(www.vknews.in) : ಮಾಜಿ ಶಾಸಕರಾದ ಶ್ರೀ.ಕೆ ವಸಂತ ಬಂಗೇರರವರ 78 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಬಂಗೇರಾ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವರೇ, ವಸಂತ ಬಂಗೇರರ ಅಭಿಮಾನಿಗಳು, ಹಿತೈಷಿಗಳ ಸಮಾಲೋಚನೆ ಸಭೆ ದಿನಾಂಕ 29/12/24 ಆದಿತ್ಯವಾರ ಗುರು ನಾರಾಯಣ ಸಭಾಂಗಣ ಬೆಳ್ತಂಗಡಿಯಲ್ಲಿ ಜರಗಿತು.
ಸಭೆಯಲ್ಲಿ ವಸಂತ ಬಂಗೇರರ ಹುಟ್ಟೂರಾದ ಕುವೆಟ್ಟು ಗ್ರಾಮದ ಮದ್ದಡ್ಕ ಬಂಡೀಮಠ ಮೈದಾನದಲ್ಲಿ ದಿನಾಂಕ 15/01/2025 ರ ಬುಧವಾರ ಹೊನಲು ಬೆಳೆಕಿನ ಮುಕ್ತ ಕಬಡ್ಡಿ ಪಂದ್ಯಾ ಕೂಟವನ್ನು ಬಂಗೇರಾ ಬ್ರಿಗೇಡ್ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರರ ನೇತೃತ್ವದಲ್ಲಿ ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು. ಕಬಡ್ಡಿ ಆಟಗಾರರಿಗೆ ಹಾಗೂ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆಯನ್ನು ಮಾಡುವುದಾಗಿ ತೀರ್ಮಾನಿಸಲಾಗಿದೆ.
ಪಂದ್ಯಾಕೂಟದ ಉದ್ಘಾಟನೆಗೆ ಗೌರವಾನ್ವಿತ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ರವರನ್ನು ಹಾಗು ಇನ್ನಿತರ ಅನೇಕ ಗಣ್ಯಾತಿಗಣ್ಯ ರುಗಳನ್ನು ಅಹ್ವಾನಿಸುದೆಂದು ತೀರ್ಮಾನಿಸಲಾಗಿದೆ. ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಬಂಗೇರಾ ಬ್ರಿಗೇಡ್ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರಾ ವಹಿಸಿದ್ದರು, ಮತ್ತು ನಾಮದೇವ್ ರಾವ್ ಮುಂಡಾಜೆ, ಬಿ.ಕೆ ವಸಂತ, ವೃಷಭ ಆರಿಗ, ಜಯಾನಂದ, ಹರಿದಾಸ್ ಕೇದೆ, ಚಂದ್ರಹಾಸ ಕೇದೆ, ಯಶವಂತ ಆರ್.ಬಾಳಿಗ, ಬಾಲಕೃಷ್ಣ ರಾವ್, ಸಮದ್ ಕುಂಡಡ್ಕ ಮಾತನಾಡಿ ಉತ್ತಮ ಸಲಹೆ ನೀಡಿದರು.
ಸುಮತಿ ಪ್ರಮೋದ್, ವಿಜಯಲಕ್ಷ್ಮಿ, ಮ್ಯಾಥ್ಯೂ ವರ್ಗೀಸ್, ಥೋಮಸ್, ಎಂ.ಎಂ.ಚೈತ್ರ, ಶೀನಿವಾಸ ಕೆ.ಉಜಿರೆ, ಎಸ್.ಪ್ರಭಾಕರ ಓಡೀಲ್ನಳ, ಇಸ್ಮಾಯಿಲ್ ನಾವುರಾ, ಇ. ಸಂದೀಪ್ ಕುಮಾರ್, ಸಫ್ವಾನ್, ರಿಯಾಜ್ ಕುವೆಟ್ಟು, ಸಿರಾಜ್ ಚಿಲಿಂಬಿ, ರವೀಂದ್ರ ಬಿ.ಅಮೀನ್, ರವಿರಾಮ ಶೆಟ್ಟಿ, ನೌಷಾದ್ ನಾವೂರು, ರಾಕೇಶ್ ಕುಮಾರ್, ರಾಘವೇಂದ್ರ ಮೇಲಂತಬೆಟ್ಟು, ಸೌಮ್ಯ ಲಾಯಿಲ, ಅನೂಪ್ ಎಂ.ಬಂಗೇರಾ, ರಾಜು ಪೂಜಾರಿ, ಸತೀಶ್ ಬಂಗೇರಾ, ಶೇಖರ್ ಗೌಡ, ಶರತ್, ಜಯಕುಮಾರ್ ನಡ ಭಾಗವಹಿಸಿದ್ದರು. ಕೆ.ಸಲೀಂ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.