ಶ್ರೀನಿವಾಸಪುರ (www.vknews.in): ಚಿಂತಾಮಣಿ ರಸ್ತೆಯ ಹತ್ತಿರ, ಈದ್ಗಾ ಸಮೀಪದಲ್ಲಿರುವ ಜಾಮಿಯಾ ಮಸೀದ್, ಶ್ರೀನಿವಾಸಪುರ ಇಕ್ರಾ ಎಜುಕೇಶನಲ್ ಟ್ರಸ್ಟ್ (ರಿ) ನಿರ್ವಹಣೆಯ ಆಂಬಿಷನ್ ನ್ಯಾಶನಲ್ ಸ್ಕೂಲ್ 2026ನೇ ಸಾಲಿನ ಎಸ್ಎಸ್ಎಲ್ಸಿ 1ನೇ ಬ್ಯಾಚ್ ಫಲಿತಾಂಶದಲ್ಲಿ ಶೇ.100 ಸಾಧನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ಈ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಹೆಮ್ಮೆ ತಂದಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉನ್ನತ ಅಂಕಗಳೊಂದಿಗೆ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಶಾಲೆಯ ಟಾಪರ್ ಆಗಿ ಅರ್ಫಾ ಫಾತಿಮಾ 606 ಅಂಕಗಳನ್ನು ಪಡೆದು ಶೇ.96.96 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಜಿಂ ಉನ್ನಿಸಾ 597 ಅಂಕ (ಶೇ.95.52) ಪಡೆದು ದ್ವಿತೀಯ ಸ್ಥಾನ ಹಾಗೂ ಸಯ್ಯದ್ ಫರಾಝ್ ಅಹ್ಮದ್ 579 ಅಂಕ (ಶೇ.92.64) ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಇತರ ವಿದ್ಯಾರ್ಥಿಗಳಲ್ಲಿ ಸಿಮ್ರಾನ್ ಕೌಸರ್ 551 ಅಂಕ (88.16%), ನಜೀಫಾ ಜೋಹಾ 548 ಅಂಕ (87.68%), ಎಂ ಡಿ ಮಾಜ್ ಅನ್ಸಾರಿ 541 ಅಂಕ (86.56%), ಮೊಹಮೀನ್ ಫಾತಿಮಾ 532 ಅಂಕ (85.12%), ನೂರ್ ಅಫ್ಜಾ 528 ಅಂಕ (84.48%), ನಿದಾ ಕೌಸರ್ 521 ಅಂಕ (83.36%) ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ 100% ಫಲಿತಾಂಶ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಸಂಭ್ರಮಾಚರಣೆ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕಿ ಮತ್ತು ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಸಮರ್ಪಿತ ಬೋಧನೆಯೇ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ. ಶಾಲೆಯ ಅಧ್ಯಕ್ಷ ಡಾ // ಅಹ್ಮದ್ ಶರೀಫ್, ಕಾರ್ಯದರ್ಶಿ ಅಬೀದ್ ಅನ್ಸಾರಿ, ಖಜಾಂಚಿ ಫಯಾಜ್ ಅಹ್ಮದ್, ಪ್ರಿನ್ಸಿಪಾಲ್ ಇಮ್ರಾನ್ ಪಾಷಾ ಹಾಗೂ ಕೋ-ಆರ್ಡಿನೇಟರ್ ಸಫಿಯುಲ್ಲಾ ಖಾನ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಶಿಕ್ಷಕರ ತಂಡದ ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಶ್ರದ್ಧೆಯಿಂದ ಈ ಶೇ.100 ಫಲಿತಾಂಶ ಸಾಧ್ಯವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಈ ಸಾಧನೆಯು ಶ್ರೀನಿವಾಸಪುರ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಗುರುತಿಸಿಕೊಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.