(www.vknews.in) ; ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF) ಅಡಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಬ್ಯೂಟಿ & ವೆಲ್ನೆಸ್, ಅಪ್ಯಾರಲ್ (ಹೊಲಿಗೆ) ಮತ್ತು ರೀಟೇಲ್ ಕೋರ್ಸ್ಗಳ ದಾಖಲಾತಿ ಸ್ಥಗಿತಗೊಳಿಸಿರುವ ನಿರ್ಧಾರವನ್ನು ಹಿಂಪಡೆದು, ವಿದ್ಯಾರ್ಥಿಗಳಿಗೆ ಆಯ್ಕೆಯ ಹಕ್ಕಿನ ಆಧಾರದ ಮೇಲೆ ದಾಖಲಾತಿ ಅವಕಾಶ ಕಲ್ಪಿಸ ಬೇಕಿದೆ.
ಸಮಗ್ರ ಶಿಕ್ಷಣ ಯೋಜನೆಯಡಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF) ಅಡಿಯಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಅದರಲ್ಲೂ Beauty & Wellness, Apparel (Tailoring) ಹಾಗೂ Retail ಕೋರ್ಸ್ಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿವೆ.
ಆದರೆ 2026–27ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ಗಳಿಗೆ ದಾಖಲಾತಿಯನ್ನು ಸ್ಥಗಿತಗೊಳಿಸಿರುವುದು ಶಿಕ್ಷಣದ ಹಕ್ಕು, ಸಮಾನ ಅವಕಾಶ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ವಿರುದ್ಧವಾಗಿದೆ
ಭಾರತದ ಸಂವಿಧಾನದ ಅನುಚ್ಛೇದ 14 – ಕಾನೂನಿನ ಮುಂದೆ ಸಮಾನತೆ ಹಾಗೂ ಸಮಾನ ಅವಕಾಶ. ಅನುಚ್ಛೇದ 21 – ಘನತೆಯಿಂದ ಬದುಕುವ ಹಕ್ಕು; ಶಿಕ್ಷಣ ಮತ್ತು ಜೀವನೋಪಾಯಕ್ಕೆ ಅಗತ್ಯವಾದ ಕೌಶಲ್ಯಗಳ ಅವಕಾಶವೂ ಇದರ ವ್ಯಾಪ್ತಿಗೆ ಬರುತ್ತದೆ ಎಂದು ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟಪಡಿಸಿವೆ. ಅನುಚ್ಛೇದ 21A – ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಭೂತ ಹಕ್ಕು. ಅನುಚ್ಛೇದ 38 – ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶವನ್ನು ಉತ್ತೇಜಿಸುವ ರಾಜ್ಯದ ಕರ್ತವ್ಯ. ಅನುಚ್ಛೇದ 39(f) – ಮಕ್ಕಳ ಅಭಿವೃದ್ಧಿ, ಘನತೆ ಹಾಗೂ ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ. ಅನುಚ್ಛೇದ 41 – ಶಿಕ್ಷಣ ಹಾಗೂ ಉದ್ಯೋಗ ಸಂಬಂಧಿತ ಅವಕಾಶಗಳನ್ನು ಉತ್ತೇಜಿಸುವ ನಿರ್ದೇಶಕ ತತ್ವ. ಅನುಚ್ಛೇದ 46 – ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿಯನ್ನು ರಕ್ಷಿಸುವುದು. ಹಾಗೂ ಶಿಕ್ಷಣದ ಹಕ್ಕು ಕಾಯ್ದೆ, 2009 ಕಲಂ 8 – ರಾಜ್ಯ ಸರ್ಕಾರದ ಕರ್ತವ್ಯ. ಕಲಂ 9 – ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಗುಣಮಟ್ಟದ ಹಾಗೂ ಮಕ್ಕಳ ಅಗತ್ಯಗಳಿಗೆ ಅನುಗುಣವಾದ ಶಿಕ್ಷಣ ಒದಗಿಸುವ ಜವಾಬ್ದಾರಿ.
NEP 2020ರ ಪ್ಯಾರಾ 4.26 ರಿಂದ 4.29ರಲ್ಲಿ ವೃತ್ತಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ಶಿಕ್ಷಣದ ಆಯ್ಕೆಗಳು ದೊರೆಯಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಅದಲ್ಲದೆ NSQFನ ಮೂಲ ಉದ್ದೇಶವೇ Skill-based learning Multiple entry & exit ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾದ ಆಯ್ಕೆ ಸ್ಥಳೀಯ ಉದ್ಯೋಗಕ್ಕೆ ನೆರವಾಗುವ ಕೌಶಲ್ಯ ವನ್ನು ಕೊಡುವುದಾಗಿದೆ ಇವುಗಳಲ್ಲಿ ಎಲ್ಲೂ ಈಗಿರುವ ಕೋರ್ಸ್ಗಳನ್ನು ತೆಗೆದುಹಾಕಬೇಕು ಎಂದು ಹೇಳುವುದಿಲ್ಲ.
