ಬೆಂಗಳೂರು ಗ್ರಾಹಕರು ಭಾರತದಲ್ಲಿ ಅತ್ಯಂತ ವಿವೇಚನೆ ಹೊಂದಿದವರಾಗಿದ್ದಾರೆ. ಅವರು ಚೆನ್ನಾಗಿ ಮಾರ್ಕೆಟ್ ಮಾಡಲಾಗುತ್ತಿದೆ ಎಂಬ ಕಾರಣಕ್ಕೆಖರೀದಿಸುವುದಿಲ್ಲ. ಅವರು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಸಂಶೋಧಿಸುತ್ತಾರೆ. ಅವರು ಹೋಲಿಕೆ ಮಾಡುತ್ತಾರೆ.
ನಾನು ಬಹಳ ಆಸಕ್ತಿದಾಯಕ ಎಂದು ಕಂಡಿದ್ದೇನೆಂದರೆ ಇಲ್ಲಿ ಮಹಿಳೆಯರು ಮತ್ತು ಕುಟುಂಬಗಳು ಹೆಚ್ಚಾಗಿ ನಿಜವಾಗಿಯೂ ಸಮಸ್ಯೆ ಪರಿಹರಿಸುವ ಉತ್ಪನ್ನಗಳಿಗೆ ಪಾವತಿಸಲು ಬಯಸುತ್ತಾರೆ. ಹಿಂದೆ ಕೈಗೆಟುಕಬಲ್ಲತೆಯು ಮೊದಲ ಫಿಲ್ಟರ್ ಆಗಿತ್ತು. ಈಗ ಅದು ಮೌಲ್ಯ.
ನಿಜ ಜೀವನವನ್ನು ಬ್ರಾಂಡ್ ಗಳು ಅರ್ಥ ಮಾಡಿಕೊಳ್ಳುವುದರಲ್ಲಿ ನಿರೀಕ್ಷೆಗಳು ಕೂಡಾ ವೃದ್ಧಿಸುತ್ತಿವೆ. ಮಹಿಳೆಯರು ವೃತ್ತಿಗಳು, ಕುಟುಂಬಗಳು, ಫಿಟ್ನೆಸ್, ಸಾಮಾಜಿಕ ಜೀವನಗಳನ್ನು ಸಮತೋಲನ ಮಾಡುತ್ತಿದ್ದಾರೆ ಮತ್ತು ಅವರು ಉತ್ಪನ್ನಗಳನ್ನು ಅವುಗಳ ವಾಸ್ತವದ ಸುತ್ತಲೂ ವಿನ್ಯಾಸಗೊಳಿಸಲು ಬಯಸುತ್ತಾರೆಯೇ ಹೊರತು ಮರುಚಿಂತನೆಯಾಗಿ ಅಲ್ಲ.
ಬೆಂಗಳೂರಿನ ನೈಜ ಸ್ವಭಾವದಲ್ಲಿ ಜನರು ಸದಾ, “ಇದು ಯಾಕೆ ಹೀಗೆ” ಎಂದು ಕೇಳುತ್ತಾರೆ ಮತ್ತು “ಇದನ್ನು ಮತ್ತಷ್ಟು ಉತ್ತಮಗೊಳಿಸಬಹುದೇ?” ಎನ್ನುತ್ತಾರೆ. ಅದು ಆವಿಷ್ಕಾರಕ್ಕೆ ಮಹತ್ತರ ಪರಿಸರವಾಗಿದೆ.
ಪ್ರಾಮಾಣಿಕವಾಗಿ ಬೆಂಗಳೂರು ಟ್ರಾಫಿಕ್ ನಮ್ಮ ಅತ್ಯಂತ ದೊಡ್ಡ ಶಿಕ್ಷಕರಲ್ಲಿ ಒಂದಾಗಿದೆ. ಪ್ರತಿನಿತ್ಯ ನೀವು ಸಾವಿರಾರು ಮಹಿಳೆಯರು ಪಿಲಿಯನ್ ನಲ್ಲಿ ಚಾಲನೆ ಮಾಡುವುದು, ಮಕ್ಕಳನ್ನು ಶಾಲೆ ಬಿಡುವುದು, ಕೆಲಸಕ್ಕೆ ಸಂಚರಿಸುವುದು, ಅತ್ತಿತ್ತ ಓಡಾಟ ನಡೆಸಿರುತ್ತಾರೆ. ಆದಾಗ್ಯೂ ಲಭ್ಯವಿರುವ ಬಹಳಷ್ಟು ಹೆಲ್ಮೆಟ್ ಗಳನ್ನು ಸಾಮಾನ್ಯವಾಗಿ ಪುರುಷರಿಗೆ ವಿನ್ಯಾಸಗೊಳಿಸಲಾಗಿದೆ.
