(www.vknews.in) : ವಾಲಿಬಾಲ್ ಎಂಬ ಕ್ರೀಡೆ ಜಗತ್ತಿನಲ್ಲಿ ಅತ್ಯಂತ ವೇಗದಲ್ಲಿ ಜನ ಮೆಚ್ಚುಗೆ ಪಡೆಯುತ್ತಿದೆ. ಮಾತ್ರವಲ್ಲದೆ ಪ್ರೇಕ್ಷಕರನ್ನು ಕೊನೆಯ ಹಂತದವರೆಗೂ ತುದಿಗಾಲಿನಲ್ಲಿ ನಿಲ್ಲಿಸುವಷ್ಟು ರೋಚಕತೆಯನ್ನು ಹೊಂದಿರುತ್ತದೆ. ಭಾರತದಲ್ಲೂ ಕ್ರಿಕೆಟ್ ತರ ವಾಲಿಬಾಲ್ ಕ್ರೀಡೆಯೂ ಬಹಳ ವೇಗವಾಗಿ ಮುಂದುವರಿಯುತ್ತಿದೆ. ಇತ್ತೀಚೆಗೆ ಎತ್ತ ನೋಡಿದರೂ ವಾಲಿಬಾಲ್ ಪಂದ್ಯಾಟಗಳೇ ರಾರಾಜಿಸುತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ವಾಲಿಬಾಲ್ ಕ್ರೀಡಾಪಟುಗಳು ಬೆಳೆಯುತ್ತಾ ಬರುತ್ತಿದ್ದಾರೆ. ಇನ್ನು ನಮ್ಮ ಕರ್ನಾಟಕದಲ್ಲಿ ಕ್ರೀಡೆಯಲ್ಲಿ ಹೆಚ್ಚಿನವರು ಆಯ್ಕೆ ಮಾಡುವುದೇ ವಾಲಿಬಾಲ್ ಆಗಿರುತ್ತದೆ. ಕರ್ನಾಟಕದ ಎಷ್ಟೋ ಆಟಗಾರರು ನಮ್ಮ ದೇಶಕ್ಕೆ ಹೆಸರನ್ನು ತಂದಿರುವುದು ನಮ್ಮ ರಾಜ್ಯದ ಅಭಿಮಾನವಾಗಿದೆ.
ಆದರೆ ಕೆಲವು ವರ್ಷಗಳಿಂದ ರಾಜ್ಯದ ವಾಲಿಬಾಲ್ ವ್ಯವಸ್ಥೆಯು ಹದಗೆಟ್ಟಿರುವುದು ಕ್ರೀಡಾಪಟುಗಳು ಮತ್ತು ವಾಲಿಬಾಲ್ ಅಭಿಮಾನಿಗಳಲ್ಲಿ ಅತ್ಯಂತ ಆತಂಕವನ್ನು ಉಂಟುಮಾಡಿದೆ. ರಾಜ್ಯದಲ್ಲಿ ಅಸೋಸಿಯೇಷನ್ ಇದೆಯೋ ಇಲ್ಲವೋ ಎಂಬುವುದು ಭೂತ ಕನ್ನಡಿ ಇಟ್ಟು ನೋಡಬೇಕಾಗದ ಪರಿಸ್ಥಿತಿಯಲ್ಲಿದೆ. ಇದ್ದ ಅಸೋಸಿಯೇಷನ್ ನಲ್ಲಿ ಹಲವು ಬಣಗಳಿರುವುದು ಹಲವು ಗೋಂದಲಗಳಿಗೆ ಕಾರಣವಾಗಿದೆ. ರಾಜ್ಯದ ವಾಲಿಬಾಲ್ ಅಸೋಸಿಯೇಷನ್ ನಿಷ್ಕ್ರಿಯ ವಾಗಿರುವುದರಿಂದ, ರಾಷ್ಟ್ರೀಯ ಚಾಂಪಿಯನ್ ಶಿಪ್ಗಾಗಿ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯದ ಅಡಾಕ್ ಸಮಿತಿಗೆ ಜವಾಬ್ದಾರಿ ನೀಡಿದ್ದು, ಅಡಾಕ್ ಸಮಿತಿಯಲ್ಲೂ ರಾಜಕೀಯ ಪ್ರೇರಿತ ಒಳ ಕಿತ್ತಾಟಗಳು ಇರುವುದರಿಂದ ಕ್ರೀಡಾಪಟುಗಳಿಗೆ ಬಹಳಷ್ಟು ನಿರಾಶೆ ಮೂಡಿಸಿದೆ.
