ಮಂಗಳೂರು (www.vknews.in) : ಬಿದ್ದು ಸಿಕ್ಕಿದ ಚಿನ್ನವನ್ನು ವಾರೀಸುದಾರರಿಗೆ ವಾಪಾಸ್ಸು ಹಸ್ತಾಂತರಿಸುವ ಮೂಲಕ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಚರಿಸುವ ನಿಶ್ಮಿತಾ ಬಸ್ ನ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದು ಗಮನ ಸೆಳೆದಿದ್ದಾರೆ.
ರೇಖಾ ಎಂಬುವವರಿಗೆ ಸೇರಿದ ಚಿನ್ನ ಹಾಗೂ ಪರ್ಸ್ ಬಸ್’ನ ಒಳಗೆ ಬಿದ್ದಿತ್ತು, ಅದರಲ್ಲಿ ಅವರಿಗೆ ಬೇಕಾದ ಅಗತ್ಯ ದಾಖಲೆ ಕೂಡ ಇತ್ತು. ಇದನ್ನು ಗಮನಿಸಿದ ಚಾಲಕ ಹೈದರ್ ಮತ್ತು ನಿರ್ವಾಹಕ ನಿಸಾರ್ ಪರ್ಸ್ ನಲ್ಲಿದ್ದ ದಾಖಲೆ ಪರಿಶೀಲನೆ ಮಾಡಿ, ರೇಖಾ ಅವರಿಗೆ ಕರೆ ಮಾಡಿದ್ದಾರೆ. ಚಿನ್ನ ಹಾಗೂ ಪರ್ಸ್ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.