ನಾವು ಯಾರು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ ಮತ್ತು ಯಾರಿಗೆ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ ಎನ್ನುವುದರ ನಡುವೆ ಅಪಾರ ಅಂತರ ಕಂಡುಕೊಂಡೆವು. ಮಹಿಳೆಯರು ಹೊಂದಿಕೆ, ತೂಕ, ಸೌಖ್ಯ, ಹೇರ್ ಸ್ಟೈಲ್ ಗಳು, ಕಾಣುವಿಕೆ ಮತ್ತು ವಿಶ್ವಾಸದೊಂದಿಗೂ ಸಂಘರ್ಷ ಅನುಭವಿಸುತ್ತಿದ್ದೇವೆ ಎಂದು ನಮಗೆ ಹೇಳಿದರು. ಪೋಷಕರು ಅವರ ಮಕ್ಕಳಿಗೆ ಸುರಕ್ಷಿತ ಆಯ್ಕೆಗಳನ್ನು ಬಯಸುತ್ತಾರೆ.
ಬೆಂಗಳೂರಿನ ರಸ್ತೆಗಳು ನಮ್ಮಲ್ಲಿ ಒಂದು ಸರಳವಾದ ಪ್ರಶ್ನೆಯನ್ನು ಕೇಳುವಂತೆ ಮಾಡಿದವು: ಮಹಿಳೆಯರು ಮತ್ತು ಮಕ್ಕಳು ಸಾರಿಗೆ ವ್ಯವಸ್ಥೆಯ ಇಷ್ಟೊಂದು ದೊಡ್ಡ ಭಾಗವಾಗಿದ್ದರೂ, ಉತ್ಪನ್ನದ ವಿನ್ಯಾಸದ ಕೇಂದ್ರಬಿಂದುವಾಗಿ ಅವರನ್ನು ಏಕೆ ಪರಿಗಣಿಸುತ್ತಿಲ್ಲ?, ಅಲ್ಲಿಯೇ ನಿಜವಾಗಿ ತ್ವರ್ರ (Tvarra) ಪ್ರಾರಂಭವಾಯಿತು.
ಖಂಡಿತವಾಗಿಯೂ, ಹತ್ತು ವರ್ಷಗಳ ಹಿಂದೆ, ಸುರಕ್ಷತೆಯನ್ನು ಅನುಸರಣೆ ಎಂಬಂತೆ ನೋಡಲಾಗುತ್ತಿತ್ತು. ಇಂದು, ಅದು ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಗ್ರಾಹಕರು ಎಲ್ಲ ಹೆಲ್ಮೆಟ್ ಗಳೂ ಸಮಾನವಲ್ಲ ಎಂದು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಹೊಂದಿಕೊಳ್ಳುವಿಕೆ ಮುಖ್ಯ. ತೂಕ ಮುಖ್ಯ. ಕಾಣುವುದು ಮುಖ್ಯ. ಸೌಖ್ಯ ಮುಖ್ಯ.
ಜನರು ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಲು ಗಂಟೆಗಟ್ಟಲೆ ವ್ಯಯಿಸುತ್ತಾರೆ, ಏಕೆಂದರೆ ಅದನ್ನು ಅವರು ಪ್ರತಿನಿತ್ಯ ಬಳಸುತ್ತಾರೆ. ನಾವು ಅದೇ ಮನಸ್ಥಿತಿಯು ಸುರಕ್ಷತೆಯ ಉತ್ಪನ್ನಗಳ ಸುತ್ತಲೂ ಬೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ.
ಮುಖ್ಯವಾಗಿ ಮಹಿಳೆಯರು ಮತ್ತು ಯುವ ಪೋಷಕರಲ್ಲಿ ಎಲ್ಲದಕ್ಕೂ ಹೊಂದುವ ಒಂದು ಪರಿಹಾರದ ಬದಲಿಗೆ ಅವರ ಅಗತ್ಯಗಳಿಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಬಯಕೆ ಕಾಣುತ್ತಿದ್ದೇವೆ. ಸಾಮಾನ್ಯವಾಗಿ ಹೇಳುವಂತೆ, “ಜೀವ ಇದೆ ಅಂದ್ರೆ ಎಲ್ಲಾ ಇದೆ” ಎಂದು ಅರ್ಥ- ನೀವು ಸುರಕ್ಷಿತವಾಗಿದ್ದರೆ ಪ್ರತಿಯೊಂದೂ ಸುರಕ್ಷಿತವಾಗಿದ್ದಂತೆ.