ಈ ಹಿಂದೆ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸಕ್ರೀಯವಾಗಿದ್ದಾಗ ಪ್ರತಿ ವರ್ಷವೂ ಜೂನಿಯರ್, ಸಬ್ ಜೂನಿಯರ್, ಎ ಡಿವಿಝನ್, ಸೌತ್ ಝೋನ್, ಇಂಟರ್ ಡಿಸ್ಟಿಕ್ ಮತ್ತು ಹಲವು ವಿಭಾಗದಲ್ಲಿ ಚಾಂಪಿಯನ್ ಶಿಪ್ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಆಯ್ಕೆ ಪ್ರಕ್ರಿಯೆಗಳು ಮತ್ತು ತರಬೇತಿ ಶಿಬಿರಗಳು ಆಟಗಾರರಿಗೆ ಬಹಳ ಪ್ರೋತ್ಸಾಹಕರವಾಗುತ್ತಿತ್ತು. ರಾಷ್ಟ್ರೀಯ ಚಾಂಪಿಯನ್ ಶಿಪ್ ನಮ್ಮ ಕರ್ನಾಟಕದಲ್ಲೂ ನಡೆಯುತ್ತಿತ್ತು. ವಾಲಿಬಾಲ್ನಲ್ಲಿ ಕರ್ನಾಟಕ ಹೃದಯ ಭಾಗವಾಗುತ್ತಿತ್ತು. ಆದರೆ ಇವಾಗ ಎಲ್ಲವೂ ಮಂಗ ಮಾಯ. ಅಧಿಕಾರಕ್ಕೋಸ್ಕರ ರಾಜಕೀಯ ಶಕ್ತಿ ಉಪಯೋಗಿಸಿ ತಾನೆ ಸ್ವಂತಿಕೆಯಿಂದ ಹೊರಡಿಸುವ ಸುಗ್ರೀವಾಜ್ಞೆಗಳಿಗೆ ಅಮಾಯಕ ಆಟಗಾರರು ಬಲಿಯಾಗಿದ್ದಾರೆ.
ಸ್ಪೋರ್ಟ್ಸ್ ಕೋಟದಲ್ಲಿ ಆವಾಗ ಮತ್ತು ಇವಾಗ ಸಿಗುವ ಉದ್ಯೋಗವನ್ನು ತುಲನೆ ಮಾಡಿ ನೋಡಿದರೆ ಗೊತ್ತಾಗಬಹುದು ಆಟವನ್ನೆ ನಂಬಿ ಬದುಕಿದ ಆಟಗಾರರ ಭವಿಷ್ಯ. ಇನ್ನು ರಾಷ್ಟೀಯ ಚಾಂಪಿಯನ್ ಶಿಪ್ಗೂ ಅಯ್ಕೆ ಪ್ರಕ್ರಿಯೆ ನಡೆಯದೆ ಎರಡು ಬಣಗಳ ಎರಡು ತಂಡಗಳು ರಾಜ್ಯದಿಂದ ಹೋಗಿ ಇದ್ದ ಮರ್ಯಾದೆಯನ್ನು ಸಹ ಕಳೆದುಕೊಳ್ಳುವ ಹಂತಕ್ಕೆ ಬಂದಿದೆಯಾದರೆ ರಾಜ್ಯದಲ್ಲಿ ವಾಲಿಬಾಲ್ ಅನ್ನೋದು ಆತ್ಮಹತ್ಯೆ ಮಾಡಿಕೊಳ್ಳುತ್ತದೋ ಅಂತ ಅನ್ನಿಸುತ್ತೆ. ಕೆಲವು ಹಿರಿಯ ಆಟಗಾರರಿಂದ ಸಿಕ್ಕಿದ ಮಾಹಿತಿ ಏನೆಂದರೆ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಸಮಿತಿಯ ಚುಣಾವಣಾ ಪ್ರಕ್ರಿಯೆ ನಡೆದು ಅಲ್ಲಿ ಹೊಸ ಆಡಳಿತ ಮಂಡಳಿ ಬರುವ ವರೆಗೂ ರಾಜ್ಯದ ಸಮಸ್ಯೆಗೆ ಪರಿಹಾರ ಸಿಗಲ್ಲ ಎಂಬುವುದು.
