(www.vknews.in) : SKSSF ಕರ್ನಾಟಕ ರಾಜ್ಯ ಸರ್ಗಲಯ ವತಿಯಿಂದ 2024 ಡಿಸೆಂಬರ್ 14 ಹಾಗೂ 15 ರಂದು ಸಾಂಸ್ಕೃತಿಕ ನಗರಿ ಮೈಸೂರಿನ ತಿಲಕ್ ನಗರ ಈದ್ಗಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ ಜನರಲ್ ಹಾಗೂ ತ್ವಲಬಾ ಎರಡೂ ವಿಭಾಗದಲ್ಲಿ ಓವರ್ ಆಲ್ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸಿದೆ. ಕರ್ನಾಟಕ ರಾಜ್ಯದ 20 ಜಿಲ್ಲೆಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದು ದ.ಕ.ಈಸ್ಟ್ ಜಿಲ್ಲೆಯ 69 ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಅತಿಹೆಚ್ಚು ಅಂಕಗಳಿಸಿ ಜನರಲ್ ಹಾಗೂ ತ್ವಲಬಾ ವಿಭಾಗದಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದೆ.
ಸಾಧಕರಿಗೆ ಸನ್ಮಾನ.. SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಇದರ ವತಿಯಿಂದ ಸ್ಪರ್ಧಾರ್ಥಿಗಳಿಗೆ ಅಭಿನಂದನಾ ಸಮಾರಂಭ 2024ಡಿಸೆಂಬರ್ 29 ಆದಿತ್ಯವಾರದಂದು ಮದ್ಯಾಹ್ನ 3 ಗಂಟೆಗೆ ಕೆ ಐ ಸಿ ಕುಂಬ್ರದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಮುಹಮ್ಮದ್ ನವವಿ ಮುಂಡೋಳೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಶೀದ್ ರಹ್ಮಾನಿ ದುಆ ನೆರವೇರಿಸಿದರು. ಯಾಸಿರ್ ಅರಫಾತ್ ಕೌಸರಿ ಶುಭ ಹಾರೈಸಿದರು.
ಸಯ್ಯದ್ ಇಸ್ಮಾಯಿಲ್ ತಂಙಳ್, ಜಮಾಲ್ ಕೊಡಪದವು, ಯಾಸೀರ್ ಅರಾಫಾತ್ ಕೌಸರಿ, ಮನ್ಸೂರ್ ಅಸ್ಲಮಿ, ರಝಾಕ್ ಅಝ್ಹರಿ, ಅಶ್ರಫ್ ಶೇಡಿಗುಂಡಿ , ಅಶ್ರಫ್ ಕೋರೆಪದವು, ಮುಹಮ್ಮದ್ ಕೆ.ಎಚ್, ಇಬ್ರಾಹಿಂ ಬಾತಿಶ್ ಹಾಜಿ, ಶಾಫಿ ಪಾಪೆತ್ತಡ್ಕ , ಕಲೀಮುಳ್ಳಾ ಕಡಬ, ಆಶಿಕ್ ಸುಳ್ಯ , ಸಿದ್ದೀಕ್ ಸುಲ್ತಾನ್ ಮುಂತಾದವರು ಉಪಸ್ಥಿತರಿದ್ದರು.
ಸರ್ಗಲಯ ಚೇರ್ಮನ್ ರಫೀಕ್ ಫೈಝಿ ಮಾಡನ್ನೂರ್ ಸ್ವಾಗತಿಸಿ, ಪಿ.ಎ.ಮರ್ದಾಳ ವಂದಿಸಿದರು. ಯಾಸಿರ್ ಚಿಬಿದ್ರೆ ಕಾರ್ಯಕ್ರಮ ನಿರ್ವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.