(www.vknews.in) : ಅಜ್ಮೀರ್ ಯಾತ್ರೆ ಮುಗಿಸಿ ಕುಟುಂಬದೊಂದಿಗೆ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವೇಳೆ 68 ವರ್ಷದ ವೃದ್ಧ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಕಾಸರಗೋಡು ಜಿಲ್ಲೆಯ ಪೈವಳಿಗೆ ಪಾಕ್ ನಿವಾಸಿ ಮೂಸಕುಂಜಿ (68) ಎಂಬವರು ಪ್ರಯಾಣದ ಮಧ್ಯೆ ಕಾಣೆಯಾಗಿದ್ದಾರೆ. ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಅಜ್ಮೀರ್ನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 26 ಸದಸ್ಯರ ತಂಡದೊಂದಿಗೆ ಮೂಸಕುಂಜಿಯೂ ಇದ್ದರು.
ಕುಟುಂಬದವರ ಹೇಳಿಕೆಯಂತೆ, ಕಾರವಾರ ರೈಲು ನಿಲ್ದಾಣದವರೆಗೆ ಮೂಸಕುಂಜಿ ಕುಟುಂಬದ ಜೊತೆಗೇ ಇದ್ದರು. ಬಳಿಕ ಅವರು ರೈಲಿನಲ್ಲಿದ್ದಾರೆಯೇ ಎಂಬುದು ಯಾರಿಗೂ ಗಮನಕ್ಕೆ ಬಂದಿಲ್ಲ. ಮಂಗಳೂರು ತಲುಪಿದ ನಂತರ ಅವರನ್ನು ಹುಡುಕಿದಾಗ ಅವರು ಕಾಣಿಸದಿರುವುದು ಬೆಳಕಿಗೆ ಬಂದಿದೆ.
ಮೂಸಕುಂಜಿ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದು, ಸ್ವತಃ ಓಡಾಡಲು ಸಹ ಕಷ್ಟಪಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಯಾಣದ ವೇಳೆ ಹೆಚ್ಚಿನವರು ನಿದ್ರೆಯಲ್ಲಿದ್ದ ಕಾರಣ ಅವರು ಯಾವಾಗ ಮತ್ತು ಎಲ್ಲಿ ರೈಲಿನಿಂದ ಇಳಿದಿರಬಹುದು ಎಂಬುದು ತಿಳಿದಿಲ್ಲ.
ಮಂಗಳೂರು ತಲುಪಿದ ತಕ್ಷಣ ಕುಟುಂಬದವರು ಟಿಟಿಇ ಹಾಗೂ ರೈಲ್ವೆ ರಕ್ಷಣಾ ಪಡೆಯ (RPF) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಉಡುಪಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಕೊನೆಯ ಬಾರಿ ಮೂಸಕುಂಜಿ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾಗಿ ಕುಟುಂಬದವರು ತಿಳಿಸಿದ್ದಾರೆ. ಮೂಸಕುಂಜಿ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ಅವರ ಕುಟುಂಬದವರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ 8714431193, 9746640640
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.