ಲಖನೌ (www.vknews.in): ಉತ್ತರ ಪ್ರದೇಶದ ಹಾಪುರ್ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಸೀಲ್ ಮಾಡಲಾಗಿದ್ದ ನೀರಿನ ಬಾಟಲಿಯಲ್ಲಿ ಆಸಿಡ್ ಇದ್ದ ಕಾರಣ ಅದನ್ನು ನೀರೆಂದು ಭಾವಿಸಿ ಕುಡಿದ ಮಹಿಳೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜುಲೈ 10ರಂದು ಸಂಜೆ ಈ ಘಟನೆ ನಡೆದಿದ್ದು, ಮಹಿಳೆ ತನ್ನ ತಾಯಿಯೊಂದಿಗೆ ಚಿನ್ನ ಖರೀದಿಸಲು ಆಭರಣ ಅಂಗಡಿಗೆ ಬಂದಿದ್ದರು. ಈ ವೇಳೆ ಬಾಯಾರಿಕೆಯಾದ ಕಾರಣ ನೀರು ಕೇಳಿದ್ದು, ಅಂಗಡಿ ಮಾಲೀಕರು ಸಮೀಪದ ಅಂಗಡಿಯಿಂದ ಸೀಲ್ ಮಾಡಲಾದ ನೀರಿನ ಬಾಟಲಿಯನ್ನು ಖರೀದಿಸಿ ನೀಡಿದ್ದಾರೆ.
ಮಹಿಳೆ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ತೀವ್ರ ಅಸ್ವಸ್ಥಗೊಂಡು ಹೊರಗೆ ಓಡಿ ಬಂದು ಉಗುಳಲು ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆಭರಣ ಅಂಗಡಿ ಮಾಲೀಕರ ಪ್ರಕಾರ, ಬಾಟಲಿಯನ್ನು ಫ್ರಿಡ್ಜ್ನಿಂದ ತೆಗೆದು ಯಾವುದೇ ಅನುಮಾನವಿಲ್ಲದೆ ಮಹಿಳೆಗೆ ನೀಡಲಾಗಿತ್ತು. ಬಾಟಲಿ ಸಂಪೂರ್ಣವಾಗಿ ಸೀಲ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನೀರಿನ ಬಾಟಲಿ ಮಾರಾಟ ಮಾಡಿದ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೀಲ್ ಮಾಡಲಾದ ಬಾಟಲಿಯೊಳಗೆ ಆಸಿಡ್ ಹೇಗೆ ಸೇರಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.