(www.vknews.in) : 29 – 07- 2025 ರಂದು ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಕಂಕನಾಡಿ ಜಮೀಯತುಲ್ ಫಲಾಹ ಸಭಾಂಗಣದಲ್ಲಿ ಮಿತ್ತೂರು ಹಂಝ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಜಮಾಲುದ್ದೀನ್ ವರದಿ ಮಂಡಿಸಿದರು. ಕೋಶಾಧಿಕಾರಿ ಅಬ್ದುಲ್ ಖಾದರ್ ಬಾವಾ ಲೆಕ್ಕಪತ್ರ ಮಂಡಿಸಿದರು.ಅಥಿತಿಗಳಾಗಿ ತಯ್ಯೂಬ್ ಸಾಲ್ಮರ, KKMA ಪದಾಧಿಕಾರಿಗಳಾದ ಅಯೂಬ್, ಇಕ್ಬಾಲ್, ಮತ್ತು ರೆಹ್ಮಾನ್ ಖಾನ್ ಭಾಗವಹಿಸಿದ್ದರು.
2025-27 ನೇ ಸಾಲಿಗೆ ಗೌರವಾಧ್ಯಕ್ಷರಾಗಿ ಹಂಝ ಮಿತ್ತೂರು, ಅಧ್ಯಕ್ಷರಾಗಿ ಸಾಹುಲ್ ಹಮೀದ್ ತಂಗಳ್, ಕಾರ್ಯದರ್ಶಿಯಾಗಿ ಮೆಲ್ವಿನ್ ಲೋಬೊ, ಉಪಾಧ್ಯಕ್ಷರಾಗಿ ಆದಂ ಬ್ಯಾರಿ, ಮೊಹಮ್ಮದ್ ಹುಸೈನ್ ಆರಕಿ, ಅಬ್ದುಲ್ ಹಮೀದ್ ಉಚ್ಚಿಲ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಬಾವಾ, ಜೊತೆ ಕಾರ್ಯದರ್ಶಿಯಾಗಿ ಯೂಸುಫ್ ಆಲಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೀತೇಶ್ ಕುಮಾರ್, ಬಶೀರ್ ಅಹಮದ್, ಇಬ್ರಾಹಿಂ ಜೋಗಿಬೆಟ್ಟು,ಇಸ್ಮಾಯಿಲ್ ಶರೀಫ್ ಮತ್ತು ಅಬ್ದುಲ್ ರಝಾಕ್ ಮುಟ್ಟಿಕಲ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಪ್ರಧಾನ ಸಲಹೆಗಾರರಾದ ಮಹಮದ್ ಬ್ಯಾರಿ ಬೊಳ್ಳಾಯಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.