(www.vknews.in) : ಇದು ಚಿನ್ನದ ಜಿಲ್ಲೆ ಕೋಲಾರದ ಗಿನ್ನೆಸ್ ದಾಖಲೆಯ ಸಾಧಕ, ವಿಶ್ವದಾಖಲೆಗಳ ಸರದಾರ, ಗ್ರ್ಯಾಂಡ್ ಮಾಸ್ಟರ್ ತಾನೀಶ್ ಬಗ್ಗೆ ಅದ್ಬುತ ಲೇಖನ.
ವರುಷ ಏಳು, ಸಾಧನೆ ಎಲ್ಲೆಲ್ಲೂ!!!…
ಕೋಲಾರ ಜಿಲ್ಲೆಯ ಲಕ್ಕೂರಿನ ತಾನೀಶ್ ಎಂಬ ‘ಸೂಪರ್ ಮೆಮೊರಿ ಕಿಡ್’ ‘ಕ್ರೇಜಿ ಟ್ಯಾಲೆಂಟ್’ ಖ್ಯಾತಿಯ ಗ್ರ್ಯಾಂಡ್ ಮಾಸ್ಟರ್.
ಕೋಲಾರ ಜಿಲ್ಲೆಯ ಈ ಪೋರನಿಗೆ ವರುಷ ಏಳು ; ಸಾಧನೆ ಮಾತ್ರ ಎಲ್ಲೆಲ್ಲೊ. ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಕರಾಟೆಯಲ್ಲಿ ಗಿನ್ನೆಸ್ ದಾಖಲೆ ಸೇರಿದಂತೆ 17 ದಾಖಲೆಗಳ ಪಟ್ಟಿಗೆ ಈ ಕಂದನ ಹೆಸರು ಸೇರಿದೆ.
ಈ ವಿಶ್ವಮಟ್ಟದಲ್ಲಿನ ಅಪ್ರತಿಮ ದಾಖಲೆಗಳ ಸರದಾರನ ಹೆಸರು ತಾನೀಶ್ ಎನ್. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು. ಇವರ ತಂದೆ ಯುವಕವಿ, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ತಾಯಿ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಶ್ವೇತಾ ನಾಗರಾಜ್.
ಮಕ್ಕಳ ದಿನ ಇಂದು ಜಿಲ್ಲೆಯ ಜನರು, ‘ಸೂಪರ್ ಮೆಮೊರಿ ಕಿಡ್ ಎಂದೂ ಕರೆಯುತ್ತಾರೆ. ಅದಕ್ಕೆ ಈ ಕಂದನ ಗ್ರಹಣ ಶಕ್ತಿ ಹಾಗೂ ಬುದ್ಧಿವಂತಿಕೆ ಕಾರಣ.
ಚಂದನ ಟಿ.ವಿಯಲ್ಲಿ ಪ್ರಸಾರವಾಗುವ ಚಿಣ್ಣರ ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಈತನದ್ದು.
ಭರತನಾಟ್ಯವನ್ನೂ ಕಲಿತು ಪ್ರದರ್ಶಿಸುತ್ತಿದ್ದಾನೆ. ಏಕವ್ಯಕ್ತಿ ಪ್ರದರ್ಶನದ ಮೂಲಕ ಅಂತರ-ರಾಷ್ಟ್ರೀಯ ಪುಸ್ತಕದಲ್ಲಿ ದಾಖಲೆ (International book of world record), ರಬಾ ಪುಸ್ತಕದಲ್ಲಿ ಅಂತರ ರಾಷ್ಟ್ರೀಯ ದಾಖಲೆ (Raaba book of world record) đ ಸೆಳೆದಿದ್ದಾನೆ. ಮಲೇಷ್ಯಾದಲ್ಲಿ ಈಚೆಗೆ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.
