ಬೆಂಗಳೂರು (www.vknews.in) : ಆರ್ಎಸ್ಎಸ್ ಆದಾಯ ಮತ್ತು ನೋಂದಣಿ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಆರ್ಎಸ್ಎಸ್ ಬಗ್ಗೆ ಪ್ರಶ್ನೆ ಕೇಳಿದರೆ ಇವರಿಗೆ ಯಾಕೆ ಉರಿ? ದಲಿತನೊಬ್ಬ ಪ್ರಶ್ನೆ ಮಾಡುತ್ತಿದ್ದಾನೆ ಎಂಬುದೇ ಇವರ ಸಮಸ್ಯೆಯೇ?” ಎಂದು ಪ್ರಶ್ನಿಸಿದರು.
“ನನ್ನನ್ನು ‘ಬಲಿತ ದಲಿತ’ ಎಂದು ಕರೆಯುವವರು ಮೊದಲು ಅಂತಹವರು ಎಷ್ಟು ಜನರಿದ್ದಾರೆ ಎಂಬುದನ್ನು ತೋರಿಸಲಿ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಕಾರಣ ವೈಯಕ್ತಿಕ ಟೀಕೆಗಳಿಗೆ ಇಳಿಯುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧ ಈ ಹಿಂದೆ ನಡೆದ ಟೀಕೆಗಳನ್ನು ಉಲ್ಲೇಖಿಸಿದ ಅವರು, “ನಾನು ಸೂಟ್ ಧರಿಸಿದರೆ ಏನು ತಪ್ಪು? ನಾನು ಕಾರಿನಲ್ಲಿ ಓಡಾಡಬಾರದೇ? ನನ್ನ ಆದಾಯಕ್ಕೆ ತಕ್ಕಂತೆ ಬದುಕುತ್ತಿದ್ದೇನೆ. ಇದರಲ್ಲಿ ಯಾರಿಗೇನು ಸಮಸ್ಯೆ?” ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರಿಂದ ಈ ಹಿಂದೆ ತಮ್ಮ ಬಗ್ಗೆ ಹಾಗೂ ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆಗಳು ನಡೆದಿವೆ ಎಂದು ಆರೋಪಿಸಿದ ಖರ್ಗೆ, ಆರ್ಎಸ್ಎಸ್ ಆದಾಯ ಮತ್ತು ಕಾರ್ಯವೈಖರಿ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಗ್ರಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.