(www.vknews.in): ಬದ್ಯಾರು ಖಲಂದರ್ ಮಸೀದಿ ಹಾಗೂ ನೂರಾನಿಯ ಮದ್ರಸ ಇದರ ಹೊಸ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಇಬ್ರಾಹಿಂ ದರ್ಕಸ್ ಅವರನ್ನು ಅಧ್ಯಕ್ಷರಾಗಿ, ದಾವೂದ್ ಅಶ್ರಪಿ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ರಝಾಕ್ ಬದ್ಯಾರು ಅವರನ್ನು ಖಜಾಂಜಿಯಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಹುಸೈನ ವಡ್ಡತಟ್ಟ, ಇಬ್ರಾಹಿಂ ಅಶ್ರಪಿ, ನಝೀರ್ ದರ್ಕಸ್, ಅಬ್ಧುಲ್ಲ BK, ಅಶ್ರಫ್ ಹೂಸಮನೆ, ಇಸ್ಮಾಯಿಲ್ ಹೂಸಮನೆ, ಅಬ್ಬಾಸ್ ಹಾಗೂ ರಫೀಕ್ ದರ್ಕಸ್ ಅವರನ್ನು ನೇಮಕ ಮಾಡಲಾಗಿದೆ.
ಹೊಸ ಪದಾಧಿಕಾರಿಗಳು ಮಸೀದಿ ಮತ್ತು ಮದ್ರಸೆಯ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಿಷ್ಠೆಯಿಂದ ಮುಂದುವರಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವರೆಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಎಸ್ ಎಚ್ ಜೆ ಎಂ ಆಡಳಿತ ಸಮಿತಿ ಕುಂಡಡ್ಕ ಕೋಶಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವಾದಳ ಘಟಕ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಬ್ದುಲ್ ಸಮದ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.