(www.vknews.in) : ಸುಳ್ಯ ತಾಲ್ಲೂಕಿನ ಕೊಡಿಯಾಲ ಗ್ರಾಮದ ಮಾಲೆಂಗ್ರಿಯ ಯುವಕರ ಮಾಲೆಂಗ್ರಿ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಇದರ 11ನೇ ವಾರ್ಷಿಕೋತ್ಸವದ ಪ್ರಯುಕ್ತ ನಿರ್ಮಿಸಲಾದ ಪೂಟ್ರೆ–ಮಾಲೆಂಗ್ರಿ–ಕಾಯರ್ತಡ್ಕ ಸಂಪರ್ಕಿಸುವ ರಸ್ತೆ ಇಂದು (21-02-2026) ಸಂಜೆ 5 ಗಂಟೆಗೆ ಸರಿಯಾಗಿಉದ್ಘಾಟನೆಗೊಳ್ಳಲಿದೆ.
ಈ ಸಮಾರಂಭಕ್ಕೆ ಬಹುಮಾನ್ಯ ಧಾರ್ಮಿಕ ಪಂಡಿತರು ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಗಳ್ (ಎಣ್ಮೂರ್) ರವರು ಆಗಮಿಸಲಿದ್ದಾರೆ.
ಮಾಲೆಂಗ್ರಿ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ನ ಅಡ್ಮಿನ್ ಶಾಪಿ ಬಿ.ಯ೦ ಮಾಲೆಂಗ್ರಿ (ದುಬೈ)ರವರ ನಾಯಕತ್ವದಲ್ಲಿ ನಿರ್ಮಿಸಲಾದ ಈ ರಸ್ತೆ ಸುಮಾರು 2 ಕಿಮೀ ದೂರವರೆಗೆ ವಿಸ್ತರಿಸಿದೆ. ಈ ರಸ್ತೆಗೆ ಬೆಕಾದ ಸಂಪೂರ್ಣ ಸೊಲಾರ್ ದಾರಿದೀಪ ವ್ಯವಸ್ಥೆಯನ್ನು SSF ಮಾಲೆಂಗ್ರಿ ಯುನಿಟ್ ವತಿಯಿಂದ ಕೊಡುಗೆಯಾಗಿ ನೀಡಲಾಗಿದೆ.
ಊರಿನ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲಾ ಸದಸ್ಯರು ಹಾಗೂ ದಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಸಂಘಟಕರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.