(www.vknews.in) : ಈ ಜಗತ್ತಿನಲ್ಲಿ ಬದುಕುವ ಜನರ ಲೌಕಿಕ ಮಟ್ಟ ಎಷ್ಟೇ ಅಭಿವೃದ್ದಿ ಹೊಂದಿದರೂ ಅವರ ನೈತಿಕ ಮಟ್ಟ ಕುಸಿದರೆ ಅಲ್ಲಿ ಜನ ಜೀವನ ದುಸ್ತರವಾಗುತ್ತದೆ.
ಈ ಕಾರಣಕ್ಕಾಗಿ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಮೋರಲ್ ಎಜುಕೇಶನ್ ನೀಡುವುದು ಬಹಳ ಮುಖ್ಯವಾಗುತ್ತದೆ. ನೈತಿಕತೆಗೆ ಬಹಳ ಪ್ರಾಮುಖ್ಯತೆ ನೀಡುವ ಮುಸ್ಲಿಮರು ತಮ್ಮ ಮಕ್ಕಳಿಗೆ ಧಾರ್ಮಿಕ ಜ್ಞಾನ ನೀಡಲಿಕ್ಕಾಗಿಯೇ ಸ್ವಂತ ಖರ್ಚಿನಿಂದ ಮದ್ರಸಗಳನ್ನು ಸ್ಥಾಪಿಸಿ ಅದ್ಯಾಪಕರನ್ನಿಟ್ಟು ಕಲಿಸುವ ಪರಿಪಾಠ ರೂಡಿಸಿ ಕೊಂಡಿದ್ದಾರೆ. ಮುಹಲ್ಲಿಂ ಎಂದು ಗುರುತಿಸಲ್ಪಡುವ ಈ ಅಧ್ಯಾಪಕರ ಪ್ರಾಧಾನ್ಯತೆಯನ್ನು ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಇಂದಿನ ದಿನ ಮುಹಲ್ಲಿಂ ಡೇ ಎಂದು ಆಚರಿಸಲಾಗುತ್ತೆ.
ಸಾಮಾನ್ಯವಾಗಿ ಎಲ್ಲಾ ಕಚೇರಿ ಕೆಲಸ ಕಾರ್ಯಗಳು,ಅಂಗಡಿ ಮುಗ್ಗಟ್ಟುಗಳು,ಶಾಲಾ ಶಿಕ್ಷಣ ಸಂಸ್ಥೆಗಳು ಆರಂಭವಾಗುವುದು ಬೆಳಗ್ಗೆ ಒಂಬತ್ತು ವರೆ ಘಂಟೆ ನಂತರವಾದರೆ ಮುಸ್ಲಿಂ ಸಮುದಾಯದ ಮಕ್ಕಳಿಗೆ ಧಾರ್ಮಿಕ ,ನೈತಿಕ ಜ್ಞಾನ ನೀಡುವ ಮದ್ರಸ ಶಾಲೆಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಬಹುತೇಕ ಬೆಳಗ್ಗೆ ಆರುವರೆ ಘಂಟೆಗೆ ಆರಂಭ ಗೊಳ್ಳುತ್ತೆ. ಮತ್ತೆ ಸಂಜೆ ಆರುವರೆ ಘಂಟೆಯಿಂದ ಎಂಟುವರೆ ತನಕ ಇರುತ್ತೆ. ಲೌಕಿಕ ಶಾಲಾ ಅಧ್ಯಾಪಕರು ಬೆಳಗ್ಗಿನಿಂದ ಸಂಜೆ ತನಕ ಕಲಿಸುವ ಅದೇ ನಾಲ್ಕು ತಾಸು ಟೈಮು ಮದ್ರಸ ಅಧ್ಯಾಪಕರೂ ಡ್ಯೂಟಿ ಮಾಡುತ್ತಾರೆಂದರ್ಥ.
ಇನ್ನು ಈ ಹುದ್ದೆ ನಿರ್ವಹಿಸ ಬೇಕಾದರೆ ಸ್ವಂತ ಊರಿನಲ್ಲಿ ಅವಕಾಶ ಸಿಗದೇ ಯಾವ್ಯಾವುದೋ ದೂರದೂರಲ್ಲಿ ಹೋಗಿ ಜವಾಬ್ದಾರಿ ವಹಿಸಿಕೊಳ್ಳ ಬೇಕಾಗುತ್ತದೆ. ವಾರಕ್ಕೊಂದು ಮಾತ್ರ ರಜೆ. ರಜೆಯಲ್ಲಿ ಒಂದು ರಾತ್ರಿ ಮನೆಯಲ್ಲಿ ತಂಗಿ ಮತ್ತೆ ಕೆಲಸಕ್ಕೆ ಹಾಜರಾಗ ಬೇಕಾಗುತ್ತದೆ. ದಿನಕ್ಕೆ ಎಂಟೊಂಬೈನೂರು ಸಂಪಾದಿಸುವ ಕೂಲಿನಾಲಿಗಳೂ ಪ್ರತೀ ದಿನ ಸಂಜೆ ಮನೆ ತಲುಪಿ ಮರುದಿನ ಬೆಳಗ್ಗೆ ಕೆಲಸಕ್ಕೆ ಹೊರಡುತ್ತಾರೆಂದರೆ ಮುಹಲ್ಲಿಂ ವರ್ಗಕ್ಕೆ ಮನೆಮಂದಿಗಳೊಂದಿಗೆ ಕಳೆಯಲು ಅಷ್ಟೂ ಅವಕಾಶ ಇರುವುದಿಲ್ಲ ಎಂಬುದು ಇಲ್ಲಿ ಗಮನಿಸ ಬೇಕಾದ ಅಂಶ.
