(www.vknews in) ಹೊನ್ನಾಳಿಯಲ್ಲಿ ಮ್ಯಾಗ್ನೆಟ್ ಶಾಲೆಗಳ ವಿರುದ್ಧ ಸಮಾಲೋಚನಾ ಸಭೆ
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.)ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಹೊನ್ನಾಳಿ ತಾಲೂಕಿನಲ್ಲಿ ಮ್ಯಾಗ್ನೆಟ್ ಶಾಲೆಗಳಿಂದಾಗುವ ತೊಂದರೆಗಳ ಬಗ್ಗೆ ಸಮಾಲೋಚನಾ ಸಭೆಯನ್ನು ಮಾಡಲಾಯಿತು.
ಸರಕಾರವು ಗ್ರಾಮಕ್ಕೊಂದು ಕೆ ಪಿ ಎಸ್ ಶಾಲೆಗಳನ್ನು ಮಾಡುವ ಹೆಸರಿನಲ್ಲಿ ಗ್ರಾಮೀಣ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವುದರಿಂದ ಸರಕಾರಿ ಶಾಲೆಗಳು ಕೇವಲ ಮತಗಟ್ಟೆಗಳಾಗಿ ಉಳಿಯಲಿದೆ. ಹಾಗೂ ಆ ಶಾಲೆಯ ಜಾಗಗಳು ರಾಜಕೀಯರಹಿತವಾಗಿ ಉಳ್ಳವರ ಪಾಲಾಗಲಿದೆ.
ಇದರ ಬಗ್ಗೆ ಎಸ್ಡಿಎಂಸಿ ಹಾಗೂ ಸಮುದಾಯ ಎಚ್ಚೆತ್ತುಕೊಳ್ಳಬೇಕು, ಹಾಗೂ ಶಕ್ತವಾದ ಹೋರಾಟವನ್ನು ಮಾಡಬೇಕಿದೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಕ್ಕೆ ಅನುಮತಿಸಬಾರದು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಯಿತು .
ಅದಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ PAB ಶಿಕ್ಷಕರಿಗೆ ಗೌರವಧನವನ್ನು ಹೆಚ್ಚಳ ಮಾಡುವಂತೆ,ತಿಂಗಳಿಗೆ ಕನಿಷ್ಠ ಒಂದು ದಿನ ರಜೆಯನ್ನು ಮಂಜೂರು ಮಾಡುವಂತೆ ಮತ್ತು ಈಗಾಗಲೇ ಸುಮಾರು ವರ್ಷದಿಂದ ಮಕ್ಕಳೊಂದಿಗೆ ಅತೀ ಕಡಿಮೆ ಗೌರವಧನವನ್ನು ಪಡೆದು ಕೊಂಡು ಕರ್ತವ್ಯ ನಿರ್ವಹಿಸುತ್ತಾ ಇದ್ದವರನ್ನು ಇನ್ನು ಮುಂದೆಯೂ ಅವರನ್ನೇ ಆಯ್ಕೆ ಮಾಡಲು ಆದೇಶವನ್ನು ಹೊರಡಿಸಲು ಇಲಾಖಾ ಅಧಿಕಾರಿಗಳಿಗೆ ಮನವಿ ಕೊಡಲು ತೀರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.) ಇದರ ರಾಜ್ಯ ಸಂಚಾಲಕರಾದ ಮೊಯ್ದಿನ್ ಕುಟ್ಟಿ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ನಿರ್ದೇಶಕರಾದ ಶಿವಕ್ಕಳ ಆಂಜನೇಯ, ಜಿಲ್ಲಾ ನಿರ್ದೇಶಕರು ಹಾಗೂ ಹೊನ್ನಾಳಿ ತಾಲೂಕು ಅಧ್ಯಕ್ಷರಾದ ಎ ಎಸ್ ಶಿವಲಿಂಗಪ್ಪ, ತಾಲೂಕು ಉಪಾಧ್ಯಕ್ಷರಾದ ರಮೇಶ್, ರೂಪ ಆನಗೋಡು, ಅಷ್ವಿನಿ, ವಿಜಯಲಕ್ಷ್ಮಿ, ವನಜಾಕ್ಷಿ, ಶಾಕಿರ,ನವೀದ,ಶಿಲ್ಪ, ಶಬ್ನಮ್, ಸರಸ್ವತಿ,ರೇಖಾ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.