ದುಬೈ (www.vknews.in) | ಒಮಾನ್ ನ ದೋಫರ್ ಗವರ್ನರೇಟ್ ನಲ್ಲಿ ಮೂರು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಒಮಾನ್ ಪೊಲೀಸರು ತಿಳಿಸಿದ್ದಾರೆ. ಸುಲ್ತಾನ್ ಸಯೀದ್ ಬಿನ್ ತೈಮೂರ್ ರಸ್ತೆಯ ಮಕ್ಷನ್ ಬಳಿ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಇಬ್ಬರು ಒಮಾನ್ ಪ್ರಜೆಗಳು ಮತ್ತು ಮೂವರು ಯುಎಇ ಪ್ರಜೆಗಳು ಮೃತಪಟ್ಟಿದ್ದಾರೆ.
ಗಾಯಗೊಂಡ 11 ಜನರಲ್ಲಿ ಇಬ್ಬರು ಒಮಾನ್ ಪ್ರಜೆಗಳು ಮತ್ತು ಐದು ಮಕ್ಕಳು ಸೇರಿದಂತೆ ಒಂಬತ್ತು ಯುಎಇ ಪ್ರಜೆಗಳು ಇದ್ದಾರೆ. ಕಳೆದ ವಾರ ಒಮಾನ್ ನಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದರು. ಇಸ್ಕಿ ಗವರ್ನರೇಟ್ನ ಅಲ್-ರುಸೈಸ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಬಸ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಕ್ಕಳು ಗಾಯಗೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.