(www.vknews.in) ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಜೂನ್ 11ರಂದು ರಚಿಸಲಾಯಿತು.
ಶಾಲಾ ನಾಯಕ ನ ಸ್ಥಾನಕ್ಕೆ 8ನೇ ತರಗತಿಯ ಮೊಹಮ್ಮದ್ ಶಿಯಾನ್ ಅಕ್ತರ್ ಹಾಗೂ ಚೈತ್ರೆಶ್ ವಿ ಕೆ ಸ್ಪರ್ಧಿಗಳಾಗಿದ್ದರು. ಶಾಲಾ ಉಪನಾಯಕನ ಸ್ಥಾನಕ್ಕೆ ನಂದನ ಒ, ಧನ್ವಿತ್, ಪುರುಷೋತ್ತಮ, ಮುಹಮ್ಮದ್ ಜಾಝಿಬ್ ಸ್ಪರ್ಧಿಗಳಾಗಿದ್ದರು. ಶಾಲಾ ನಾಯಕನ ಸ್ಥಾನಕ್ಕೆ ಮೊಹಮ್ಮದ್ ಶಿಯಾನ್ ಅಕ್ತರ್( ಸಾದಿಕ್ ಮತ್ತು ಸಬಿಯ ದಂಪತಿಗಳ ಪುತ್ರ) ಹಾಗೂ ಉಪನಾಯಕನ ಸ್ಥಾನಕ್ಕೆ ದನ್ವಿತ್ ( ಕುಶಾಲಪ್ಪ ಹಾಗೂ ಉಮಾ ದಂಪತಿಗಳ ಪುತ್ರ)ಆಯ್ಕೆ ಆಗಿರುತ್ತಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಗಂಗಾಧರ್ ಇವರ ನೇತೃತ್ವದಲ್ಲಿ ಮುಖ್ಯ ಗುರುಗಳ ಹಾಗು ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಚುನಾವಣೆ ಸುಸೂತ್ರವಾಗಿ ನಡೆಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಮಜಿದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.