾರೆ ಎಂಬುವುದು ವಿಪರ್ಯಾಸ. ಸಾರ್ವಜನಿಕ ರಂಗ ಪ್ರವೇಶ ಮಾಡಿದವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಟೀಕೆಗಳು ಬರುವುದು ಸಹಜ. ಏನೇ ಸತ್ಕಾರ್ಯ ಮಾಡಿದರೂ ಮೊಸರಲ್ಲಿ ಕಲ್ಲು ಹುಡುಕುವುದರಿಂದ ಬರುವ ಟೀಕೆಗಳಿರ ಬಹುವುದು. ಆದರೆ ವಂದನೆಗೆ ಹಿಗ್ಗದ, ನಿಂದನೆಗೆ ಕುಗ್ಗದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯ ಕಾರ್ಯ ಶೈಲಿಯ ಹುರುಪನ್ನು ಇದು ಯಾವುದೂ ಕುಗ್ಗಿಸುವುದಿಲ್ಲ. ತನ್ನನ್ನು ಮೆಚ್ಚದವರ ಮೇಲೆ ಅವರಿಗೆ ಸಿಟ್ಟಿಲ್ಲ. ತನಗೆ ಎದುರಾದವರ ಮೇಲೆ ಹಗೆಯಿಲ್ಲ. ತನಗೆ ಅನ್ಯಾಯ ಎಸಗಿದವರು ಎದುರು ಸಿಕ್ಕಿದಾಗ ಏನೂ ನಡೆದೇ ಇಲ್ಲವೆಂಬಂತೆ ವರ್ತನೆ. ಬಡ ಬಗ್ಗರ , ನಿರಾಶ್ರಿತರ ಬಗ್ಗೆ ಇರುವ ಕಾಳಜಿಯನ್ನು ಪ್ರತ್ಯಕ್ಷವಾಗಿ ನೋಡಬೇಕಾದರೆ, ದಾನಿಗಳಿಂದ ಹಣವನ್ನು ಶೇಖರಿಸಿ ಬಡವರಿಗೆ ನಿರ್ಮಿಸಿ ಕೊಟ್ಟ ವಸತಿ ಸಮೂಹಕ್ಕೆ ಭೇಟಿ ನೀಡಬೇಕು. ಇದು ಫಲಾಪೇಕ್ಷೆ ಇಲ್ಲದ ಒಂದು ಜನತಾ ಸೇವೆಯಾಗಿರುತ್ತದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಅದೆಷ್ಟೋ ಮಂದಿ ಜಾತಿ, ಧರ್ಮ, ಮತ, ಭೇದವನ್ನು ಮರೆತು ನೇರವಾಗಿ ಅವರಿಗೆ ಆರ್ಥಿಕ ನೆರವು ಮತ್ತು ರೇಶನ್ ಕಿಟ್ ಗಳನ್ನು ವಿತರಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ನೀರಿಲ್ಲದೇ ಕಷ್ಟಪಟ್ಟ ಕುಟುಂಬಗಳಿಗೆ, ಮಸೀದಿಗಳಿಗೆ ಬಾವಿ ನಿರ್ಮಿಸಿ ಕೊಟ್ಟಿದ್ದಾರೆ. ಸಂಕಷ್ಟದ ದವಡೆಯಲ್ಲಿ ಬೆಂದು ಬರಡಾದ ಮಂದಿಗೆ ಸಹಾಯಸ್ತ ಚಾಚಿ ಎಲ್ಲಿ ಆಶ್ರಯ ನೀಡಲಾಗುತ್ತಿದೆಯೋ, ದೃಷ್ಟಿ ಇಲ್ಲದೆ ಕಷ್ಟದ ಬದುಕಿನಲ್ಲಿ ಪರದಾಡುತ್ತಿರುವ ನತದೃಷ್ಟರಿಗೆ ಎಲ್ಲಿ ಬೆಳಕನ್ನು ಹರಿಸಲಾಗುತ್ತಿದೆಯೋ, ಹಸಿವಿನಿಂದ ಕಂಗೆಟ್ಟ ಸಹಸ್ರಾರು ಮಂದಿಯನ್ನು ತಬ್ಬಿಕೊಂಡು ಹಸಿದ ಉದರಗಳನ್ನು ಎಲ್ಲಿ ತನಿಸಲಾಗುತ್ತಿದೆಯೋ, ಹರಿವ ಕಣ್ಣೀರನ್ನು ಎಲ್ಲಿ ಒರೆಸಲಾಗುತ್ತಿದೆಯೋ, ಮನೆ, ಮಠ ಇಲ್ಲದವರಿಗೆ ಎಲ್ಲಿ ವಸತಿ ಕಲ್ಪಿಸಲಾಗುತ್ತಿದೆಯೋ, ಅಲ್ಲೆಲ್ಲಾ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯ ಒಂದು ಪಾತ್ರ ಇದ್ದೇ ಇರುತ್ತದೆ. ಯಾವುದೇ ರಾಜಕೀಯ ಅಧಿಕಾರ ಇಲ್ಲದೆ ಗಳಿಕೆಯ ಬಹುಭಾಗವನ್ನು ಸಮಾಜಕ್ಕೆ ಧಾರೆಯೆರೆದು ತನ್ನ ಅಪ್ರತಿಮ ಸೇವಾ ಪೌಡ್ರಮೆಯಿಂದ ಸಾಮಾಜಿಕ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನೇ ವಿನಿಯೋಗಿಸಿಕೊಂಡ ಜಿಲ್ಲೆಯ ಅದ್ವಿತೀಯ ಸಾಧಕರಾಗಿದ್ದಾರೆ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ. ಸಾಮಾಜಿಕ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನೇ ನಿರ್ಮಿಸಿ ಜನಮನವನ್ನು ಬೆಳಗಿ ಬಂದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಇಸ್ಮಾಯಿಲ್ ಶಾಫಿಯವರು ಸೇವೆಗಿಳಿಯದ ಕ್ಷೇತ್ರವೇ ಇಲ್ಲ. ಶಿಕ್ಷಣ ರಂಗದಲ್ಲಿ ಅವರ ಸೇವೆ, ಧನ ಸಹಾಯ, ಪ್ರೋತ್ಸಾಹ ಅಪಾರ. ಮದುವೆ, ಕಷ್ಟ, ಆಸ್ಪತ್ರೆ ಮುಂತಾದ ಸಂಧರ್ಭಗಳಲ್ಲಿಯೂ ಧಾರಾಳ ಸಹಾಯ ಮಾಡಿದ ಶಾಫಿ ಬಬ್ಬುಕಟ್ಟೆ ಅವರನ್ನು ಸ್ವತಃ ಸ್ಪೀಕರ್ ಖಾದರ್ ಬಹಳ ಹತ್ತಿರದಿಂದ ಅರಿತವರಾಗಿದ್ದಾರೆ. ಇದೆಲ್ಲವನ್ನೂ ಅವರಿಗೆ ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ. ಶಾಫಿ ಬಬ್ಬುಕಟ್ಟೆ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೂ ಸ್ವತಃ ಕ್ಷೇತ್ರದ ಶಾಶಕ ಯು.ಟಿ. ಖಾದರ್ ಅವರೇ ಮುಖ್ಯ ಅಥಿತಿ. ಆದುದರಿಂದ ಈ ಬಾರಿಯಾದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವುದು ಸ್ವತಃ ಕ್ಷೇತ್ರದ ಶಾಶಕರೂ ಆದ ಸ್ಪೀಕರ್ ಯು.ಟಿ. ಖಾದರ್ ಅವರ ಭಾದ್ಯತೆಯಾಗಿದೆ. ಏನಿದ್ದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗ ಬೇಕಾದ ವ್ಯಕ್ತಿ ಶಾಫಿ ಬಬ್ಬುಕಟ್ಟೆ ಇದರಿಂದ ವಂಚಿತರಾಗಿದ್ದರೆ. ಪ್ರತೀ ವರ್ಷವೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಅನರ್ಹರನ್ನೇ ಆಯ್ಕೆ ಮಾಡುವುದು ಅತ್ಯಂತ ಖೇದಕರ. ಮಾತ್ರವಲ್ಲ, ಸಮಾಜಕ್ಕೆ ಏನೂ ಕೊಡುಗೆ ನೀಡದ ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ ಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಆಗ್ರಹಿಸುವುದು ವಿಪರ್ಯಾಸವೇ ಸರಿ. ಶಾಂತಿ, ಸೌಹಾರ್ದತೆ, ಸಾಮರಸ್ಯ, ಮಾನವೀಯತೆ, ಐಕ್ಯತೆಯನ್ನು ಬಯಸುವ, ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಮಾದರಿ ಸಮಾಜ ಸೇವಕ *ಶ್ರೀಯುತ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ* ರವರಿಗೆ ಅರ್ಹವಾಗಿಯೇ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂಬುವುದು ಸಮಸ್ತ ನಾಗರಿಕರ ಬಯಕೆ. ಇನ್ನಾದರೂ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಉಳ್ಳಾಲ ನಗರಸಭೆ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಅಲ್ಪ ಸಂಖ್ಯಾತ ಸಮುದಾಯ, ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಉಸ್ತುವಾರಿ ಸಚಿವರು, ಈ ಬಗ್ಗೆ ಗಮನ ಹರಿಸಬೇಕಾಗಿದೆ. ಡಿ.ಎ. ಅಬ್ಬಾಸ್ ಪಡಿಕ್ಕಲ್. ಹವ್ಯಾಸಿ ಬರಹಗಾರ, ಸಮಾಜಸೇವಕ.
ಕೈರಂಗಳ ಗ್ರಾಮ ದಕ್ಷಿಣಕನ್ನಡ ಜಿಲ್ಲೆ. ಮಂಗಳೂರು ಕ್ಷೇತ್ರ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.