ಮಂಗಳೂರು (www.vknews.in) : ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್ (32) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ಫೋಸಿಸ್ ಉದ್ಯೋಗಿಯಾಗಿರುವ ಮುಹಮ್ಮದ್ ಹಾಶೀರ್ ಗುರುವಾರ ಬೆಳಿಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ, ಹಾಗೂ ಒಂದು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.
ಮೃತರು ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಗಾಣದಬೆಟ್ಟು ನಿವಾಸಿಯಾಗಿರುವ ಹಾಗೂ ಮಂಗಳೂರಿನ ಪ್ರಕಾಶ್ ಬೀಡಿ ಕಂಪೆನಿಯ ಉದ್ಯೋಗಿ G.B. ಹಸನಬ್ಬ(G.B. ಬಾವ)ರವರ ಹಿರಿಯ ಮಗ ಮತ್ತು ಸಾಬೀತ್ ರವರ ಅಣ್ಣ. ಒಂದು ವರ್ಷದ ಹೆಣ್ಣು ಮಗುವಿನ ತಂದೆ.
ಸಂತಾಪ.. ಮೊಹಮ್ಮದ್ ಹಾಶಿರ್ ನಿಧನ ವಾರ್ತೆ ಕೇಳಿ ತುಂಬ ದುಃಖವಾಯಿತು, ಶಾಂತ ಸ್ವಭಾವದ ವ್ಯಕ್ತಿ, ನಿಧನ ವಾರ್ತೆ ಕೇಳಿ ನನಗೆ ನಂಬಲು ಅಸಾಧ್ಯವಾಯಿತು. ಮನೆಯವರಿಗೂ ಹಾಗೂ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ಅಲ್ಲಾಹನು ಕರುಣಿಸಲಿ ಎಂದು ಲೈಕೋರಸ್ ಡೆವಲಪರ್ಸ್ ಮಾಲಕ ಝುಬೇರ್, ಸಂತಾಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ನನ್ನ ಕಣ್ಮುಂದೆವೇ ಬೆಳೆದ ಹುಡುಗ ಇಷ್ಟು ಬೇಗವೇ ನಮ್ಮನ್ನು ಅಗಲಿರುವುದು ಬಹಳ ನೋವಿನ ಸಂಗತಿ ಎಂದರು. ಅಲ್ಲದೇ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ಸೂಚಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.