(www.vknews.in) : Dec 29 /2024 ರಂದು ನೂಜಿಬೈಲು ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಯೂತ್ ಕೌನ್ಸಿಲ್ ಮಂಚಿ ಆಯೋಜಿಸಿದ ರಕ್ತ ದಾನ ಶಿಬಿರ ಮತ್ತು ಪ್ರೌಢ ಶಾಲಾ ವಿಭಾಗ ಮ್ಯಾಟ್ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ನಾರಾಯಣ ಭಟ್ ರಕ್ತ ದಾನದ ಮಹತ್ವದ ಬಗ್ಗೆ ತಿಳಿಸಿದರು. ಕಬಡ್ಡಿ ಪಂದ್ಯಾಟ ಉದ್ಘಾಟನೆ ಶ್ರಿಯುತ ಉದಯ ಕುಮಾರ್ ರಾವ್ ನಿವೃತ್ತ ಯೋಧರು ಭಾರತೀಯ ಸೇನೆ ಮತ್ತು ಮಾಜಿ ಕಬಡ್ಡಿ ಆಟಗಾರ ಹಸೈನಾರ್ ಕುಕ್ಕಾಜೆ ನೆರವೇರಿಸಿದರು. ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನಿಶ್ ಅಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಮಂಚಿ, ಡಾಕ್ಟರ್ ಗಣೇಶ್ ಪ್ರಸಾದ್ M.D., ಬಾಲಕೃಷ್ಣ ಸೆರ್ಕಳ, ಶ್ರೀಮತಿ ಗೀತಾ ಆಶಾ ಕಾರ್ಯಕರ್ತೆ, ಶ್ರೀಮತಿ ಶಶಿಕಲಾ ಅಂಗನವಾಡಿ ಕಾರ್ಯಕರ್ತೆ, ಅಬ್ದುಲ್ ಅಝೀಝ್ M.A., ಮಹಮ್ಮದ್ ಮೂಸಾ ಉಪಸ್ಥಿತರಿದ್ದರು.
ಸಂಜೆ ಕಬಡ್ಡಿ ಪಂದ್ಯಾಟ ಸಮಾರೋಪ ಸಮಾರಂಭ ಅಧ್ಯಕ್ಷತೆ ಮಾಜಿ ಸಚಿವ ರಮಾನಾಥ ರೈ ಅವರು ವಹಿಸಿಕೊಂಡಿದ್ದರು. ಲಯನ್ ನರಸಿಂಹ, ಶ್ರೀಮತಿ ಜಯಂತಿ, ನಿಸಾರ್ ಮಂಚಿ, ಹನೀಫ್ M.A., ಅಬ್ದುಲ್ ರಝಾಕ್ ಕುಕ್ಕಾಜೆ, A.B. ಅಬ್ದುಲ್ಲಾ, ಹರ್ಷಿತ್ ಶೆಟ್ಟಿ, ಮನು ಪಾಣಾಜೆ ಕೋಡಿ ಹಾಗೂ ಯೂತ್ ಕೌನ್ಸಿಲ್ ಪ್ರಮುಖರು ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ರಿ ಮತ್ತು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಅತ್ಯಾಧುನಿಕ ಸೌಲಭ್ಯ ಇರುವ ಬಸ್ ನಲ್ಲಿ ರಕ್ತ ದಾನ ಶಿಬಿರ ನಡೆಯಿತು ಈ ಸಂದರ್ಭದಲ್ಲಿ 41 ಮಂದಿ ರಕ್ತ ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು ಅಲ್ಲದೆ ಸ್ಥಳೀಯ ಆಶಾ ಕಾರ್ಯಕರ್ತೆ ಶ್ರೀಮತಿ ಗೀತಾ ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಮುಬೀನಾ ರಕ್ತ ದಾನ ಮಾಡುವ ಮೂಲಕ ಮಹಿಳೆಯರೂ ರಕ್ತ ದಾನ ಮಾಡಬಹುದು ಅನ್ನುವ ಸಂದೇಶ ನೀಡಿದರು. ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಯ ಸುಮಾರು ಹದಿನೆಂಟು ಪ್ರೌಢ ಶಾಲೆಗಳ ತಂಡಗಳು ಭಾಗವಹಿಸಿದರೆ ಅಂತಿಮವಾಗಿ ತೌಹೀದ್ ಆಂಗ್ಲ ಮಾದ್ಯಮ ಶಾಲೆ ಬಂಟ್ವಾಳ ಮತ್ತು ಸರಕಾರಿ ಪ್ರೌಢ ಶಾಲೆ ಮಂಚಿ ನಡುವೆ ಜಿದ್ದಾಜಿದ್ದಿನ ಫೈನಲ್ ಹಣಾಹಣಿ ನಡೆಯಿತು.
ಮೊದಲಾರ್ಧದಲ್ಲಿ ಮಂಚಿ ಪ್ರೌಢ ಶಾಲೆ ಮುನ್ನಡೆ ಸಾಧಿಸಿದರೆ ನಂತರದ ಅವಧಿಯಲ್ಲಿ ಬಂಟ್ವಾಳ ಮುನ್ನಡೆ ಕಾಯ್ದುಕೊಂಡು 3 ಅಂಕಗಳ ಅಂತರದಿಂದ ಚಾಂಪಿಯನ್ ಆಗಿ ಹೊರ ಹೊಮ್ಮಿತು ಕ್ರಮವಾಗಿ ದ್ವಿತೀಯ ಸ್ಥಾನ ಮಂಚಿ ಸರಕಾರಿ ಪ್ರೌಢ ಶಾಲೆ ಗೆದ್ದು ಕೊಂಡರೆ ಮೂರನೇ ಸ್ಥಾನ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕಾಜೆ ಮತ್ತು ನಾಲ್ಕನೇ ಸ್ಥಾನ RMSA ವಿಟ್ಲ ಹಂಚಿ ಕೊಂಡವು.
ಸ್ಥಳೀಯ ಸೂಪರ್ ಸ್ಟಾರ್ ಮಂಚಿ ಮತ್ತು ಫ್ರೆಂಡ್ಸ್ ಕನಕಗಿರಿ ಹಾಗೂ ಊರಿನ ಎಲ್ಲಾ ಕ್ರೀಡಾ ಅಭಿಮಾನಿಗಳು ಪಂದ್ಯಾ ಕೂಟದ ಯಶಸ್ವಿಗೆ ಕಾರಣರಾದರು. ಕಾರ್ಯಕ್ರಮದ ಆಯೋಜನೆ ಮತ್ತು ನಿರೂಪಣೆಯನ್ನು ಯೂತ್ ಕೌನ್ಸಿಲ್ ಪ್ರಮುಖರಾದ ಮಹಮ್ಮದ್ ಇಕ್ಬಾಲ್ ಮಂಚಿ ನೆರವೇರಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.