ಅಬುಧಾಬಿ (www.vknews.in) : ಸುರಕ್ಷಿತ, ಗೌರವಯುತ ಮತ್ತು ಆರಾಮದಾಯಕ ಪ್ರಯಾಣದ ಉದ್ದೇಶದಿಂದ ಎತಿಹಾದ್ ರೈಲು ತನ್ನ ಪ್ರಯಾಣಿಕರಿಗಾಗಿ ಹೊಸ ನೀತಿ ಸಂಹಿತೆ ಜಾರಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ಪ್ರಯಾಣಿಕರು ಸಭ್ಯ ಹಾಗೂ ಸ್ಥಳೀಯ ಸಂಸ್ಕೃತಿಗೆ ಹೊಂದುವಂತಹ ಉಡುಗೆ ಧರಿಸುವುದು ಕಡ್ಡಾಯವಾಗಿದೆ. ಪಾರದರ್ಶಕ ಅಥವಾ ಅಸಭ್ಯ ಉಡುಪುಗಳು, ಆಕ್ಷೇಪಾರ್ಹ ಚಿತ್ರಗಳು ಅಥವಾ ಘೋಷಣೆಗಳಿರುವ ಬಟ್ಟೆಗಳನ್ನು ಧರಿಸಲು ಅವಕಾಶ ಇರುವುದಿಲ್ಲ.
ಇದಲ್ಲದೆ, ರೈಲು ಹಾಗೂ ನಿಲ್ದಾಣಗಳಲ್ಲಿ ಧೂಮಪಾನ, ಅಸಭ್ಯ ವರ್ತನೆ, ಇತರರಿಗೆ ತೊಂದರೆ ಉಂಟುಮಾಡುವ ಶಬ್ದ, ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅನುಮತಿಯಿಲ್ಲದ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು ಪ್ರಯಾಣಿಸದಂತೆ ಸೂಚಿಸಲಾಗಿದೆ.
ಮೊಬೈಲ್, ಟ್ಯಾಬ್ಲೆಟ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಹೆಡ್ಫೋನ್ ಬಳಸಬೇಕು ಹಾಗೂ ಇತರರಿಗೆ ತೊಂದರೆಯಾಗದ ಮಟ್ಟದಲ್ಲಿ ಮಾತ್ರ ಧ್ವನಿ ಇರಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಯುಎಇ ಕಾನೂನಿನಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎತಿಹಾದ್ ರೈಲು ಎಚ್ಚರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.