ವಿಟ್ಲ(www.vknews.in):ದ. ಕ. ಜಿ.ಪಂ.ಹಿ.ಪ್ರಾ. ಶಾಲೆ ಕೊಡಂಗಾಯಿ ಇದರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ 1ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜ| ಕೆ ಎ ಹಮೀದ್ ಮೂರ್ಜೆಬೆಟ್ಟು ಇವರ ಅದ್ಯಕ್ಷತೆಯಲ್ಲಿ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಜರಗಿತು. ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಉಮೇಶ್ ಕೆ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಟಿ ಎಂ,ಶಿಕ್ಷಣ ತಜ್ಞರಾದ ಶ್ರೀ ವಲ್ಲಭ ತಂತ್ರಿಗಳು,Ln| ಸಂದೇಶ್ ಶೆಟ್ಟಿ ಬಿಕ್ನಾಜೆ,ರೋಹಿತ್ ರೈ ಚೆoಬರಡ್ಕ,ಎಸ್ ಡಿ ಎಂ ಸಿ ಸದಸ್ಯರುಗಳಾದ ಇಬ್ರಾಹಿಂ ಝ್ಹೈನಿ ,ಇಸ್ಮಾಯಿಲ್ ಶಾಲೆಬಳಿ,ಅಶ್ರಫ್, ಶರೀಫ್, ಸಿ ಎಚ್ ಮಹಮೂದ್ ಹಾಗೂ ಪೋಷಕರು ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಿದರು. ಶಿಕ್ಷಕಿಯರಾದ ಚೈತ್ರಾ, ವೇದಾವತಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಲೋಲಾಕ್ಷಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಾಣಿಶ್ರೀ ವಂದನೆ ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.