(www.vknews.in) : ಅವಳಿ ಮಕ್ಕಳು ರಾತ್ರಿಯೆಲ್ಲಾ ಅಳುತ್ತವೆ. ನಿದ್ದೆ ಮಾಡಲು ಬಿಡುವುದಿಲ್ಲ ಎನ್ನುವ ಕಾರಣಕ್ಕೆ 20 ವರ್ಷದ ತಾಯಿಯೊಬ್ಬರು ತನ್ನ ಆರು ತಿಂಗಳ ಅವಳಿ–ಜವಳಿ ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ತಾಯಿಯು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯವರು. ಇವರ ಗಂಡ ಉತ್ತರಾಖಂಡದ ಟೆಹರಿ ಜಿಲ್ಲೆಯ ನಿವಾಸಿ. ಹರಿದ್ವಾರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಶಿಶುಗಳು ಪ್ರಜ್ಞೆ ತಪ್ಪಿ ಬಿದ್ದಿದ್ದವು’ ಎಂದು ಹೆಂಡತಿ ಹೇಳಿದ ಬಗ್ಗೆ ಗಂಡನಿಗೆ ಅನುಮಾನ ಮೂಡಿತ್ತು. ಇವರು ಪೊಲೀಸರಿಗೆ ದೂರು ನೀಡಿದ್ದರು.
‘ಮನೆಗೆ ಸಾಮಾನುಗಳನ್ನು ತರಲು ಅಂಗಡಿಗೆ ಹೋಗಿದ್ದೆ. ವಾಪಸು ಬರುವ ವೇಳೆ ಶಿಶುಗಳು ಪ್ರಜ್ಞೆತಪ್ಪಿ ಬಿದ್ದಿದ್ದವು. ಬಳಿಕ ಅವುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಬರುವ ಮೊದಲೇ ಶಿಶುಗಳು ಮೃತಪಟ್ಟಿದ್ದವು ಎಂದು ವೈದ್ಯರು ತಿಳಿಸಿದರು’ ಎಂದು ತನಿಖೆಗೆ ವೇಳೆ ತಾಯಿ ಪೊಲೀಸರಿಗೆ ಹೇಳಿದ್ದರು.
ಪೊಲೀಸರ ತೀವ್ರ ತನಿಖೆಯ ಬಳಿಕ, ಈಕೆ ತಪ್ಪೊಪ್ಪಿಕೊಂಡಿದ್ದಾರೆ. ‘ರಾತ್ರಿ ವೇಳೆ ಶಿಶುಗಳು ಪದೇ ಪದೇ ಅಳುತ್ತಿದ್ದವು. ನನಗೆ ನಿದ್ದೆ ಮಾಡುವುದಕ್ಕೇ ಸಾಧ್ಯವಾಗುತ್ತಿರಲಿಲ್ಲ. ಅವುಗಳ ಅಳು ನಿಲ್ಲಿಸಲು ತುಂಬಾ ಪ್ರಯತ್ನ ಪಟ್ಟೆ. ಆದರೆ, ಅಳು ನಿಲ್ಲಿಸಲಿಲ್ಲ. ಅಳು ನಿಲ್ಲಿಸಲು ಅವುಗಳ ಬಾಯಿಯನ್ನು ಹಾಸಿಗೆಯಿಂದ ಗಟ್ಟಿಯಾಗಿ ಒತ್ತಿದೆ’ ಎಂದು ತಪ್ಪೋಪ್ಪಿಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.