ತಾನೀಶ್ನ ಈ ಸಾಧನೆಯ ಹಾದಿಯ ಕಲಿಕೆಗೆ ತಾಯಿಯೇ ಮೊದಲ ಗುರು, ಒಂದು ವರ್ಷದ ಮಗು ಇರುವಾಗಲೇ ಪುಸ್ತಕ ತಂದು ಚಿತ್ರ ತೋರಿಸಿ ಕಲಿಕೆಗೆ ಅಡಿಪಾಯ ಹಾಕಿಕೊಟ್ಟರು. ಆ ಸಂದರ್ಭದಲ್ಲಿ ಸರಿಸುಮಾರು 12 ಪುಸ್ತಕಗಳನ್ನು (ವಾಹನಗಳು, ತರಕಾರಿಗಳು, ಹಣ್ಣುಗಳು, ಇತರೆ) ಗುರುತಿಸಿ ಹೇಳಿದ್ದ. ವಿಶ್ವದ 197 ರಾಷ್ಟ್ರಗಳ ರಾಷ್ಟ್ರ ಧ್ವಜಗಳ ಹೆಸರು ಹೇಳಿದ್ದಕ್ಕೆ
ಭರತನಾಟ್ಯದಲ್ಲೂ ಎತ್ತಿದ ಕೈ-ಮಲೇಷ್ಯಾದಲ್ಲಿ ಪ್ರದರ್ಶನ.
ಜಿಲ್ಲಾ ಮಟ್ಟದ ಹೊಯ್ಸಳ ರೆಕಾರ್ಡ್ ಪುರಸ್ಕೃತ.
ತಬಲ, ಕೀಬೋರ್ಡ್, ಗಾಯನ, ಸಂಗೀತ, ಈಜು, ಮೃದಂಗ, ವೆಸ್ಟ್ರನ್ ಡ್ಯಾನ್ಸ್, ವಯಲೀನ್, ಗಿಟಾರ್, ಅಬಾಕಸ್, ಕರಾಟೆ, ಸ್ಟೇಟಿಂಗ್ನಲ್ಲೂ ಮುಂದೆ
ವಿವಿಧ ಕಾರ್ಯಕ್ರಮಗಳಲ್ಲೂ ಭಾಗಿ, ಶಹಬ್ಬಾಸ್ಗಿರಿ….
ಕರ್ನಾಟಕ ಸಾಧಕರ ಪುಸ್ತಕದಲ್ಲಿ (Karnataka achievers . ‘A book of record) tiny boy shorp memory’ ಪ್ರಶಸ್ತಿ ಹಾಗೂ ಬಿರುದೂ ಸಿಕ್ಕಿದೆ. 1 ನಿಮಿಷದಲ್ಲಿ 48 ರಾಷ್ಟ್ರಗಳ ರಾಷ್ಟ್ರಧ್ವಜದ ಹೆಸರು ಹೇಳಿ ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಟ್ಟಿ ಸೇರಿದ್ದಾನೆ. ದೇಶದ 30 ರಾಜ್ಯ ಮತ್ತು ರಾಜಧಾನಿಗಳ ಹೆಸರು, 150 ಜನ ಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠ ಪುರಸ್ಕೃತರ ಹೆಸರು, ಕರ್ನಾಟಕದ ಜಿಲ್ಲೆಗಳ ಹೆಸರನ್ನೂ ಹೇಳಿದ್ದ ಸಾಧನೆ ಈತನದ್ದು.
ತಮಿಳುನಾಡು ರಾಜ್ಯದ ಕಿಡ್ಸ್ ವರ್ಲ್ಡ್ ರೆಕಾರ್ಡ್ ಪಟ್ಟಿ ಸೇರಿ ಈ ಸಾಧನೆ ಮಾಡಿದ ಅತಿ ಕಿರಿಯ ಮಗು ಎಂಬ ಪ್ರಶಂಸೆಗೆ ಪಾತ್ರನಾಗಿದ್ದಾನೆ. ವೇಲ್ ಮೇಡಲ್ ಬುಕ್ ಆಫ್ ರೆಕಾರ್ಡ್ ಸಹ ಪಡೆದಿದ್ದಾನೆ. ಭರತನಾಟ್ಯದಲ್ಲಿ ಇನ್ ಪ್ಯ್ಲೂನ್ಸ್ ಬುಕ್ ಆಫ್ ವರ್ಡ್ಡ ರೆಕಾರ್ಡ್ ಸಹ ಮಾಡಿದ್ದಾನೆ.
ಎರಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದಿವ್ಯದೃಷ್ಟಿಯ ಮೂಲಕ 250 ಪ್ಲಾಶ್ ಕಾರ್ಡ್ ಗಳ ಹೆಸರು ಹೇಳುವುದು, ವಿವಿಧ ಬಣ್ಣಗಳ ಬಾಲ್ ಗಳ ಬಣ್ಣ ಹೇಳುವುದು, ಓದುವುದು ಈ ಮೂಲಕ ಅಂತರರಾಷ್ಟ್ರೀಯ ದಾಖಲೆ ಮಾಡಿದ್ದಾನೆ.
ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿಮಾನಿಗಳ ಸೇವಾ ಸಂಘದಿಂದ ಸನ್ಮಾನ ಮಾಡಲಾಗಿದೆ. ಲಲಿತ ಕಲಾ ಸಂಘ ರೈಲು ಗಾಲಿ ಕಾರ್ಖಾನೆಯವರು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಸನ್ಮಾನಿಸಲಾಗಿದೆ. ಕೋಲಾರದಲ್ಲಿ ನಡೆದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಸ್ಟರ್ ತಾನೀಶ್ ಆಹ್ವಾನಿಸಿ ಸನ್ಮಾನ ಮಾಡಲಾಗಿತ್ತು. ವಿವಿಧ ಶಾಲೆಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಕೂಡ ಮಾಡಿದ್ದಾನೆ. ಮಾಲೂರಿನಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಕೀರ್ಣ ಕ್ಷೇತ್ರದಲ್ಲಿ ತಾನೀಶ್. ಎನ್ ಸಾಧನೆ ಗುರುತಿಸಿ ಸನ್ಮಾನ ಮಾಡಲಾಯಿತು.
ಸಂಕೀರ್ಣ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾಡಳಿತ ತಾನೀಶ್.ಎನ್ ಗೆ “ಹೊಯ್ಸಳ” ಪ್ರಶಸ್ತಿ ನೀಡಿ ಗೌರವಿಸಿದೆ.
ತಮಿಳುನಾಡಿನ ತಿರುವಣ್ಣಾಮಲೈ ದೇವಾಲಯದ ಸಾಂಸ್ಕೃತಿಕ ಪ್ರದಾನ ವೇದಿಕೆಯಲ್ಲಿ “ನೃತ್ಯ ಜ್ವಾಲೆ” ಪ್ರಶಸ್ತಿ ನೀಡಿದೆ. ಇತ್ತಿಚೀಗೆ ದೊಡ್ಡತಿರುಪತಿಯ ಶಿಲ್ಪರಾಂ ಸಾಂಸ್ಕೃತಿಕ ವೇದಿಕೆಯಲ್ಲಿ ಅತ್ಯುತ್ತಮ ಭರತನಾಟ್ಯ ಪ್ರದರ್ಶನಕ್ಕೆ “ನಾಟ್ಯಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ.
ಸದ್ಯ ಮಾಲೂರು ತಾಲ್ಲೂಕಿನ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಎರಡನೇ ತರಗತಿ ಓದುತ್ತಿದ್ದಾನೆ. ಮುಂದೆ ಏನಾಗ-ಬಯಸುತ್ತೀಯಾ ಎಂದು ಕೇಳಿದರೆ ಐಎಎಸ್ ಅಧಿಕಾರಿ ಆಗಬೇಕು, ಸಮಾಜದಲ್ಲಿನ ಎಲ್ಲಾ ಶೋಷಿತ ವರ್ಗಕ್ಕೆ ಸಹಾಯ ಮಾಡಬೇಕು, ಸಮಾಜ ಸೇವೆ ಮಾಡಬೇಕು ಎಂಬ ಕನಸಿದೆ ಎನ್ನುತ್ತಾ ಗಮನ ಸೆಳೆದಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.