(www.vknews.in) : ತನ್ನ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು, ಜಾತ್ಯಾತೀತ ಮನೋಭಾವನೆಯನ್ನು ಬೆಳೆಸಿಕೊಂಡು ನಮ್ಮಂತಹ ಯುವಕರಿಗೆ ಒಂದು ಮಾದರಿ ವ್ಯಕ್ತಿಯಾಗಿದ್ದ ಇಕ್ಬಾಲ್ ಅಹಮದ್ ಮೂಲ್ಕಿ ಅವರು ತನ್ನ ಪದವೀಧರವನ್ನು ಮುಗಿಸಿ ತನ್ನ ಜೀವನದ ಭವಿಷ್ಯಕ್ಕಾಗಿ ವಿದೇಶಕ್ಕೆ ತೆರಳಿ ಉದ್ದಿಮೆಯಲ್ಲಿ ಯಶಸ್ಸು ಕಂಡು ಉತ್ತುಂಗದಲ್ಲಿ ಇರುವಾಗಲೇ ತಾನು ಹುಟ್ಟಿ, ಬೆಳೆದ ನಾಡು, ತನ್ನ ಸಮುದಾಯ ಮತ್ತು ಸಮಾಜದ ಸೇವೆಗಾಗಿ ವಿದೇಶಿ ಜೀವನಕ್ಕೆ ಕೊನೆ ಹಾಡಿ ತನ್ನ ತಾಯ್ನಾಡಿಗೆ ಮರಳಿದರು. ಅವರು ತಮ್ಮ ಸಮುದಾಯದ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗಾಗಿ ಹಗಲು ರಾತ್ರಿ ದುಡಿಯುತ್ತಾ, ಕೋಮು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ತಮ್ಮ ಯೌವ್ವನ, ಶ್ರಮ ಮತ್ತು ಸಂಪತ್ತನ್ನು ಮುಡಿಪಾಗಿಟ್ಟಿದ್ದಾರೆ. ಈ ಮೂಲಕ ಅವರು ನಮ್ಮೆಲ್ಲರ ಹೃದಯದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದ ಯುವ ನಾಯಕನಾಗಿ ಹೊರಹೊಮ್ಮಿದ್ದಾರೆ.
ಇಕ್ಬಾಲ್ ಮೂಲ್ಕಿ ಅವರು ಮೂಲ್ಕಿ ಸುನ್ನಿ ಜಮಾಅತ್ತಿನ ಅಧ್ಯಕ್ಷರಾಗಿ, ಜಮಾಅತ್ತನ್ನು ಆಧುನಿಕತೆಯ ದಾರಿಯಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು. ಅವರು ಜಮಾಅತ್ತಿನ ಪ್ರತಿಯೊಂದು ಮನೆ, ಪ್ರತಿಯೊಬ್ಬರ ಮನಗಳಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು, ಧೀಮಂತ ಮತ್ತು ಉತ್ಸಾಹಿ ನಾಯಕನಾಗಿ ಮೆರೆದಿದ್ದಾರೆ ಅಲ್ಲದೇ ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿ, ಯುವಕರಿಗೆ ನಾಯಕನಾಗಿ, ಹಿರಿಯರಿಗೆ ಸೇವಕನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿದ ಮಾಜಿ ಪ್ರಧಾನ ಮಂತ್ರಿ ದೇವೆಗೌಡರು, ಅವರನ್ನು ಕರ್ನಾಟಕದ ಜನತಾದಳದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ರಾಜ್ಯದ ಸೇವೆಗೈಯ್ಯಲು ಒಂದು ಸುವರ್ಣಾವಕಾಶವನ್ನು ಒದಗಿಸಿಕೊಟ್ಟರಲ್ಲದೇ ಅವರು ತಮಗೆ ಒದಗಿದ ಅ ಸುವರ್ಣಾವಕಾಶವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ತನ್ನ ಪಕ್ಷ ಹಾಗೂ ರಾಜ್ಯದ ಇನ್ನಿತರ ಪಕ್ಷಗಳ ನಾಯಕರಿಗೆ ಅತ್ಯಂತ ಮೆಚ್ಚಿನ ಒಬ್ಬ ಯುವ ನಾಯಕನಾಗಿ ಮೆರೆದರು.
ದ.ಕ. ಜಿಲ್ಲೆಯಲ್ಲಿರುವ ಹಲವಾರು ಸಂಘ ಸಂಸ್ಥೆಗಳಲ್ಲಿ ಹಲವು ತರಹದ ಹುದ್ದೆಗಳನ್ನು ನಿಭಾಯಿಸಿ ಅ ಸಂಘಟನೆಗಳ ಕಾರ್ಯಕ್ರಮಗಳನ್ನು ಅತ್ಯಂತ ಹೆಚ್ಚಿನ ಜನರಿಗೆ ಪರಿಚಯಿಸಿ ಅದನ್ನು ಯಶಸ್ವಿ ಸಂಘಟನೆಯಾಗಿ ಬೆಳೆಯುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತನ್ನ ಜೀವನದ ಅತ್ಯಂತ ಹೆಚ್ಚಿನ ಪಾಲನ್ನು ಜನಸೇವೆಗಾಗಿ ಮೀಸಲಿಟ್ಟು, ಜನಸೇವೆಯನ್ಬೇ ತನ್ಬ ಉಸಿರಾಗಿಸಿಕೊಂಡು ಮುಂದುವರಿಯುತ್ತಿರುವ ಇಂತನ ಚೈತನ್ಯಭರಿತವಾದ ವ್ಯಕ್ತಿಗಳಿಗೆ ಇನ್ನೂ ಮುಂದೆಯೂ ಹೆಚ್ಚಿನ ಸದಾವಕಾಶಗಳು ದೊರೆತು, ರಾಜಕೀಯವಾಗಿ ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿ ಈ ನಾಡಿನ, ಸಮುದಾಯದ, ಸಮುದಾಯದ ಸೇವೆಗೈಯ್ಯಲು ಅ ಸ್ರಷ್ಟಿಕರ್ತನು ಆಯೂರಾರೋಗ್ಯವನ್ನು ನೀಡಿ ಕರುಣಿಸಲಿ.
— ಅಶ್ಫಾಕ್ ಎ. ಕಾರ್ನಾಡ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.