(www.vknews.in) : ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯೊಂದಿಗೆ ಪ್ರೋತ್ಸಾಹ ನೀಡಿದಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಸಮಾಜದ ಒಳಿತಿಗಾಗಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸುವುದು ಶ್ರೇಷ್ಠ ಕಾರ್ಯವಾಗಿದೆ ಎಂದು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ಹೇಳಿದರು. ಅವರು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ವಾರ್ಷಿಕೋತ್ಸವ (ಜಲ್ಸ) – 2025 ಕಾರ್ಯಕ್ರಮದಲ್ಲಿ ಇತ್ತೀಚಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮದ್ರಸ ಸದರ್ ಮುಅಲಿಮ್ ಮೌಲಾನ ಮೊಹಮ್ಮದ್ ರಫೀಕ್, ಮೌಲಾನ ಆಸೀಫ್ ನದ್ವಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಬೆಳ್ವೆ ಮದ್ರಸ ಸ್ಥಾಪಕ ಕಾರ್ಯದರ್ಶಿ ಬಿ. ಕೆ. ಶಬ್ಬೀರ್ ಸಾಹೇಬ್, ಬೆಳ್ವೆ ಇಸ್ಲಾಮಿಕ್ ಯೂಥ್ ಫೆಡರೇಶನ್ ಅಧ್ಯಕ್ಷ ಮೊಹಮ್ಮದ್ ನಝೀರ್, ಮದ್ರಸ ಉಪಾಧ್ಯಕ್ಷರಾದ ಅಬ್ದುಲ್ ಸಾಹೇಬ್, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬ್ಯಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬೆಳ್ವೆ ಜುಮ್ಮಾ ಮಸೀದಿಗೆ ಭೂಮಿ ವಖ್ಫ್ ನೀಡಿದ ದಾನಿ ಗೌಸ್ ಸಾಹೇಬ್ ಬೆಳ್ವೆ (ಬಾಪು ಸಾಹೇಬ್), ಮದ್ರಸ ಅಭಿವೃದ್ದಿ ದಾನಿ ಅಯೂಬ್ ಬ್ಯಾರಿ ಬೆಳ್ವೆ ರವರನ್ನು ಸನ್ಮಾನ, ಅಲ್ಬಾಡಿ ಶ್ರೀ ಲಕ್ಷ್ಮೀ ಶಾಮಿಯಾನ ಮತ್ತು ಲೈಟಿಂಗ್ಸ್ ಉದ್ಯಮಿ ದಿ. ಶಂಕರ ನಾಯ್ಕ ಸೇವೆಯ ಸ್ಮರಣಾರ್ಥ ಮರಣೋತ್ತರ ಗೌರವವನ್ನು ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ ಇವರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಮದ್ರಸ ಮಕ್ಕಳಿಂದ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಿತು.ವೇದಿಕೆಯಲ್ಲಿ ಬೆಳ್ವೆ ಮದ್ರಸದ ಉಪಾಧ್ಯಕ್ಷರಾದ ಅಬ್ದುಲ್ಲಾ ಸಾಹೇಬ್, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬ್ಯಾರಿ
ರಿಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ಅರ್ಫಾತ್ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ಆಸೀಫ್ ಅಲ್ಬಾಡಿ ವರದಿ ವಾಚಿಸಿದರು. ರಝೀನ್ ಬೆಳ್ವೆ ಸನ್ಮಾನ ಪತ್ರ ವಾಚಿಸಿದರು. ಮೊಹಮ್ಮದ್ ಜಾಸೀಮ್, ಮೊಹಮ್ಮದ್ ರಬೀ, ಮೊಹಮ್ಮದ್ ಫಾರೀಶ್ ಬಹುಮಾನ ಪಟ್ಟಿ ವಾಚಿಸಿದವರು. ಇದೆ ಸಂದರ್ಭದಲ್ಲಿ ಮೌಲಾನ ಹಾಫೀಝ್ ಮೊಹಮ್ಮದ್ ರಫೀಕ್ ಬೆಳ್ವೆ ಇವರು ಸಂಗ್ರಹಿಸಿ ರಚಿಸಿರುವ ಪುಸ್ತಕ ಫೀಕ್ ಸರಳಕನ್ನಡ ಅಧ್ಯಾಯ ಭಾಗ-1 ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವ ಸಮಿತಿಯ ಸದಸ್ಯರಾದ ಅನ್ವರ್ ಹುಸೇನ್, ಶಾಝಾದ್ ಬೆಳ್ವೆ, ಫಝೀಲ್, ನಿಯಾನ್, ರಯಾನ್, ನೌಫಲ್, ಅಫ್ರಾಝ್ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಊರ-ಪರ ಊರ ಜಮಾತಿನ, ವಿದೇಶದಲ್ಲಿನ ದಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.