ಇಂತಹ ಸಂದಿಗ್ದತೆಯಲ್ಲಿ ಕೆಲಸಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿ ಕೊಂಡು ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿರುವ ಮುಹಲ್ಲಿಂ ವರ್ಗಕ್ಕೆ ಸಮುದಾಯದಿಂದ ಸಿಗುವ ಪ್ರೋತ್ಸಾಹ ಏನೆಂದು ಕೇಳಿದರೆ ಬರೀ ಸಿಂಪಥಿ ಮಾತ್ರ! ಹೌದು, ಬಹುತೇಕ ಮುಹಲ್ಲಿಮರಿಗೆ ನೀಡಲಾಗುವ ಸಂಭಲ ಲೆಕ್ಕಾಕಿದರೆ ದಿನಕ್ಕೆ ನಾನೂರು ಮೀರುವುದಿಲ್ಲ. ಇನ್ನು ಮದ್ರಸ ಬಿಟ್ಟ ನಂತರ ಹಗಲೊತ್ತು ಬೇರೆನಾದರೂ ಕೆಲಸ ಕಾರ್ಯ ಮಾಡೋಣವೆಂದರೆ ಅದಕ್ಕೆ ನಮ್ಮ ಜನರ ಗೊಡ್ಡು ಭಾವನೆ ಅನುಮತಿ ನೀಡೋದಿಲ್ಲ.
ಅದು ಮಾತ್ರವಲ್ಲದೇ ಒಮ್ಮೆ ಬಿಳಿ ಶುಭ ವಸ್ತ್ರ ಮುಂಡಾಸು ಟೋಪಿ ದರಿಸಿದರೆ ಮತ್ತೆ ಅವರಿಂದ ಬೇರೆ ರೀತಿಯ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಮನಗಂಡು ಹೊಸ ತಲೆಮಾರಿನ ಯುವ ವಿದ್ವಾಂಸರು ಈ ಫೀಲ್ಡಿನಿಂದ ದೂರವುಳಿದು ಬೇರೆ ಕ್ಷೇತ್ರಕ್ಕೆ ಲಗ್ಗೆ ಇಡುವ ಪ್ರವೃತಿ ವ್ಯಾಪಕಗೊಂಡಿದೆ. ಮುಂದೆ ಮುಹಲ್ಲಿಮರ ಕೊರತೆ ಉಂಟಾಗ ಬಹುದು. ಆದ್ದರಿಂದ ನಮ್ಮ ಮಕ್ಕಳ ಹಿತೈಷಿಗಳೂ ಗುರುವರ್ಯರೂ ಆಗಿರುವ ಮುಹಲ್ಲಿಂ ವರ್ಗಕ್ಕೆ ಸಮುದಾಯದ ಜನರ ಬೆಂಬಲ ಬೇಕಾಗಿದೆ. ಅವರ ಆರ್ಥಿಕ ಸಮಸ್ಯೆಗಳನ್ನು ಅರ್ಥ ಮಾಡಿ ಕೊಂಡು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ.
ಅದೇ ರೀತಿ ವಕಫ್ ಇಲಾಖೆಯಿಂದ ಇಮಾಮ್ ಮೊಹದ್ದಿನ್ ರಿಗೆ ನೀಡಲಾಗುವ ಗೌರವಧನವನ್ನು ಮುಹಲ್ಲಿಂ ವರ್ಗಕ್ಕೂ ವಿಸ್ತರಿಸ ಬೇಕಾಗಿದೆ. ಬಡ ವರ್ಗದಿಂದ ಬಂದ ಮುಹಲ್ಲಿಂ ವರ್ಗವನ್ನು ಮೇಲೆತ್ತುವ ಕೆಲಸ ಸಮುದಾಯ ಹಾಗೂ ಮೊಹಲ್ಲಾ ವತಿಯಿಂದ ಆಗಲಿ. ಎಲ್ಲಾ ಮುಹಲ್ಲಿಮ್ ಉಸ್ತಾದರಿಗೆ ಮುಹಲ್ಲಿಂ ಡೇ ಯ ಶುಭಾಶಯಗಳು..
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.