ಮಂಗಳೂರು (www.vknews.in) : ನಗರದಲ್ಲಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಟೆಂಪೋ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಅಡ್ಯಾರ್ಕಟ್ಟೆ ನಿವಾಸಿ ಅಬೂಬಕರ್ ಸಿದ್ದೀಕ್ (36) ಮೃತರು.
ಅವರು ಬೆಳಗ್ಗೆ ಮನೆಯಿಂದ ಕಲ್ಲಾಪು ಮಾರ್ಕೆಟ್ಗೆ ಟೆಂಪೋದಲ್ಲಿ ಹೊರಟಿದ್ದರು. ಅಡ್ಯಾರ್ ಕಣ್ಣೂರು ಬಳಿ ತಲುಪಿದಾಗ ಟೆಂಪೋದಲ್ಲಿದ್ದ ಟ್ರೇ ಕೆಳಗೆ ಬಿತ್ತು. ಟೆಂಪೋ ನಿಲ್ಲಿಸಿ ಅದನ್ನು ತೆಗೆಯಲು ಮುಂದಾದಾಗ ದ್ವಿಚಕ್ರ ವಾಹನ ಢಿಕ್ಕಿ ಹೊಡೆಯಿತು.
ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.