ಒಂದು ವೇಳೆ ವಿ.ಎಫ್.ಐ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದ ಸಂಪರ್ಕ ಯಾರಲ್ಲಿ ಇಟ್ಟುಕೊಳ್ಳುತ್ತಾರೆ. ರಾಜ್ಯದಿಂದ ಯಾವ ಬಣ ಹೋದರೂ ಮೊದಲು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಬನ್ನಿ ಎಂದು ಕಳುಹಿಸಬಹುದು. ಅದಕ್ಕೆ ನಿದರ್ಶನ ವಾಗಿರಿವುದೇ ಇವಾಗಿನ ಅಡಾಕ್ ಸಮಿತಿಗೆ ಅನಿವಾರ್ಯವಿಲ್ಲದೆ ಕೇವಲ ರಾಷ್ಟ್ರೀಯ ಚಾಂಪಿಯನ್ ಶಿಪ್ಗೆ ತಂಡ ಕಳಿಸಳಷ್ಟೇ ಅಧಿಕಾರವನ್ನ ಕೊಟ್ಟಿರೋದು. ಅಡಾಕ್ ಸಮಿತಿಯೂ ಇವಾಗ ಪಂಚರ್ ಆಗಿ ಮೂಲೆಗೆ ಬಿದ್ದಿರೋ ತರ ಕಂಡುಬರುತ್ತಿದೆ. ರಾಜ್ಯದ ಕ್ರೀಡಾ ಇಲಾಖೆಯೂ ಇದರ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಸರ ಮೂಡಿಸುತ್ತಿದೆ.
ಆದುದರಿಂದ ರಾಜ್ಯದ ಅಧಿಕಾರದ ವ್ಯಾಮೋಹವನ್ಮು ಬಿಟ್ಟು ಪ್ರತಿಯೊಂದು ಜಿಲ್ಲೆಗಳಲ್ಲಿ ಇರುವ ವಾಲಿಬಾಲ್ ಅಸೋಸಿಯೇಷನ್ ಅಥವಾ ಅಕಾಡಮಿಗಳು ಇದ್ದಲ್ಲಿ ಅವರೊಂದಿಗೆ ಸಂಪರ್ಕಿಸಿ, ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ಒಂದು ಸಮರ್ಥ ಸಮಿತಿಯನ್ನು ರಚಿಸಬೇಕು.
ಕೆಲವು ಜಿಲ್ಲೆಗಳಲ್ಲಿ ಅಸೋಸಿಯೇಷನ್ ಇದೆ ಆದರೆ ಮೇಲ್ಘಟಕದ ಸಂಪರ್ಕ ಇದ್ದರೆ ತಾನೆ ಜಿಲ್ಲೆಗಳಲ್ಲೂ ಸಕ್ರಿಯವಾಗೋದು. ಉದಾಹರಣೆಗೆ ಇಪ್ಪತ್ತೈದು ವರ್ಷಗಳಲ್ಲಿ ಮೂಲೆಗುಂಪಾಗಿದ್ದಂತಹ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಲೆಜೆಂಡ್ ಆಟಗಾರ ಅಕ್ರೋಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಬಹಳ ಸಕ್ರೀಯವಾಗಿದೆ. ಡಿಸ್ಟಿಕ್ ಚಾಂಪಿಯನ್ ಶಿಪ್ ಪ್ರತಿ ವರ್ಷವೂ ನಡೆಸುತ್ತಾರೆ. ಶಾಲಾ ವಿಭಾಗದ ಪಂದ್ಯಾಟಗಳು ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ತರಬೇತಿ ಶಿಭಿರಗಳು ನಡೆಯುತ್ತಿದೆ. ಪ್ರತಿ ತಾಲೂಕುಗಳಲ್ಲಿ ಅಸೋಸಿಯೇಷನ್ ರಚಿಸಿ ವಾಲಿಬಾಲ್ ಕೃಷಿಯನ್ನು ಬೆಳೆಸುತ್ತಿದ್ದಾರೆ. ದಾವಣಗೆರೆ, ಉಡುಪಿ ಜಿಲ್ಲೆ ಸಹಿತ ಹಲವಾರು ಜಿಲ್ಲೆಗಳಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಇಂತಿಯಾಜ್ ಅಹ್ಮದ್, ಗುಬ್ಬಿ ರವಿ, ನವೀನ್ ಶೆಟ್ಟಿ, ಸೇರಿದಂತೆ ಹಲವರ ಶತ ಪ್ರಯತ್ನದಿಂದ ಆಟಗಾರರಿಗೆ ಪ್ರೋತ್ಸಹ ಸಿಗುತ್ತಿದೆ. ರಾಜ್ಯದ ಕೆಲವು ಕ್ಲಬ್ಗಳು ಮುಂದೆ ಬಂದು ತರಬೇತಿ ಶಿಬಿರಗಳನ್ನು ನಡೆಸಿ ಪ್ರೋತ್ಸಾಹಿಸುತ್ತಿದೆ. ಕೆಲವು ತರಬೇತುದಾರರ ಕಠಿಣ ಪರಿಶ್ರಮವೂ ನಡೆಯುತ್ತಿದೆ. ಆದರೆ ಅದು ಕೇವಲ ಜಿಲ್ಲೆಗಳ ಒಳಗಡೆ ಸೀಮಿತ ವಾಗಿದೆಯೇ ಹೊರತು ಮೇಲೆ ಬರಲು ಸಾಧ್ಯವಾಗುತ್ತಿಲ್ಲ.
ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಕರ್ನಾಟಕ ಒಲಿಂಪಿಕ್ ಇಲಾಖೆಯವರು ಕೆಲವು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಸಿದ ಕರ್ನಾಟಕ ರಾಜ್ಯ ಕ್ರೀಡಾಕೂಟದಲ್ಲಿ ರಾಜ್ಯದ ಅತಿ ಹೆಚ್ಚು ವಾಲಿಬಾಲ್ ಆಟಗಾರರಿರುವ ಅತಿಥೇಯ ದಕ್ಷಿಣ ಕನ್ನಡ ಜಿಲ್ಲೆಗೆ ಭಾಗವಹಿಸಲು ಅವಕಾಶ ನೀಡದೆ ಇರುವುದು ಬಹಳಷ್ಟು ಆಶ್ಚರ್ಯ ಮೂಡಿಸಿದೆ ಎಂದು ಜಿಲ್ಲಾ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಂಕರ್ ಶೆಟ್ಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಾಜ್ಯ ಸರಕಾರದ ಕ್ರೀಡಾ ಇಲಾಖೆಗಳು ಎಚ್ಚೆತ್ತುಕೊಂಡು ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ವಾಲಿಬಾಲ್ ಫಲೋವರ್ಸ್ ಬಳಗದ ನಿರ್ದೇಶಕರುಗಳಾದ ಇಮ್ತಿಯಾಝ್ ಅಹ್ಮದ್ ಸಂತೆಬೆನ್ನೂರು, ಮಂಜುನಾಥ್ ಪಾಟ್ಕರ್ ಉಡಿಪೊ, ಇಕ್ಬಾಲ್ ಕೈರಂಗಳ ಹಾಗೂ ರವಿ ಗುಬ್ಬಿ ತುಮಕೂರು ರವರುಗಳು ಈ ಮೂಲಕ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾರೆ..
