ಬೆಳ್ತಂಗಡಿ (www.vknews.in): ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕುಸಮಿತಿ ವತಿಯಿಂದ 2026 ಜುಲ್ಯಾ ಮಂಗಳವಾರ ಬೆಳಿಗ್ಗೆ 9:30ಕ್ಕೆ ಸರಿಯಾಗಿ ಮೂರುಗೋಳಿ ಮಿಪ್ತಾವುಲ್ ಉಲೂಂ ಮದ್ರಸದಲ್ಲಿ ಪಿಖ್ಹ್ ಸೆಮಿನಾರ್ ಹಾಗೂ ಖುರ್ರತು ಸ್ಸಾದಾತ್ ಕೂರತಂಙಳ್ ರವರ ಅನುಸ್ಮರಣೆ ನಡೆಯಲಿದ್ದು ಸಭೆಯಲ್ಲಿ ಮದನೀಸ್ ತಾಲೂಕು ಸಮಿತಿ ಇದರ ಕಾರ್ಯಕಾರಿಣಿ ಸದಸ್ಯರಾದ ಬಹು ಬದ್ರುದ್ದೀನ್ ತಂಙಳ್ ಪೂಮ್ಮಾಜೆ ತಹ್ಲೀಲ್ ಮಜ್ಲಿಸ್ ಗೆ ನೇತೃತ್ವ ವಹಿಸಲಿದ್ದು ಸಭೆಯ ಅಧ್ಯಕ್ಷತೆ ಯನ್ನು ಮದನೀಸ್ ತಾಲೂಕು ಸಮೀತಿ ಅದ್ಯಕ್ಷರಾದ ಖಲಂದರ್ ಮದನಿ ಕಲ್ಲೇರಿ ವಹಿಸ ಲಿದ್ದಾರೆ
ತಾಲೂಕು ಮದನೀಸ್ ಪ್ರದಾನ ಕಾರ್ಯದರ್ಶಿ ಬಶೀರ್ ಮದನಿ ಜೋಗಿಬೆಟ್ಟು ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಯನ್ನು ಮೂರುಗೋಳಿ ಖತೀಬ್ ಅತಾವುಲ್ಲಾ ಹಿಮಮಿ ಸಖಾಫಿ ನಿರ್ವಹಿಸಲಿದ್ದಾರೆ ಮೂಳೂರು ಅಬ್ದುರ್ರಹ್ಮಾನ್ ಮದನಿ ಇಮಾಂ ಜಮಾಅತ್ ಎಂಬ ವಿಷಯದಲ್ಲಿ ತರಗತಿ ನಡೆಸಲಿದ್ದಾರೆ.
ಸಭೆಯಲ್ಲಿ ಉಪ್ಪಿನಂಗಡಿ ಕುಪ್ಪೆಟಿ ಮೂರುಗೋಳಿ ಸರಳಿಕಟ್ಟೆ ಬೆಳ್ತಂ ಗಡಿ ಮಡಂತ್ಯಾರ್ SJMನಾಯಕರು SJU ನೇತಾರರು ಹಾಗೂ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯ ಮದನಿಗಳು ಹಾಗೂ ಹಿರಿಯ ಮದನಿಗಳು ಸಾದಾತಿಗಳು ಭಾಗವಹಿ ಸಲಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಉಲಾಮಾಗಳು ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಮದನೀಸ್ ತಾಲೂಕುಸಮಿತಿ ಕಾಯ೯ದಶಿ೯ ಬಶೀರ್ ಮದನಿ ಜೋಗಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.