ಬೆಂಗಳೂರಿಗೆ ಕ್ರಮ ಕೈಗೊಳ್ಳುವ ಕುರಿತು ಅದ್ಭುತ ಪೂರ್ವಾಗ್ರಹವಿದೆ. ಇಲ್ಲಿನ ಜನರು ಪ್ರಯೋಗ ಮಾಡುವಲ್ಲಿ ಉತ್ಸುಕರಾಗಿದ್ದಾರೆ. ಅವರು ಪರಿಪೂರ್ಣತೆಗೆ ಕಾಯುವುದಿಲ್ಲ. ಅವರು ನಿರ್ಮಿಸುತ್ತಾರೆ, ಪರೀಕ್ಷಿಸುತ್ತಾರೆ, ಕಲಿಯುತ್ತಾರೆ ಮತ್ತು ಸುಧಾರಿಸುತ್ತಾರೆ. ಅದು ಬಹಳ ಆಳವಾಗಿ ನನಗೆ ಅನ್ವಯಿಸುತ್ತದೆ.
ಈ ನಗರವು ಅಸಾಧಾರಣ ಸಹಯೋಗದ ಸಂಸ್ಕೃತಿ ಹೊಂದಿದೆ. ಸಂಸ್ಥಾಪಕರು ಐಡಿಯಾಗಳನ್ನು ಹಂಚಿಕೊಳ್ಳುತ್ತಾರೆ. ವೃತ್ತಿಪರರು ಪರಸ್ಪರ ಮಾರ್ಗದರ್ಶನ ನೀಡುತ್ತಾರೆ. ಜನರು ನಿಜಕ್ಕೂ ನೆರವಾಗಲು ಬಯಸುತ್ತಾರೆ.
ಮತ್ತೊಂದು ಪಾಠವೆಂದರೆ ಗ್ರಾಹಕರ ಗೀಳು ಉಳಿಸುವುದು. ಬೆಂಗಳೂರಿನ ಗ್ರಾಹಕರು ಅತ್ಯಂತ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಾರೆ. ಕೆಲವೊಮ್ಮೆ ಅತ್ಯಂತ ಪ್ರಾಮಾಣಿಕವಾಗಿ! ಆದರೆ ಅದು ಒಂದು ಉಡುಗೊರೆ, ಏಕೆಂದರೆ ಅದು ನಿಮಗೆ ಉತ್ತಮ ಉತ್ಪನ್ನಗಳನ್ನು ನಿರ್ಮಿಸಲು ಒತ್ತಾಯಿಸುತ್ತದೆ.
ನಾವು ಮಹಿಳೆಯರನ್ನು ಸ್ಥಾಪಿತ ವರ್ಗವಾಗಿ ಕಾಣುವುದಿಲ್ಲ. ನಾವು ಅವರನ್ನು ಪ್ರಾರಂಭದಿಂದಲೂ ಅವರಿಗಾಗಿ ವಿನ್ಯಾಸಗೊಳಿಸಲಾದ ಉತ್ಪನ್ನಗಳನ್ನು ಬಯಸುವ ರೈಡರ್ ಗಳು ಮತ್ತು ನಿರ್ಧಾರ ಕೈಗೊಳ್ಳುವವರಾಗಿ ಕಾಣುತ್ತೇವೆ. ನಮ್ಮ ವಿನ್ಯಾಸದ ತತ್ವವು ಸಹಾನುಭೂತಿಯಿಂದ ಪ್ರಾರಂಭವಾಗುತ್ತದೆ.
ನಾವು ದೂರ ಸಂಚಾರದ ಸಮಯದಲ್ಲಿ ಸೌಖ್ಯ, ಸುಲಭ ಬಳಕೆ, ಸೌಂದರ್ಯಪ್ರಜ್ಞೆ, ವಿಶ್ವಾಸ ಮತ್ತು ಸುರಕ್ಷತೆಯ ಕುರಿತು ಆಲೋಚಿಸುತ್ತೇವೆ. ಮಹಿಳೆಯರು ಚೆನ್ನಾಗಿ ಕಾಣುವುದು ಮತ್ತು ರಕ್ಷಿಸಿಕೊಳ್ಳುವುದರ ನಡುವೆ ಆಯ್ಕೆ ಮಾಡಿಕೊಳ್ಳುವಂತಿರಬೇಕಿಲ್ಲ.
