(www.vknews.in) : ಉಳ್ಳಾಲ ವಿಧಾನಸಭಾ ಕ್ಷೇತ್ರದ ತೊಕ್ಕೋಟಿನಿಂದ ಬೋಳಿಯಾರು ವರೆಗಿನ ರಸ್ತೆಯನ್ನು ಚುನಾವಣೆಯ ಸಮಯ ಹತ್ತಿರ ಬಂದಾಗ ನಾಗರಿಕರ ಮೆಚ್ಚಿಸಲೆಂದೇ ಕಲಪೆ ಕಾಮಗಾರಿಯ ರಸ್ತೆ ನಿರ್ಮಾಣಿಸಿ ಖಾದರ್ ನಡೆ ಅಭಿವೃದ್ಧಿಯ ಕಡೆ ಎಂದು ಜನರನ್ನು ಮಂಗಮಾಯ ಮಾಡುವುದು ಜನರ ಅರಿವಿಗೆ ಬರುತ್ತಿಲ್ಲ.
ಮಾನ್ಯ ಶಾಸಕರೇ ನಿಮ್ಮ ಅಭಿವೃದ್ಧಿ ಯಾವುದು? ಜಿಲ್ಲೆಯಲ್ಲಿ ಇರುವ ಬಂಡವಾಳ ಶಾಹಿಗಳ ಕಡೆಯಲ್ಲವೇ?? ಈ ಕ್ಷೇತ್ರದ ಉದ್ಯಮಿಗಳ ಕಡೆ ಅಲ್ಲವೇ ನಿಮ್ಮ ಅಭಿವೃದ್ಧಿ. ನೀವು ನಿಮ್ಮ ಕ್ಷೇತ್ರದಲ್ಲಿ ನಿರ್ಮಿಸಿರುವ ರಸ್ತೆ ಹದಗೆಟ್ಟು ಇಷ್ಟು ಸಮಯವಾದರೂ ಅದರ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತಿದರೂ ನೀವು ಕಣ್ಣು ಕಾಣುವುದಿಲ್ಲ ಕಿವಿ ಕೇಳುವುದಿಲ್ಲ ಎಂಬಂತೆ ನಟಿಸಿದರೆ ನೀವು ಇವರು ಸ್ಪೀಕರ್ ಸ್ಥಾನಕ್ಕೆ ನೀವೆಷ್ಟು ಅರ್ಹತೆ ಉಳ್ಳವರು?.. ಇದು ನನ್ನೊಬ್ಬನ ಪ್ರಶ್ನೆಯಲ್ಲ ಇಡೀ ಉಳ್ಳಾಲ ಕ್ಷೇತ್ರದ ಜನತೆಯ ಪ್ರಶ್ನೆ. ನಿನ್ನೆ ನಡೆದ ಅಪಘಾತದಲ್ಲಿ ಅಮಾಯಕ ಮಹಿಳೆಯಬ್ಬಳನ್ನು ಒಂದು ಕುಟುಂಬ ಕಳೆದುಕೊಂಡಿದೆ. ಇದಕ್ಕೆ ಸರ್ಕಾರದಿಂದ ಬರುವ ಪರಿಹಾರವನ್ನು ನೀಡಿ ಕ್ಷೇತ್ರದ ಸಮಸ್ಯೆಯಿಂದ ಕೈ ತೊಳೆದು ದೂರ ಸರಿದರೆ ಸಾಲದು. ನೀವು ನಿಜವಾಗಿಯೂ ಜನಪರ ಕಾಳಜಿಯುಳ್ಳ ಶಾಸಕರಾಗಿದ್ದರೆ ನಿಮ್ಮ ನಡೆ ನಿಜವಾಗಿಯೂ ಅಭಿವೃದ್ಧಿಯ ಕಡೆ ಆಗಿದ್ದರೆ ನಿಮ್ಮ ಕ್ಷೇತ್ರದಲ್ಲಿ ಹೊಂಡದ ಕಡೆಯಾಗಿರುವ ನಿಮ್ಮ ನಡೆಯನ್ನು ಅಭಿವೃದ್ಧಿಯ ಕಡೆಗೆ ಮಾಡಿ ತೋರಿಸಿ.
ಮಹಮ್ಮದ್ ಅಸ್ಗರ್, ನ್ಯಾಯವಾದಿ ಉಪಾಧ್ಯಕ್ಷರು,ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.