ಮುಂಬೈ (www.vknews.in) : ಮಹಾರಾಷ್ಟ್ರದ ಮಾಜಿ ಸಂಸದ ವಿನಾಯಕ್ ರಾವತ್, ಅವರ ಪತ್ನಿ, ಪುತ್ರ ಹಾಗೂ ಇತರರ ವಿರುದ್ಧ ಸೊಸೆಗೆ ದೈಹಿಕ-ಮಾನಸಿಕ ಕಿರುಕುಳ ನೀಡಿದ ಹಾಗೂ ಗೋಮೂತ್ರ ಕುಡಿಯಲು, ವಾಮಾಚಾರ ಆಚರಣೆಗಳಲ್ಲಿ ಭಾಗವಹಿಸಲು ಒತ್ತಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಸೊಸೆ ಗಿರಿಜಾ ರಾವತ್ ನೀಡಿದ ದೂರಿನ ಪ್ರಕಾರ, ಮಧುಚಂದ್ರದ ಸಮಯದಿಂದಲೇ ಪತಿ ಗೀತೇಶ್ ರಾವತ್ ಕ್ರೂರವಾಗಿ ವರ್ತಿಸಿದ್ದು, ಬಳಿಕ ಋತುಚಕ್ರ ಮುಂದೂಡಲು ಬಲವಂತವಾಗಿ ಮಾತ್ರೆಗಳನ್ನು ನೀಡಲಾಗಿದೆ. ಮನೆಗೆ ಸಮೃದ್ಧಿ ತರುವ ನೆಪದಲ್ಲಿ ಗೋಮೂತ್ರ ಕುಡಿಯಲು ಒತ್ತಾಯಿಸಿ, ಕೂದಲನ್ನೂ ಕತ್ತರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಥಾಣೆ ಪೊಲೀಸರು ಮಹಾರಾಷ್ಟ್ರ ಮೂಢನಂಬಿಕೆ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ವಾಮಾಚಾರದಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಲಾದ ಫಿರೋಜ್ ಬಾಬಾ ಮತ್ತು ಕಾಜಿ ಬಾಬಾ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.