ಮಂಗಳೂರು (www.vknews.in) : ಇಸ್ಮಾಮಿಕ್ ಪರಂಪರೆಯನ್ನು ಸಂರಕ್ಷಿಸಿ ಅಹ್ಲುಸ್ಸುನ್ನತ್ ವಲ್ ಜಮಾಅತ್ತಿನಲ್ಲಿ ಪ್ರಬಲವಾಗಿ ನೆಲೆ ನಿಲ್ಲುವ ಜಗತ್ತಿನ ಅತೀ ದೊಡ್ಡ ಸಂವಿಧಾನವಾಗಿದೆ ಮದ್ರಸ ಶಿಕ್ಷಣ.ಮನುಷ್ಯ ಜೀವನದ ಪ್ರತಿಯೊಂದು ಹೆಜ್ಜೆಗೂ ಮದ್ರಸ ಶಿಕ್ಷಣ ಅತ್ಯಾವಶ್ಯಕವಾಗಿದ್ದು ಮದ್ರಸ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಪ್ರಬುದ್ಧ ಸಮಾಜವನ್ನು ಕಟ್ಟೋಣ ಎಂದು ಬದ್ರಿಯಾ ಕೇಂದ್ರ ಜುಮಾ ಮಸೀದಿಯ ನೂತನ ಖತೀಬರಾದ K.H.U ಶಾಫಿ ಮದನಿ ಅಲ್ -ಅಝ್ಹರಿ ಕರಾಯ ಜುಮಾ ನಮಾಝ್ ನ ಬಳಿಕ ತನ್ನ ಪ್ರಭಾಷಣದಲ್ಲಿ ತಿಳಿಸಿದರು..
ಜುಮಾ ಖುತುಬಾದ ಸಾರಾಂಶವನ್ನು ವಿವರಿಸಿದ ಖತೀಬರು.. ಧಾರ್ಮಿಕ ವಿದ್ಯಾಭ್ಯಾಸದ ಮಹತ್ವವದ ಬಗ್ಗೆ ಅರ್ಥ ಗಂಭೀರವಾಗಿ ತಿಳಿಸುತ್ತಾ ಪ್ರಚಲಿತ ಸನ್ನಿ ವೇಷದಲ್ಲಿ ಯುವ ಸಮುದಾಯ ದಾರಿ ತಪ್ಪಲು ಕಾರಣವೇ ಧಾರ್ಮಿಕ ವಿದ್ಯಾಭ್ಯಾಸದ ಕೊರತೆಯಾಗಿದೆ ಆದುದರಿಂದ ಪ್ರತಿಯೊಂದು ಹೆಜ್ಜೆಯಲ್ಲೂ ಧಾರ್ಮಿಕತೆ ಮತ್ತು ನೈತಿಕತೆ ಪಾಲಿಸುವುದರೊಂದಿಗೆ ಇಸ್ಲಾಮಿಕ್ ಚೌಕಟ್ಟಿನಲ್ಲಿ ನಡೆಯಬೇಕೆಂದು ಕರೆ ನೀಡಿದರು.ಶವಾಲಿನ ಹೊಸ್ತಿಲಿನಲ್ಲಿ ಫತ್ಹೇ ಮುಬಾರಕ್ ಎಂಬ ಸಂದೇಶದೊಂದಿಗೆ ಮದ್ರಸ ಆರಂಭ ಗೊಳ್ಳುತ್ತಿದ್ದು ರಕ್ಷಕರು ಮದ್ರಸ ಶಿಕ್ಷಣದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕೆಂದು ತಿಳಿಸಿದರು.. ಜಮಾಅತ್ ನ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬಾಳುವುದರೊಂದಿಗೆ ಐಕ್ಯತೆಯ ಬಗ್ಗೆ ಪ್ರತಿಪಾದಿಸಿದರು.
ಕೇಂದ್ರ ಸರಕಾರದ ವಕ್ಫ್ ಬಿಲ್ ಅಂಗೀಕರಾದ ಬಗ್ಗೆ ಮಾತನಾಡಿದ ಖತೀಬರು 250 ಬಿಲಿಯನ್ ಇರುವ ಮುಸ್ಲಿಮರನ್ನು ಬಿಲ್ ಅಂಗೀಕರಿಸುವ ಮೂಲಕ ಭಯ ಪಡಿಸಲು ಯಾರಾದರೂ ಬಯಸಿದ್ದಲ್ಲಿ ಅದು ಭ್ರಮೆ ಮಾತ್ರ ಅಲ್ಲಾಹನ ಸೊತ್ತು ಆಗಿರುವ ವಕ್ಫ್ ನ್ನು ಅಲ್ಲಾಹ್ ಕಾಪಾಡುವನು ಮಾತ್ರವಲ್ಲ ಫ್ಯಾಸಿಸ್ಟ್ ಶಕ್ತಿಗಳ ಎಲ್ಲಾ ಕುತಂತ್ರಗಳನ್ನು ಅಲ್ಲಾಹು ವಿಫಲ ಗೊಳಿಸಲಿದ್ದಾನೆ.ಆದುದರಿಂದ ಪ್ರತಿಯೊಂದು ಹೆಜ್ಜೆಯಲ್ಲೂ ಮುಸ್ಲಿಂ ಸಮುದಾಯ ಭಿನ್ನ ಅಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಒಂದಾಗಬೇಕೆಂದು ಐಕ್ಯತೆಯ ಸಂದೇಶ ನೀಡಿದರು.
ರಿಪೋರ್ಟ್ – ಬದ್ರಿಯಾ ಕೇಂದ್ರ ಜುಮಾ ಮಸ್ಜಿದ್ ಬೊಳ್ಳಾಯಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.