ನಮ್ಮ ಬಹಳಷ್ಟು ಗ್ರಾಹಕರು ನಮಗೆ ಅವರು ತಮ್ಮ ತ್ವರ್ರ (Tvarra) ಹೆಲ್ಮೆಟ್ ಅನ್ನು ಹೆಚ್ಚಾಗಿ ಬಳಸುತ್ತೇವೆ ಎನ್ನುತ್ತಾರೆ ಏಕೆಂದರೆ ಅವರು ಅದನ್ನು ಬಳಸುವುದನ್ನು ನಿಜಕ್ಕೂ ಆನಂದಿಸುತ್ತಿದ್ದಾರೆ. ಅದು ಮುಖ್ಯ ಏಕೆಂದರೆ ಅತ್ಯಂತ ಸುರಕ್ಷಿತ ಹೆಲ್ಮೆಟ್ ಅನ್ನು ನೀವು ಸತತವಾಗಿ ಧರಿಸಬೇಕು.
ಬೆಂಗಳೂರು ಹೊಸ ಗ್ರಾಹಕರ ವರ್ತನೆಗಳು ಮೊದಲು ತಿಳಿಯುವ ಪ್ರದೇಶವಾಗಿದೆ. ನಮ್ಮ ವಿಧಾನವು ಇಲ್ಲಿನ ಗ್ರಾಹಕರನ್ನು ಹತ್ತಿರದಿಂದ ಆಲಿಸುವುದು ಮತ್ತು ಆ ಒಳನೋಟಗಳನ್ನು ಇನ್ನುಳಿದ ಭಾರತದಲ್ಲಿ ಉತ್ಪನ್ನಗಳು, ಕಂಟೆಂಟ್ ಮತ್ತು ಸಂವಹನ ರೂಪಿಸಲು ಬಳಸುವುದಾಗಿದೆ.
ಡಿಜಿಟಲ್ ಚಾನೆಲ್ ಗಳು ನಮಗೆ ಗ್ರಾಹಕರಿಗೆ ಜಾಹೀರಾತು ಮಾಡುವ ಬದಲಿಗೆ ನೇರ ಸಂವಹನಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತವೆ. ನಾವು ಅಪಾರ ಪ್ರಮಾಣದ ರಿವ್ಯೂಗಳು, ಫೀಡ್ ಬ್ಯಾಕ್, ಸಾಮಾಜಿಕ ಮಾಧ್ಯಮ ಸಂವಹನಗಳು ಮತ್ತು ಗ್ರಾಹಕ ಸಂವಹನಗಳಿಂದ ಕಲಿಯುತ್ತೇವೆ. ಒಂದು ಉತ್ಪನ್ನವು ಬೆಂಗಳೂರಿನ ಗ್ರಾಹಕರಿಗೆ ಇಷ್ಟವಾದರೆ ಅದು ನಮ್ಮ ಹಲವು ಮಾರುಕಟ್ಟೆಗಳಲ್ಲೂ ಅದೇ ಅಭಿಪ್ರಾಯ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಇಂದಿನ ಯುವ ಗ್ರಾಹಕರು ಕಾರ್ಯ ಮತ್ತು ಸ್ವಯಂ-ಅಭಿವ್ಯಕ್ತಿಯನ್ನು ಪ್ರತ್ಯೇಕಿಸಿಲ್ಲ. ಅವರಿಗೆ ತಮ್ಮನ್ನು ರಕ್ಷಿಸುವ ಉತ್ಪನ್ನಗಳು ಬೇಕು, ಆದರೆ ಅವರು ಯಾರೆಂದು ಬಿಂಬಿಸುವ ಉತ್ಪನ್ನಗಳನ್ನೂ ಬಯಸುತ್ತಾರೆ. ಹೈಪ್3 ಮೂಲಕ ನಾವು ಸುರಕ್ಷತೆಯು ಬೋರಿಂಗ್ ಆಗಿರಬೇಕಿಲ್ಲ ಎಂದು ನಾವು ಗುರುತಿಸಿದ್ದೇವೆ.
