(www.vknews.in) : ಶೈಖುನ ತಾಜುಲ್ ಉಲಮಾ ಸೈಯದ್ ಅಬ್ದುಲ್ ರಹಮಾನ್ ಅಲ್ ಬುಖಾರಿ ಉಳ್ಳಾಲ ತಂಞಳ್ ರವರ ಸುಪುತ್ರರೂ, ತನ್ನ ಇರುವಿಕೆಯ ಮೂಲಕ ಕುಗ್ರಾಮವಾಗಿದ್ದ ಈಗಿನ ಕಡಬ ತಾಲೂಕಿಗೆ ಒಳಪಟ್ಟ ‘ಕೂರ’ ಪ್ರದೇಶವನ್ನು ಪ್ರಪಂಚಕ್ಕೆ ಪರಿಚಯಿಸಿದ ಶೈಖುನ ಸೈಯದ್ ಫಝಲ್ ಕೊಯಮ್ಮ ಅಲ್ ಬುಖಾರಿ ಕೂರತ್ ತಂಙಳ್ ರವರ ಪ್ರಪಥಮ ಊರೂಸ್ ಸಮಾರಂಭ, ಮಹಾನರ ಕೂಡುವಿಕಿಯಿಂದ ಸಂಪನ್ನವಾಗಿದೆ. ದೇಶ ವಿದೇಶದಿಂದ ಸಹಸ್ರಾರು ಮಂದಿ ಆಗಮಿಸಿ ತಂಞಳ್ ರವರ ದರ್ಗಾವನ್ನು ಸಂದರ್ಶಿಸಿ ದುವಾದಲ್ಲಿ ಪಾಲ್ಗೊಂಡಿದ್ದಾರೆ. ಈ ಮಹಾನ್ ಸಂಗಮಕ್ಕೆ ಇಂದು ಕೊನೆಯ ದಿನವಾಗಿದೆ.
ಕರ್ನಾಟಕದ ಘನವೆತ್ತ ವಿಧಾನಸಭಾ ಅಧ್ಯಕ್ಷರು, ಸರ್ವ ಜನಾಂಗದ ಪ್ರೀತಿಯ ನಾಯಕರು ಆದ,ಸನ್ಮಾನ್ಯ ಯು ಟಿ ಖಾದರ್ ರವರ ನೇತೃತ್ವದಲ್ಲಿ ಉರೂಸ್ ಸಮಾರಂಭದ ವ್ಯವಸ್ಥೆಗೆ ಸಂಬಂಧಪಟ್ಟಂತೆ, ಅಧಿಕಾರಿಗಳ ಮಟ್ಟದ ಸಭೆಯಲ್ಲಿ ನಿರ್ಣಯಿಸಿದಂತೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆದಿದೆ. ಆ ಮೂಲಕ ಕೂರತ್ ಪ್ರದೇಶವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮರ್ಹೂಂ ಶೈಕುನ ಫಝಲ್ ಕೊಯಮ್ಮ ತಂಗಳ್ ರವರು, ತನ್ನ ಬದುಕಿನದ್ದಕ್ಕೂ ಸರಳ ಮತ್ತು ಉದಾತ್ತ ಚಿಂತನೆಗಳ ಮೂಲಕ ಸಮುದಾಯದ ಮತ್ತು ಸಮಾಜದ ಮಾರ್ಗದರ್ಶಕರಾಗಿದ್ದು, ಸರ್ವಸಮುದಾಯದವರು ಅತ್ಯಂತ ಪ್ರೀತಿಯಿಂದ ಹಾಗೂ ಗೌರವದಿಂದ ಕಾಣುತ್ತಿದ್ದರು ಎಂಬುದಕ್ಕೆ, ಈ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವಧರ್ಮೀಯ ಸಹಸ್ರಾರು ಮಂದಿ ಸಾಕ್ಷಿಗಳಾಗಿದ್ದಾರೆ.
ಕೂರತ್ ತಂಗಳ್ ರವರು, ತನ್ನ ಬದುಕಿನದ್ದಕ್ಕೂ, ಧಾರ್ಮಿಕ ವಿಚಾರದಲ್ಲಿ ಎಂದು ರಾಜಿ ಮಾಡಿಕೊಂಡವರಲ್ಲ. ಅವರ ಮಾತುಗಳು ನಿಷ್ಟುರವಾಗಿದ್ದರೂ, ಆ ಮಾತಿನಲ್ಲಿ ಧಾರ್ಮಿಕ ವಿಚಾರ ಅಡಕವಾಗಿತ್ತು.ಲೌಕಿಕ ಜೀವನಕ್ಕಿಂತ ಪರಲೋಕದ ಜೀವನದ ಬಗ್ಗೆ,ಅತೀ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದ ಅವರು, ಅತೀ ಬೇಗನೆ, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. ಅವರು ಬದುಕಿದ ಕಾಲ, ಕಷ್ಟಕಾಪಣ್ಯಗಳನ್ನು ಹೇಳಿ ತನ್ನ ಹತ್ತಿರ ಬರುತ್ತಿರುವವರನ್ನು ಸಮಾನವಾಗಿ ಕಾಣುತ್ತಿದ್ದರು. ಧನಿಕ,ಬಡವ, ಪ್ರಭಾವಿ ಎಂದು ನೋಡುತ್ತಿರಲಿಲ್ಲ. ಏನನ್ನು ಹೇಳಬೇಕು ಅದನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದರು. ಹಲವಾರು ಜಮಾಹತುಗಳಿಗೆ ಖಾಝಿಗಳಾಗಿದ್ದ, ಅವರು ಖಾಝಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದರು.
ಅವರು ನಮ್ಮನ್ನಗಲಿ ಒಂದು ವರ್ಷವಾದರೂ, ಅವರ ಅಗಲುವಿಕೆಯ ನೋವನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಅಲ್ಲಾಹು ಅವರ ಸ್ಥಾನಮಾನವನ್ನು ಮತ್ತಷ್ಟು ಹೆಚ್ಚಿಸಿ, ಅವರೊಡನೆ ನಮ್ಮೆಲ್ಲರನ್ನು ಅನುಗ್ರಹಿಸಲಿ. ಆಮೀನ್.
ನೂರುದ್ದೀನ್ ಸಾಲ್ಮರ. ನ್ಯಾಯವಾದಿ ಮತ್ತು ನೋಟರಿ ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.