ಮಕ್ಕಳ ಹಕ್ಕುಗಳ ವಿಶ್ವಸಂಸ್ಥೆಯ ಒಪ್ಪಂದ (UNCRC)- Article 28 – Right to Education. Article 29 – ಮಗುವಿನ ಪ್ರತಿಭೆ ಹಾಗೂ ಸಾಮರ್ಥ್ಯ ಅಭಿವೃದ್ಧಿಪಡಿಸುವ ಶಿಕ್ಷಣ ಎನ್ನುವುದಾಗಿದೆ
ಆದರೆ ಗ್ರಾಮೀಣ ಭಾಗದ ವಾಸ್ತವತೆ ಹೇಗಿದೆಯೆಂದರೆ ರಾಜ್ಯದ ಅನೇಕ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮೂಲಭೂತ ಕಲಿಕಾ ಸಾಮರ್ಥ್ಯ (FLN) ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ AI ಅಥವಾ ಕಂಪ್ಯೂಟರ್ ಆಧಾರಿತ ಕೋರ್ಸ್ಗಳಲ್ಲಿ ಯಶಸ್ವಿಯಾಗುತ್ತಾರೆ ಎಂದು ನಿರೀಕ್ಷಿಸುವುದು ವಾಸ್ತವಿಕವಲ್ಲ. ಆದರೆ ಹೊಲಿಗೆ, ಬ್ಯೂಟಿ & ವೆಲ್ನೆಸ್ ಹಾಗೂ ರೀಟೇಲ್ ಕ್ಷೇತ್ರಗಳಲ್ಲಿ ಕಡಿಮೆ ಬಂಡವಾಳದಲ್ಲಿ ಸ್ವಯಂ ಉದ್ಯೋಗ ಆರಂಭಿಸುವ ಸಾವಿರಾರು ಅವಕಾಶಗಳಿವೆ. ವಿಶೇಷವಾಗಿ ಗ್ರಾಮೀಣ ಹೆಣ್ಣು ಮಕ್ಕಳಿಗೆ ಈ ಕೋರ್ಸ್ಗಳು ಆರ್ಥಿಕ ಸ್ವಾವಲಂಬನೆಯ ಅತ್ಯುತ್ತಮ ಸಾಧನವಾಗಿವೆ.
ಈ ನಿರ್ಧಾರಕ್ಕೂ ಮೊದಲು ಯಾವ ತಜ್ಞರ ಸಮಿತಿ ವರದಿ ಪಡೆದಿದ್ದೀರಿ? ಯಾವ ಶಾಲೆಗಳಲ್ಲಿ ದಾಖಲಾತಿ ಇರಲಿಲ್ಲ? ಯಾವ ಶಾಲೆಗಳಲ್ಲಿ ದಾಖಲಾತಿ ಉತ್ತಮವಾಗಿದ್ದರೂ ಏಕೆ ಕೋರ್ಸ್ಗಳನ್ನು ನಿಲ್ಲಿಸಲಾಗಿದೆ? SDMC ಹಾಗೂ ಪೋಷಕರ ಅಭಿಪ್ರಾಯ ಪಡೆದಿದ್ದೀರಾ? ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸಿದ್ದೀರಾ?
ದಾಖಲಾತಿ ಸ್ಥಗಿತ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಈ ಶೈಕ್ಷಣಿಕ ವರ್ಷದಲ್ಲಿಯೇ ದಾಖಲಾತಿಯನ್ನು ಪುನರಾರಂಭಿಸಬೇಕು. ವಿದ್ಯಾರ್ಥಿಗಳ ಬೇಡಿಕೆ ಇರುವ ಶಾಲೆಗಳಲ್ಲಿ ಕೋರ್ಸ್ ಮುಂದುವರಿಯಬೇಕು. ಹೊಸ AI ಹಾಗೂ ಕಂಪ್ಯೂಟರ್ ಕೋರ್ಸ್ಗಳನ್ನು ಹೆಚ್ಚುವರಿ ಆಯ್ಕೆಯಾಗಿ ಸೇರಿಸಬೇಕು. ಈಗಿರುವ ಕೋರ್ಸ್ಗಳನ್ನು ರದ್ದುಪಡಿಸಬಾರದು. ವಿದ್ಯಾರ್ಥಿ ಹಾಗೂ ಪೋಷಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು. ಭವಿಷ್ಯದಲ್ಲಿ ಯಾವುದೇ ಕೋರ್ಸ್ ರದ್ದುಪಡಿಸುವ ಮುನ್ನ ಸಾರ್ವಜನಿಕ ಸಮಾಲೋಚನೆ ಕಡ್ಡಾಯಗೊಳಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಷಯವನ್ನು ತುರ್ತಾಗಿ ಮರುಪರಿಶೀಲಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.