ಪಾಲಕ್ಕಾಡ್ (www.vknews.in) : ದೇಶವನ್ನೇ ಬೆಚ್ಚಿಬೀಳಿಸಿದ ದುರಂತದಲ್ಲಿ ಸ್ವಂತ ಮಕ್ಕಳ ಸಾವಿಗೆ ತಾಯಿ ಹಾಗು ಚಿಕ್ಕಪ್ಪ ಸಾಕ್ಷಿಯಾಗಿದ್ದಾರೆ. ಲಾರಿಯಡಿಯಲ್ಲಿ ಇರ್ಫಾನಾ ಸಾವನ್ನಪ್ಪಿದ್ದನ್ನು ತಾಯಿ ಫರೀಷಾ ಕಂಡಾಗ ನಿದಾ ಫಾತಿಮಾ ಮೃತದೇಹ ತೆಗೆಯಲು ಅವರ ಚಿಕ್ಕಪ್ಪ ಅಬ್ದುಲ್ ಸಲಾಂ ನೆರವಿಗೆ ಬಂದಿದ್ದಾರೆ.
ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ ಕಾಯಲು ತಾಯಿ ಇರ್ಫಾನಾಳಿಗೆ ಹೇಳಿದ್ದರು. ದಂತವೈದ್ಯರನ್ನು ನೋಡಬೇಕಿತ್ತು. ಆದರೆ ಇರ್ಫಾನಾ ತನ್ನ ದಿನಚರಿ ಮುರಿಯಲಿಲ್ಲ.. ಅಮ್ಮನನ್ನು ಭೇಟಿಯಾಗುವವರೆಗೂ ಗೆಳೆಯರೊಂದಿಗೆ ನಡೆದುಕೊಂಡು ಹೋಗುತ್ತೇನೆ ಎಂದುಕೊಂಡಳು.. ಆದರೆ ವಿಧಿಯೇ ಬೇರೆ… ತಾಯಿ ನೋಡುವಷ್ಟರಲ್ಲಿ ನಿಯಂತ್ರಣ ತಪ್ಪಿದ ಲಾರಿಯಡಿಗೆ ಇರ್ಫಾನಾ ಬಿದ್ದಿದ್ದಳು. …
ಅಪಘಾತದ ಸುದ್ದಿ ತಿಳಿದು ಓಡಿ ಬಂದ ಅಬ್ದುಲ್ ಸಲಾಂ ಲಾರಿಯಡಿ ಇದ್ದದ್ದು ತನ್ನ ಅಣ್ಣನ ಮಗಳು ಎಂದು ತಿಳಿಯದೇ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ನಾಲ್ಕು ಕುಟುಂಬಗಳು ಮತ್ತು ಇಡೀ ಊರೇ ದುಃಖದಲ್ಲಿ ಮುಳುಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.