(www.vknews.in) : ನವೆಂಬರ್ 9 ರಂದು ರವಿವಾರ ಮಂಚಿ ಕೊಳ್ನಾಡು ನೂಜಿಬೈಲು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರಮೋಟರ್ಸ್ ವತಿಯಿಂದ ನೆಹರೂ ಜನ್ಮ ದಿನಾಚರಣೆ ಪ್ರಯುಕ್ತ ಹತ್ತು ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಯಿತು.
ಭಾರತೀಯ ಸೇನೆಯ ನಿವೃತ್ತ ಯೋಧ ಉದಯ ಕುಮಾರ್ ರಾವ್ ಮತ್ತು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ಬಾಸ್ ಅಲಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ಬಾಸ್ ಅಲಿ ಅವರು ಯುವಕರು ದೈಹಿಕವಾಗಿ ಮಾನಸಿಕವಾಗಿ ಬಲಿಷ್ಠ ಆಗಿರಲು ಕ್ರೀಡೆ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾ ಕೂಟಕ್ಕೆ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಮಾತನಾಡಿ ಎಲ್ಲಾ ಜಾತಿ ಧರ್ಮ ಒಂದುಗೂಡಿ ಆಡುವ ಕ್ರೀಡಾ ಧರ್ಮ ಉಳಿಸಿಕೊಂಡು ಹೋಗುವ ಮೂಲಕ ನೆಹರೂ ಅವರ ಆಶಯವನ್ನು ಜೀವಂತ ಇರಿಸಬಹುದು ಎಂದು ಹೇಳಿ ನೆರೆದ ಹತ್ತು ತಂಡಗಳ ಆಟಗಾರರಿಗೆ ಪ್ರೇಕ್ಷಕರಿಗೆ ಆಯೋಜಕರಿಗೆ ಶುಭ ಹಾರೈಸಿದರು.
ಯುವ ಕಾಂಗ್ರೆಸ್ ಮುಡಿಪು ಬ್ಲಾಕ್ ಅಧ್ಯಕ್ಷ ಪ್ರತಾಪ್ ಚಂದ್ರ ಕರ್ಕೇರ, ವಲಯ ಕಾಂಗ್ರೆಸ್ ಇರಾ ಅಧ್ಯಕ್ಷ, ಅಶ್ರಫ್ ಸಂಪಿಲ , ಬೋಳಂತೂರು ಗ್ರಾಮ ಪಂಚಾಯತ್ ಸದಸ್ಯ ಅನ್ಸಾರ್, ಯುವ ಕಾಂಗ್ರೆಸ್ ಮುಖಂಡ ಇಂತಿಯಾಝ್ ಕಲ್ಲಡ್ಕ ಉಪಸ್ಥಿತರಿದ್ದರು.
ಸಂಜೆ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕೆಡಿಪಿ ಸದಸ್ಯ ಎಬಿ ಅಬ್ದುಲ್ಲಾ ವಹಿಸಿದ್ದರು, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಮಂಚಿ, ಲಯನ್ ನರಸಿಂಹ , ಮಹಮ್ಮದ್ ಮೂಸಾ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕ್ರೀಡಾ ಪ್ರೋತ್ಸಾಹಕ ಲತೀಫ್ ಕುಕ್ಕಾಜೆ, ಹನೀಫ್ ಎಂ.ಎ.,ಇಬ್ರಾಹಿಂ ಎಂ. ಕೆ. ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯ ಎಸ್ ಪಿ ಬ್ರದರ್ಸ್ ತಂಡವು ಚಾಂಪಿಯನ್ ಆಗಿ ಮೂಡಿ ಬಂದರೆ ಫ್ರೆಂಡ್ಸ್ ಸಾಲೆತ್ತೂರು ತಂಡ ರನ್ನರ್ ಪ್ರಶಸ್ತಿಗೆ ಭಾಜನ ವಾಯಿತು . ಬುರ್ಜ್ ಅಲ್ ಸಾಹಿಲ್ ಸೌದಿ ಅರೇಬಿಯಾ ಇದರ ಮುಖ್ಯಸ್ಥ ನಿಸಾರ್ ಮಂಚಿ ಕ್ರೀಡಾ ಕೂಟಕ್ಕೆ ಟ್ರೋಫಿ ಕೊಡುಗೆ ನೀಡಿ ಸಹಕಾರ ನೀಡಿದ್ದು ನಝೀರ್ ಕುಕ್ಕಾಜೆ ವೀಕ್ಷಕ ವಿವರಣೆ ನೀಡಿದರು. ಇಕ್ಬಾಲ್ ಮಂಚಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.