(www.vknews.in) : ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಯವರು ಕಲ್ಕಟ್ಟ ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ನಡೆದ ಮಾದಕತೆ ವಿರುದ್ಧ ಪೋಷಕರಿಗೆ ಉಪದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾನು ಅಲ್ ಅನ್ಸಾರ್ ನಲ್ಲಿರುವಾಗ ಶಾಫಿ ಸಅದಿ ಉಸ್ತಾದ್ ರೊಂದಿಗೆ ನನಗೆ ತುಂಬಾ ಆತ್ಮೀಯತೆ ಇತ್ತು. ಕೆಲವು ವರ್ಷಗಳಿಂದ ಅವರ ಸಂಪರ್ಕದಲ್ಲಿರಲಿಲ್ಲ. ಕಲ್ಕಟ್ಟಕ್ಕೆ ಶಾಫಿ ಸಅದಿ ಉಸ್ತಾದ್ ರವರು ತನ್ನ ಹಿಂದಿನ ನೆನಪುಗಳ ಬುತ್ತಿಯನ್ನು ಬಿಚ್ಚಿದರು. ತಾನು ಈ ಪ್ರದೇಶಕ್ಕೆ ಹಿಂದೆ ಬಂದ ಬಗ್ಗೆ ನೆನಪಿಸಿದರು. ಬಳಿಕ ನಮ್ಮ ಮನೆಗೆ ಉಸ್ತಾದರು ನಾನು ನೀಡಿದ ಆತಿಥ್ಯ ವನ್ನು ಪ್ರೀತಿಯಿಂದ ಸ್ವೀಕರಿಸಿ ತುಂಬಾ ಆತ್ಮೀಯತೆಯಿಂದ ಮಾತನಾಡಿದರು.
ಒಬ್ಬ ಯಶಸ್ವೀ ನಾಯಕನಿಗಿರಬೇಕಾದ ಎಲ್ಲಾ ಅರ್ಹತೆಗಳು ಶಾಫಿ ಸಅದಿ ಯವರಲ್ಲಿ ಎದ್ದು ಕಾಣುತ್ತಿತ್ತು. ಅವರ ಮಾತಿನುದ್ದಕ್ಕೂ ಸಮಾಜದ ಕುರಿತಾದ ಅತಿಯಾದ ಕಳಕಳಿ ಪ್ರೀತಿ ವ್ಯಕ್ತವಾಗುತ್ತಿತ್ತು. ತನಗೆ ದೊಡ್ಡ ಹುದ್ದೆ ಸಿಕ್ಕಿದ ಬಗ್ಗೆ ಯಾವುದೇ ಹಮ್ಮು ಬಿಮ್ಮಿಲ್ಲದೆ ಅತ್ಯಂತ ಸರಳತೆಯಿಂದ ವರ್ತಿಸುವ ಅವರ ಸ್ವಭಾವಗುಣ ನನಗೆ ತುಂಬಾ ಇಷ್ಟವಾಯಿತು.
ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿರುವ ಶಾಫಿ ಸಅದಿ ಉಸ್ತಾದ್ ರವರು ರಾಜ್ಯ ವಕ್ಫ್ ಇಲಾಖೆಗೆ ಹೊಸ ಕಾಯಕಲ್ಪ,ನ್ಯಾಯ ನೀಡಿದ್ದಾರೆಂದರೆ ಅದು ಅತಿಶಯೋಕ್ತಿಯಾಗಲಾರದು. ಅನ್ಯರ ಪಾಲಾಗಿದ್ದ ಸಾವಿರಾರು ಎಕರೆ ಭೂಮಿಯನ್ನು ಮರಳಿ ವಕ್ಫ್ ಬೋರ್ಡ್ ಅಧೀನಕ್ಕೆ ತರುವಲ್ಲಿ ಉಸ್ತಾದ್ ರವರು ಯಶಸ್ವಿಯಾಗಿದ್ದಾರೆ ಎಂದು ಅಭಿಮಾನದಿಂದ ಹೇಳಬಲ್ಲೆ. ಕರ್ನಾಟಕ ರಾಜ್ಯದಲ್ಲಿ ಎಷ್ಟೋ ಅಭಿಮಾನಿಗಳನ್ನು ಹೊಂದಿರುವ ಶಾಫಿ ಸಅದಿ ಯವರು ಒಬ್ಬ ಸಮಾಜಸುಧಾರಕ ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದಾರೆ.
ಶಾಫಿ ಸಅದಿ ಯವರೊಂದಿಗೆ ಡಾ| ಝೈನಿ ಕಾಮಿಲ್ ಸಖಾಫಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಅಶ್ರಫ್ ಕಿನಾರ, ಇಸ್ಮಾಯಿಲ್ ಸಅದಿ ಕಿನ್ಯ, ರಾಜ್ಯ ಎಸ್ ವೈ ಎಸ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಕಲ್ಕಟ್ಟ ಜಮಾಅತ್ ನ ಪ್ರಮುಖರಾದ ಖಂಡಿಗ ಮುಹಮ್ಮದ್ ಹಾಜಿ, ಕಲ್ಕಟ್ಟ ಮಸೀದಿ ಕಾರ್ಯದರ್ಶಿ ಮೋನು, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಮಾಸ್ಟರ್, ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಕಟ್ಟ ವಲಯ ಮಾಜಿ ಅಧ್ಯಕ್ಷ ಇಬ್ರಾಹಿಂ ಮದನಿ ಮೊದಲಾವರಿದ್ದರು.
ಮಾದಕತೆ ಬಗ್ಗೆ ಡಾ| ಝೈನಿ ಕಾಮಿಲ್ ಸಖಾಫಿ ಉಸ್ತಾದ್ ರು ನಡೆಸಿದ ತರಗತಿ ಮಹಿಳೆಯರಿಗೆ ವಿಶೇಷವಾಗಿ ಮನಮುಟ್ಟುವಂತಿತ್ತು. ಉಸ್ತಾದ್ ರ ಹೃದಯಸ್ಪರ್ಶಿ ತರಗತಿ ಎಲ್ಲಾ ವರ್ಗದ ಜನರಿಗೆ ಉಪಕಾರವಾಗುವ ಶೈಲಿಯಲ್ಲಿತ್ತು. ಉಸ್ತಾದ್ ರ ತರಗತಿ ನೋಡಿ ಇನ್ನು ಮಹಿಳೆಯರಿಗೆಂದೇ ವಿಶೇಷ ತರಗತಿ ನಡೆಸಬೇಕೆಂಬ ಹಂಬಲ ಮೂಡಿದೆ. ಕರ್ನಾಟಕ ರಾಜ್ಯದ ಸುನ್ನೀ ನಾಯಕರಾದ ಶಾಫಿ ಸಅದಿ ಉಸ್ತಾದ್ ಮತ್ತು ಡಾ| ಝೈನಿ ಕಾಮಿಲ್ ಸಖಾಫಿ ಉಸ್ತಾದ್ ರವರು ನಮ್ಮ ಕಲ್ಕಟ್ಟ ಮಣ್ಣಿಗೆ ಪಾದಸ್ಪರ್ಶಮಾಡಿದ್ದು ನಮಗೆ ತುಂಬಾ ಸಂತೋಷ ತಂದಿದೆ.
✍ ಡಿ.ಐ.ಅಬೂಬಕರ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.