ಯುವ ರೈಡರ್ ಗಳು ಬಣ್ಣ, ವ್ಯಕ್ತಿತ್ವ, ವೈಯಕ್ತಿಕತೆ ಮತ್ತು ವಿಶ್ವಾಸ ಬಯಸುತ್ತಾರೆ. ಅವರು ಹೆಲ್ಮೆಟ್ ಗಳು ರಕ್ಷಣಾತ್ಮಕ ಗೇರ್ ಮಾತ್ರವಲ್ಲ ಬದಲಿಗೆ ಅವರ ಗುರುತಿನ ಭಾಗವಾಗಿವೆ ಎಂದು ನೋಡುತ್ತಾರೆ. ಇಲ್ಲಿ ಸವಾಲೆಂದರೆ ಸುರಕ್ಷತೆಯಲ್ಲಿ ರಾಜಿಯಾಗದೆ ವಿನೋದ ಮತ್ತು ಅಭಿವ್ಯಕ್ತಿಶೀಲ ಆಗಿರುವ ಉತ್ಪನ್ನ ಸೃಷ್ಟಿಸುವುದು. ಬೆಂಗಳೂರಿನ ಭಾಷೆಯಲ್ಲಿ ನೀವು, “ಸೇಫ್ ಆಗ್ಬೇಕು, ಸ್ಟೈಲಿಷ್ ಕೂಡಾ ಇರಬೇಕು” ಎನ್ನಬಹುದು. ಆ ಸಮತೋಲನವನ್ನು ನಾವು ಸಾಧಿಸಲು ಬಯಸಿದ್ದೇವೆ.
ನನ್ನ ಪ್ರಕಾರ ಬೆಂಗಳೂರು ಈ ಸಂವಹನಗಳನ್ನು ಮುಂದುವರಿಸುವುದರಲ್ಲಿ ಮುಂಚೂಣಿಯಲ್ಲಿರುತ್ತದೆ. ಈ ನಗರವು ತಂತ್ರಜ್ಞಾನ, ಉದ್ಯಮಶೀಲತೆ, ಪ್ರಗತಿಶೀಲ ಗ್ರಾಹಕರು ಮತ್ತು ಹಳೆಯ ನಂಬಿಕೆಗಳನ್ನು ಸವಾಲೆಸೆಯುವ ಬದ್ಧತೆಯ ವಿಶಿಷ್ಟ ಸಂಯೋಜನೆಯಾಗಿದೆ.
ನಾವು ಈಗಾಗಲೇ ಮಹಿಳೆಯರ ಮೊಬಿಲಿಟಿ, ನಗರ ಸುರಕ್ಷತೆ ಮತ್ತು ಸರಾಸರಿ ಬಳಕೆದಾರರಿಗಿಂತ ನೈಜ ಬಳಕೆದಾರರಿಗೆ ಉತ್ಪನ್ನಗಳ ವಿನ್ಯಾಸದ ಸುತ್ತಲೂ ಬಲವಾದ ಸಂವಾದಗಳನ್ನು ಕಾಣುತ್ತಿದ್ದೇವೆ.
ಆವಿಷ್ಕಾರದ ಭವಿಷ್ಯವು ಎಲ್ಲರನ್ನೂ ಒಳಗೊಳ್ಳುವುದು. ಮಹಿಳೆಯರಿಗೆ ನಿರ್ಮಿಸಲಾದ ಉತ್ಪನ್ನಗಳು ಪ್ರತಿಯೊಬ್ಬರಿಗೂ ಉತ್ತಮವಾಗಿರುತ್ತವೆ. ಮಕ್ಕಳಿಗೆ ವಿನ್ಯಾಸಗೊಳಿಸಲಾದ ಉತ್ಪನ್ನಗಳು ಎಲ್ಲರಿಗೂ ಸುರಕ್ಷತೆಯ ಮಾನದಂಡಗಳನ್ನು ಸುಧಾರಿಸುತ್ತವೆ. ಬೆಂಗಳೂರು ಪ್ರಮುಖ ಪ್ರಶ್ನೆಗಳನ್ನು ಕೇಳುವುದನ್ನು ಮತ್ತು ಬ್ರಾಂಡ್ ಗಳನ್ನು ವಿಭಿನ್ನವಾಗಿ ಆಲೋಚಿಸುವಂತೆ ಮಾಡುತ್ತದೆ.
ಅಥವಾ ಬೆಂಗಳೂರು: “ಬೇರೆ ತರ ಯೋಚನೆ ಮಾಡೋಣ” ಎನ್ನಬಹುದು. ಮತ್ತು ನಿರ್ದಿಷ್ಟವಾಗ ಅಲ್ಲಿಯೇ ಆವಿಷ್ಕಾರದ ಅಗತ್ಯವಿರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.