(www.vknews.in) : ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಆದೇಶ ಪ್ರಕಾರ ಮಾರ್ಚ್ 09, ರಿಂದ 12, 2026 ರವರೆಗೆ ಪುದುಚೇರಿ ಯಲ್ಲಿ ಹಿರಿಯ ಪುರುಷ ಮತ್ತು ಹಿರಿಯ ಮಹಿಳಾ ಬೀಚ್ ವಾಲಿಬಾಲ್ ಚಾಂಪಿಯನ್ ಶಿಪ್ ನಡೆಯಲಿರುವುದು. ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯ ಹಿರಿಯ ಪುರುಷ ಎರಡು ತಂಡಗಳು ಮತ್ತು ಹಿರಿಯ ಮಹಿಳಾ ಎರಡು ಬೀಚ್ ವಾಲಿಬಾಲ್ ತಂಡಗಳು ಭಾಗವಹಿಸಲಿರುವುದು. ಇದರ ಆಯ್ಕೆ ಪ್ರಕ್ರಿಯೆ ಇದೇ ಬರುವ ದಿನಾಂಕ: 04ನೇ ಮಾರ್ಚ್ 2026 ರಂದು ಸಮಯ: ಬೆಳಿಗ್ಗೆ 09:00 ಕ್ಕೆ ಉಬ್ಬನಗೇರಿ, ಕಾಗಲ್, ಕುಮಟಾ ತಾಲೂಕು, ಕಾರವಾರ ಜಿಲ್ಲೆಯಲ್ಲಿ ನಡೆಯಲಿರುವುದು.
ಭಾಗವಹಿಸುವ ಆಟಗಾರರು ತಮ್ಮ ಮೂಲ ಆಧಾರ್ ಕಾರ್ಡ್/ ಫೋಟೋ ಮತ್ತು ಬೀಚ್ ವಾಲಿಬಾಲ್ ಆಟದ ಕಿಟ್ ನೊಂದಿಗೆ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಹರ್ಷ ಆರ್ ಮತ್ತು ಪ್ರಧಾನ ಕಾರ್ಯದರ್ಶಿ ಆಂಥೋನಿ ಜೋಸೆಫ್ ಇವರಿಗೆ ಒಪ್ಪಿಸ ತಕ್ಕದ್ದು. ಹೆಚ್ಚಿನ ಮಾಹಿತಿಯನ್ನು ಶ್ರೀ ಗೌರಿ ಶೆಟ್ಟಿ ದೂರವಾಣಿ ಸಂಖ್ಯೆ: 9663802704 ಇವರ ಮೂಲಕ ತಿಳಿಯಬಹುದು. ಆಯ್ಕೆ ಟ್ರಯಲ್ಸ್ ಅನ್ನು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ನ ಅಧಿಕೃತ ಆಯ್ಕೆ ಸಮಿತಿಯು ನಡೆಸುತ್ತದೆ. ಆಯ್ಕೆ ಸಮಿತಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ..
ಆಯ್ಕೆಯಾದ ಆಟಗಾರರಿಗೆ ನುರಿತ ಕೋಚ್ ಮೂಲಕ ಕೆಲವು ದಿನಗಳ ತರಬೇತಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಯೆಸೋಸಿಯೇಷನ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.