(www.vknews.in) : ಖುರ್ರತುಸ್ಸಾದಾತ್ ಯಾವ ರೀತಿಯಾಗಿ ಜನಮನಸ್ಸಲ್ಲಿ ಅಚ್ಚೊತ್ತಿ ನಿಂತಿದ್ದಾರೆಂಬುದಕ್ಕೆ ಉರೂಸಿನ ಕೊನೆಯ ದಿನ ಕುಗ್ರಾಮ ಕೂರತ್ ಸಾಕ್ಷಿಯಾಯಿತು. ಎಡೆಬಿಡದೆ ಜನಸಾಗರ ಕೂರತ್ ಮಖಾಮಿನತ್ತ ಹರಿಯುತ್ತಲೇ ಇದ್ದವು. ಯಾರಿಂದಲೂ ನಿಯಂತ್ರಿಸಲಾಗದೆ ಜನಸಾಗರ ಉಕ್ಕಿ ಹರಿಯುತ್ತಿತ್ತು. ಸ್ವಯಂ ಸೇವಕರು ಅಕ್ಷರಶಃ ಬಳಲಿ ಬೆಂಡಾಗಿದ್ದರು..
ಖುರ್ರತುಸ್ಸಾದಾತರ ಸಾನಿಧ್ಯ ಹರಸಿ ಬಂದವರು ಅಲ್ಲಿನ ತಬರ್ರುಕಿಗಾಗಿ ಮುಗಿಬಿದ್ದರು. ಉರೂಸು ಸಮಿತಿ ಬೇಕಾದಷ್ಟು ವ್ಯವಸ್ಥೆ ಮಾಡಿದ ಹೊರತಾಗಿಯೂ ನಿಯಂತ್ರಿಸಲಾಗದಷ್ಟು ಜನಸೇರಿತ್ತು. ಸ್ವಯಂ ಸೇವಕರ ಜೊತೆ ಪೋಲಿಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸುವಲ್ಲಿ ಪಾಡುಪಡುತ್ತಿದ್ದರು. ಎರೆಡೆರಡು SI ಗಳು ಖುದ್ದು ನಿಂತು ಎಲ್ಲ ಕಡೆ ತೆರಳಿ ವಿಶ್ರಮವಿಲ್ಲದೆ ಓಡಾಡಿ ಎಲ್ಲವೂ ಅಚ್ಚುಕಟ್ಟಾಗುವಂತೆ ನೋಡಿಕೊಳ್ಳುತ್ತಿದ್ದರು. ಸ್ವಯಂ ಸೇವಕರ ದಣಿವರಿಯದ ಓಡಾಟ, ನಿಯಂತ್ರಣ, ಅಧ್ವಾನ ಮೆಚ್ಚತ್ತಕ್ಕದ್ದು. ತಕ್ಕ ಮಟ್ಟಿಗೆ ಮಳೆ ನಿಂತದ್ದು ಕೂಡಾ ವರದಾನವಾಯಿತು.
ಸಂಜೆ 6ಗಂಟೆ ತನಕ ತಬರ್ರುಕ್ ವಿತರಿಸಲಾಗುತ್ತಿದೆ. ಎಲ್ಲರೂ ಸಂಯಮದಿಂದ ಸ್ವಯಂ ನಿಯಂತ್ರಣ ಇರಬೇಕೆಂದು ಅಗ್ಗಾಗೆ ಎನೌನ್ಸ್ ಮೊಳಗುತ್ತಲೇ ಇತ್ತು. ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ವಫಾತ್ ನಿಂದ ಹಿಡಿದು ಅಲ್ಲಿ ಮಖಾಂ ಪರಿಸರ ಯಾವಾಗಲೂ ರಾತ್ರಿ ಹಗಲೆನ್ನದೆ ಜನನಿಭಿಡವಾಗಿತ್ತು. ಇದೀಗ ಉರೂಸಿನ ಕೊನೆಯ ದಿನ ಅದೆಲ್ಲವನ್ನು ಮೀರಿಸಿ ಖುರ್ರತುಸ್ಸಾದಾತ್ ರವರ ಖಬೂಲಿಯ್ಯತ್ ಜನರೆಡೆಯಲ್ಲಿ ಯಾವ ರೀತಿ ಇದೆಯೆಂಬುದರ ಜ್ವಲಂತ ನಿದರ್ಶನವಾಗಿತ್ತು.
ಕೂರತ್ ಎಂಬ ಈ ಕುಗ್ರಾಮದಲ್ಲಿ ಒಬ್ಬ ಮಹಾನುಭಾವರ ಆಗಮನವಾಗಲಿದೆ. ಇಲ್ಲಿನ ಮಣ್ಣು ಮತ್ತು ನೀರಿಗೆ ರೋಗ ಶಮನವಿದೆ ಎಂದು 50 ವರ್ಷ ಮುಂಚೆ ಶೈಖುನಾ ಸಿ ಎಂ ವಲಿಯುಲ್ಲಾಹಿ [ಖ:ಸಿ] ಹೇಳಿದ ಮಾತು ಅಕ್ಷರಶಃ ನಿಜವಾಗಿದೆ. ಮಾಶಾಅಲ್ಲಾಹ್.! ಮಹಾನ್ ವಲಿಯ್ಯುಗಳ ಮಾತು ಅದೆಷ್ಟು ರೋಚಕ! ಹಾಗು ಸತ್ಯ! ಅದೆಲ್ಲವನ್ನು ಕಾಣಲು ಮತ್ತು ಅನುಭವಿಸಲು ಅಲ್ಲಾಹನು ನಮಗೆ ತೌಫೀಕ್ ನೀಡಿದನು ಅಲ್ ಹಂದುಲಿಲ್ಲಾಹ್.. ಅಲ್ಲಾಹನು ಖುರ್ರತುಸ್ಸಾದಾತ್ ಸಹಿತ ಸರ್ವ ಮಹಾನುಭಾವರ ಮದದ್ ನಮಗೆ ನೀಡಿ ಅನುಗ್ರಹಿಸಲಿ ಆಮೀನ್..
– ಅಬೂಶಝ ಕೂರ್ನಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.