ರಾಜ್ಯದ ಈಗಿನ ವಾಲಿಬಾಲ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವು ಬಹಳ ಬೇಸರ ತಂದಿದೆ. ವಿ.ಎಫ್.ಐ ಚುಣಾವಣಾ ಪ್ರಕ್ರಿಯೆ ನಡೆದು ಹೊಸ ಆಡಳಿತ ಮಂಡಳಿ ಯಾವಾಗ ಬರುತ್ತೊ ಆವಾಗ ರಾಜ್ಯದ ಅಸೋಸಿಯೇಷನ್ ಚಟುವಟಿಕೆ ಆರಂಬವಾಗಬಹುದು ಎಂಬುವುದು ನನ್ನ ನಿರೀಕ್ಷೆ. ಅದಕ್ಕಿಂತ ಮೊದಲು ಯಾರಿಂದಲೂ ಏನೂ ನಿರೀಕ್ಷಿಸಿ ಪ್ರಯೋಜನವಿಲ್ಲ. ಜೂಲಿಯನ್ ಪೀಟರ್ ಅಂತರ್ರಾಷ್ಟ್ರೀಯ ಲೆಜೆಂಡ್ ವಾಲಿಬಾಲ್ ಪಟು ಹಾಸನ (ಲಂಡನ್) ಇವಾಗಿನ ವಿದ್ಯಮಾನದಲ್ಲಿ ವಾಲಿಬಾಲ್ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಕಟ್ಟಿರುವ ಚಿಗುರು ಮನಸ್ಸುಗಳಿಗೆ ಭರವಸೆಯೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಅಸೋಸಿಯೇಷನ್ ಮತ್ತು ಕ್ರೀಡಾ ಇಲಾಖೆಗಳಿಗೆ ಇರುವ ಜವಾಬ್ದಾರಿಯ ಜೊತೆ, ಯಾರು ವಾಲಿಬಾಲ್ನಲ್ಲಿ ಸಾಧನೆ ಮಾಡಿ ಸರಕಾರಿ ಉದ್ಯೋಗ ಗಿಟ್ಟಿಸಿ ಕೊಂಡಿದ್ದೀರೊ ಅವರೂ ತಮ್ಮ ಜವಾಬ್ದಾರಿ ಅರಿತು ಜನನ ಕಾರ್ಯಾಚರಿಸಿದರೆ ಪರಿಹಾರ ಕಂಡುಕೊಳ್ಳಬಹುದು. ಸುನಿಲ್ ಬಾಳಿಗ ರಾಷ್ಟ್ರೀಯ ಲೆಜೆಂಡ್ ವಾಲಿಬಾಲ್ ಪಟು ಬೆಂಗಳೂರು
ರಾಜ್ಯದ ಈಗಿನ ವಾಲಿಬಾಲ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವು ಬಹಳ ಬೇಸರ ತಂದಿದೆ. ವಿ.ಎಫ್.ಐ ಚುಣಾವಣಾ ಪ್ರಕ್ರಿಯೆ ನಡೆದು ಹೊಸ ಆಡಳಿತ ಮಂಡಳಿ ಯಾವಾಗ ಬರುತ್ತೊ ಆವಾಗ ರಾಜ್ಯದ ಅಸೋಸಿಯೇಷನ್ ಚಟುವಟಿಕೆ ಆರಂಬವಾಗಬಹುದು ಎಂಬುವುದು ನನ್ನ ನಿರೀಕ್ಷೆ. ಅದಕ್ಕಿಂತ ಮೊದಲು ಯಾರಿಂದಲೂ ಏನೂ ನಿರೀಕ್ಷಿಸಿ ಪ್ರಯೋಜನವಿಲ್ಲ.
ಜೂಲಿಯನ್ ಪೀಟರ್ ಅಂತರ್ರಾಷ್ಟ್ರೀಯ ಲೆಜೆಂಡ್ ವಾಲಿಬಾಲ್ ಪಟು ಹಾಸನ (ಲಂಡನ್)
ಇವಾಗಿನ ವಿದ್ಯಮಾನದಲ್ಲಿ ವಾಲಿಬಾಲ್ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಕಟ್ಟಿರುವ ಚಿಗುರು ಮನಸ್ಸುಗಳಿಗೆ ಭರವಸೆಯೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಅಸೋಸಿಯೇಷನ್ ಮತ್ತು ಕ್ರೀಡಾ ಇಲಾಖೆಗಳಿಗೆ ಇರುವ ಜವಾಬ್ದಾರಿಯ ಜೊತೆ, ಯಾರು ವಾಲಿಬಾಲ್ನಲ್ಲಿ ಸಾಧನೆ ಮಾಡಿ ಸರಕಾರಿ ಉದ್ಯೋಗ ಗಿಟ್ಟಿಸಿ ಕೊಂಡಿದ್ದೀರೊ ಅವರೂ ತಮ್ಮ ಜವಾಬ್ದಾರಿ ಅರಿತು ಜನನ ಕಾರ್ಯಾಚರಿಸಿದರೆ ಪರಿಹಾರ ಕಂಡುಕೊಳ್ಳಬಹುದು.
ಸುನಿಲ್ ಬಾಳಿಗ ರಾಷ್ಟ್ರೀಯ ಲೆಜೆಂಡ್ ವಾಲಿಬಾಲ್ ಪಟು ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.